ಕಾರಟಗಿ: ವಿಧಾನಸಭಾ ಚುನಾವಣೆ (Karnataka election 2023) ಹಿನ್ನೆಲೆಯಲ್ಲಿ ಕನಕಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾರಟಗಿ ಪಟ್ಟಣ ಹಾಗೂ ಮರ್ಲಾನಹಳ್ಳಿ, ಸಿದ್ದಾಪುರ ಗ್ರಾಮ ಪಂಚಾಯಿತಿಯ ಮತಗಟ್ಟೆಗಳನ್ನು (Polling booths) ಚುನಾವಣಾ ವೀಕ್ಷಕ ಸ್ವಪ್ನಿಲ್ ಎಂ. ನಾಯ್ಕ್ ವೀಕ್ಷಿಸಿ, ಪರಿಶೀಲಿಸಿದರು.
ಮತಗಟ್ಟೆಗಳ ಪರಿಶೀಲನೆ
ಕಾರಟಗಿ ಪಟ್ಟಣದ ಸ.ಹಿ.ಪ್ರಾ. ಶಾಲೆ, ಕರ್ನಾಟಕ ಪಬ್ಲಿಕ್ ಸ್ಕೂಲ್, ಪುರಸಭಾ ಕಾರ್ಯಾಲಯ ಕಟ್ಟಡ, ರೈತ ಸಂಪರ್ಕ ಕೇಂದ್ರ, ಮರ್ಲಾನಹಳ್ಳಿ ಸ.ಹಿ.ಪ್ರಾ. ಶಾಲೆ, ಗ್ರಾ.ಪಂ ಕಟ್ಟಡ, ಸಿದ್ದಾಪುರ ಗ್ರಾ.ಪಂ ಕಟ್ಟಡ, ಗ್ರಂಥಾಲಯ ಕಟ್ಟಡ, ಸ.ಹಿ.ಪ್ರಾ. ಶಾಲೆ ಮತಗಟ್ಟೆಗಳನ್ನು ಪರಿಶೀಲನೆ ಮಾಡಿದರು.
ಇದನ್ನೂ ಓದಿ: 2nd PUC Exam: ಮೇ 22 ರಿಂದ ಜೂನ್ 2ರವರೆಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ
ಚೆಕ್‌ಪೋಸ್ಟ್‌ಗೆ ಭೇಟಿ
ಚನ್ನಳ್ಳಿ ಕ್ರಾಸ್ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿದ ಚುನಾವಣಾ ವೀಕ್ಷಕ ಸ್ವಪ್ನಿಲ್ ಎಂ. ನಾಯ್ಕ್, ಚುನಾವಣೆ ಸಮೀಪಿಸುತ್ತಿದ್ದು ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ಬಂದೋಬಸ್ತ್ ಕೈಗೊಂಡು, ಬರುವ ಪ್ರತಿ ವಾಹನ ಮತ್ತು ಪ್ರಯಾಣಿಕರ ಲಗೇಜ್‌ಗಳನ್ನು ಕಟ್ಟುನಿಟ್ಟಾಗಿ ಚೆಕ್ ಮಾಡಿ ಬಿಡುವಂತೆ ಚೆಕ್‌ಪೋಸ್ಟ್ ಅಧಿಕಾರಿಗಳಿಗೆ ತಿಳಿಸಿದರು.
ಇದನ್ನೂ ಓದಿ: Karnataka Election: ಸುದೀಪ್ ಬಂದಿಲ್ಲ, ಬಿಜೆಪಿಗೆ ವೋಟ್ ಹಾಕಲ್ಲ: ಇದು ಬಾಗಲಕೋಟೆ ಅಜ್ಜಿಯ ವರಾತ
ಈ ಸಂದರ್ಭದಲ್ಲಿ ಚುನಾವಣಾ ಸಾಮಾನ್ಯ ವೀಕ್ಷಕರ ಸಂಪರ್ಕ ಅಧಿಕಾರಿ ವೈ.ಎ.ಕಾಳೆ, ಕಾರಟಗಿ ತಹಸೀಲ್ದಾರ್ ಎಂ. ಬಸವರಾಜ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ನರಸಪ್ಪ ಎನ್. ಪುರಸಭೆ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ, ಕಂದಾಯ ಇಲಾಖೆಯ ಅಧಿಕಾರಿಗಳು, ಪುರಸಭೆ ಸಿಬ್ಬಂದಿ, ಸೇರಿ ಟಿಐಇಸಿ ಸಂಯೋಜಕರು, ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.