Site icon Vistara News

Amit shah in Karavali : ಅಮಿತ್‌ ಶಾ ಕೂಡಾ ಕಾಂತಾರ ಸಿನಿಮಾ ನೋಡಿದ್ದಾರಂತೆ! ಅವರು ಕಾಂತಾರ ಕತೆ ಹೇಳಿದ್ಯಾಕೆ?

Kantara amit shah

#image_title

ಪುತ್ತೂರು: ರಿಷಭ್‌ ಶೆಟ್ಟಿ ನಿರ್ದೇಶನದ ಕಾಂತಾರ ಸಿನಿಮಾವನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit shah in Karavali) ಕೂಡಾ ನೋಡಿದ್ದಾರಂತೆ. ಇಡೀ ಜಗತ್ತಿನೆಲ್ಲೆಡೆ ಸದ್ದು ಮಾಡಿದ ಈ ಸಿನಿಮಾವನ್ನು ಮೊನ್ನೆ ಮೊನ್ನೆಯಷ್ಟೇ ಬಿಡುವು ಮಾಡಿಕೊಂಡು ನೋಡಿದರಂತೆ ಕೇಂದ್ರ ಗೃಹ ಸಚಿವರು.

ಅವರು ಈ ವಿಷಯವನ್ನು ತುಂಬಾ ಖುಷಿಯಿಂದ ನಗು ನಗುತ್ತಾ ಹೇಳಿಕೊಂಡರು. ಹಾಗಿದ್ದರೆ ಹೇಳಿದ್ದೆಲ್ಲಿ? ಯಾಕೆ ಹೇಳಿದರು.

ಅಮಿತ್‌ ಶಾ ಅವರು ಶನಿವಾರ ಕರಾವಳಿಯಲ್ಲಿ ಓಡಾಟದಲ್ಲಿದ್ದಾರೆ. ಕೇರಳದ ಕಣ್ಣೂರಿನಿಂದ ಪುತ್ತೂರಿಗೆ ಹೆಲಿಕಾಪ್ಟರ್‌ಗೆ ಬಂದ ಅವರು ಮೊದಲು ಈಶ್ವರಮಂಗಲದ ಹನುಮಗಿರಿ ದೇವಸ್ಥಾನಕ್ಕೆ ಹೋದರು. ಅಲ್ಲಿ ಆಂಜನೇಯನ ದರ್ಶನ ಪಡೆದು ಪಕ್ಕದಲ್ಲೇ ಇರುವ ಅಮರಗಿರಿಯಲ್ಲಿ ದಕ್ಷಿಣ ಭಾರತದ ಎರಡನೇ ಭಾರತ್‌ ಮಾತಾ ಮಂದಿರವನ್ನು ಲೋಕಾರ್ಪಣೆ ಮಾಡಿದರು.

ಅಲ್ಲಿಂದ ಅವರು ಬಂದಿದ್ದು ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಸಂಭ್ರಮದಲ್ಲಿ ಭಾಗವಹಿಸುವುದಕ್ಕಾಗಿ. ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅವರು ಕರಾವಳಿಯ ಸಾಂಸ್ಕೃತಿಕ ವೈಭವ ಮತ್ತು ಭಕ್ತಿಭಾವವನ್ನು ನೆನಪಿಸಿಕೊಂಡರು.

ಕಾಂತಾರದ ಬಗ್ಗೆ ಅಮಿತ್‌ ಶಾ ಹೇಳಿದ್ದೇನು?

ನಾನು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಧಾರ್ಮಿಕ ಪರಂಪರೆ, ಸಾಂಸ್ಕೃತಿಕ ಪರಂಪರೆಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ. ಇತ್ತೀಚೆಗಷ್ಟೇ ನಾನು ಕಾಂತಾರ ಸಿನಿಮಾ ನೋಡಿದ್ದೇನೆ. ಕಾಂತಾರ ಸಿನಿಮಾವನ್ನು ನೋಡಿದ ಬಳಿಕ ನನಗೆ ಇಲ್ಲಿನ ಹಲವು ವಿಷಯಗಳು ಅರ್ಥವಾಗಿವೆ. ಈ ಭಾಗದ ಸಾಂಸ್ಕೃತಿಕ ಪರಂಪರೆ ಎಷ್ಟು ಶ್ರೀಮಂತವಾಗಿದೆ ಎನ್ನುವುದು ಸಿನಿಮಾ ನೋಡಿದ ಮೇಲೆ ನನಗೆ ಅರ್ಥವಾಯಿತು ಎಂದು ಹೇಳಿದರು ಅಮಿತ್‌ ಶಾ.

ಜಗತ್ತಿನಾದ್ಯಂತ ಸುದ್ದಿ ಮಾಡಿರುವ ಕಾಂತಾರ ಸಿನಿಮಾ ಕರಾವಳಿ ಭಾಗದ ದೈವಾರಾಧನೆ, ಪ್ರಕೃತಿ ಮತ್ತು ಮನುಷ್ಯ ನಡುವಿನ ಸಂಬಂಧವನ್ನು ಅದ್ಭುತವಾಗಿ ತೆರೆಟ್ಟಿದೆ.

ಇದನ್ನೂ ಓದಿ : Amit Shah in Karavali : ಅಮರಗಿರಿ ಶ್ರೀ ಭಾರತ್‌ ಮಾತಾ ದೇಗುಲ ಲೋಕಾರ್ಪಣೆ ಮಾಡಿದ ಅಮಿತ್‌ ಶಾ

ಇದನ್ನೂ ಓದಿ : Kantara Movie: ಕಾಂತಾರ ಕಥೆ ಹುಟ್ಟಿದ್ದು ಹೇಗೆ? ಪ್ಯಾನ್‌ ಇಂಡಿಯಾ ಸಿನಿಮಾ ಯಾಕಾಯ್ತು? ಮಾಹಿತಿ ಬಿಚ್ಚಿಟ್ಟ ರಿಷಬ್‌

Exit mobile version