Site icon Vistara News

Kantara Movie | ಥಿಯೇಟರ್‌ನಲ್ಲಿ ಕಾಂತಾರ ಸಿನಿಮಾ ನೋಡುವಾಗಲೇ ʼಮೈ ಮೇಲೆ ಬಂದ ದೇವರುʼ!

kantara movie

ಕೋಲಾರ: ಕಾಂತಾರ ಸಿನಿಮಾ (Kantara Movie) ವೀಕ್ಷಿಸುತ್ತಿರುವಾಗಲೇ ದೇವರು ಬಂದಂತೆ ಮಹಿಳೆಯೊಬ್ಬರು ವರ್ತಿಸಿರುವ ಘಟನೆ ನಡೆದಿದೆ. ಇಲ್ಲಿನ ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿಯಲ್ಲಿರುವ ರಂಗಮಹಲ್ ಥಿಯೇಟರ್‌ನಲ್ಲಿ ಕಾಂತಾರ ಚಿತ್ರವನ್ನು ನೋಡಲು ಮಹಿಳೆ ಬಂದಿದ್ದರು.

ಕ್ಲೈಮ್ಯಾಕ್ಸ್‌ನಲ್ಲಿ ನಟ ರಿಷಬ್ ಶೆಟ್ಟಿ ಮೈಮೇಲೆ ದೈವಾಗಮನ ಸನ್ನಿವೇಶ ಬರುತ್ತಿದ್ದಂತೆ, ಇತ್ತ ಮಹಿಳೆ ಸಿನಿಮಾ ನೋಡುವುದರಲ್ಲಿ ತಲೀನರಾಗಿದ್ದು, ದಿಢೀರ್‌ ಎದ್ದು ಕಿರುಚಾಡಿದ್ದಾರೆ. ಮಹಿಳೆಯ ವಿಚಿತ್ರ ವರ್ತನೆಗೆ ಅಕ್ಕ ಪಕ್ಕದ ಪ್ರೇಕ್ಷಕರು ಬೆದರಿದ್ದಾರೆ.

ಕೂಡಲೇ ಸಿನಿಮಾವನ್ನು ನಿಲ್ಲಿಸಿ, ಆಕೆ ಸುಧಾರಿಸಿಕೊಳ್ಳಲೆಂದು ನೀರು ಕೊಟ್ಟು ಬಳಿಕ ಮಹಿಳೆಯನ್ನು ಥಿಯೇಟರ್‌ನಿಂದ ಹೊರ ಕಳಿಸಿದ್ದಾರೆ. ಆ ನಂತರ ಸಿನಿಮಾದ ಉಳಿದ ಚಿತ್ರವನ್ನು ಸಾರ್ವಜನಿಕರು ವೀಕ್ಷಿಸಿದರು. ಆಂಧ್ರದ ಗಡಿಯಲ್ಲಿರುವ ರಂಗಮಹಲ್ ಥಿಯೇಟರ್‌ನಲ್ಲಿ ಯಶಸ್ವಿಯಾಗಿ ಕಾಂತಾರ ಚಿತ್ರ ಮುನ್ನುಗುತ್ತಿದೆ.

ಇದನ್ನೂ ಓದಿ | Kantara Movie | ಸೂಪರ್‌ಸ್ಟಾರ್‌ ರಜನಿಕಾಂತ್‌ ಭೇಟಿ ಮಾಡಿದ ಕಾಂತಾರ ನಿರ್ದೇಶಕ ರಿಷಬ್‌ ಶೆಟ್ಟಿ

Exit mobile version