Site icon Vistara News

Karnataka Bandh: 44 ವಿಮಾನ ಹಾರಾಟ ರದ್ದು, ಪ್ರಯಾಣಿಕರಂತೆ ಬಂದು ಪ್ರತಿಭಟಿಸಲು ಯತ್ನಿಸಿದವರ ಬಂಧನ

kempegowda international airport

ಬೆಂಗಳೂರು: ಕಾವೇರಿ ಪ್ರತಿಭಟನೆಯ (Cauvery protest) ಕಾರಣ ಇಂದು ಕರ್ನಾಟಕ ಬಂದ್ (Karnataka Bandh) ಹಿನ್ನೆಲೆಯಲ್ಲಿ, ಬೆಂಗಳೂರಿಗೆ ಆಗಮಿಸುವ ಮತ್ತು ನಿರ್ಗಮಿಸುವ ಹಲವು ವಿಮಾನಗಳನ್ನು (Flights Cancel) ರದ್ದುಗೊಳಿಸಲಾಗಿದೆ.

ವಿವಿಧ ರಾಜ್ಯಗಳಿಂದ ಆಗಮಿಸಬೇಕಿದ್ದ 44 ವಿಮಾನಗಳು ರದ್ದುಗೊಂಡಿವೆ. ದೆಹಲಿ, ಮುಂಬೈ, ಕೋಲ್ಕತ್ತಾ, ಮಂಗಳೂರು ಸೇರಿದಂತೆ ಹಲವು ವಿಮಾನಗಳ ಹಾರಾಟ ನಿಲ್ಲಿಸಲಾಗಿದೆ. ಬೆಂಗಳೂರಿಗೆ ಆಗಮಿಸಬೇಕಿದ್ದ 22 ಹಾಗೂ ಬೆಂಗಳೂರಿನಿಂದ ನಿರ್ಗಮಿಸಬೇಕಿದ್ದ 22 ವಿಮಾನಗಳನ್ನು ನಿಲ್ಲಿಸಲಾಗಿದೆ.

ಪ್ರಯಾಣಿಕರಿಲ್ಲದ ಕಾರಣ 44 ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಬಂದ್ ಹಿನ್ನೆಲೆಯಲ್ಲಿ ಬೆಂಗಳೂರಿನತ್ತ ಪ್ರಯಾಣಿಕರು ಮುಖ ಮಾಡಲಿಲ್ಲ. ಕೆಂಪೇಗೌಡ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣ (kempegowda international airport) ಖಾಲಿ ಖಾಲಿಯಾಗಿದೆ.

ಪ್ರತಿಭಟನಾಕಾರರ ಬಂಧನ

ದೇವನಹಳ್ಳಿ ಏರ್‌ಪೋರ್ಟ್‌ನಲ್ಲಿ ನಿಲ್ದಾಣದ ಒಳಗೆ ಪ್ರಯಾಣಿಕರ ಸೋಗಿನಲ್ಲಿ ಬಂದು ಪ್ರತಿಭಟನೆ ನಡೆಸಲು ಮುಂದಾದವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಮರಳಿ ಕಳಿಸಿದರು. ಐದು ಜನ ವಿಮಾನ ಟಿಕೆಟ್ ಬುಕ್ ಮಾಡಿಕೊಂಡು ಏರ್ಪೋಟ್ ಒಳಗಡೆ ಪ್ರವೇಶಿಸಿದ್ದರು.

ನಮ್ಮ ಕರ್ನಾಟಕ ಸೇನೆಯ ಐವರು ಕಾರ್ಯಕರ್ತರು ಫ್ಲೈಟ್ ಬಳಿ ಪ್ರತಿಭಟನೆ ನಡೆಸಲು ಸಜ್ಜಾಗಿ ಬಂದಿದ್ದರು. ಆದರೆ ಕೊನೆ ಕ್ಷಣದಲ್ಲಿ ಒಳಗಡೆ ಇದ್ದ ಐದು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. 09:50ರ ಇಂಡಿಗೋ 7731 ವಿಮಾನದ ಟಿಕೆಟ್‌ಗಳನ್ನು ಐವರು ಬುಕ್ ಮಾಡಿದ್ದರು‌. ಏರ್ಪೋರ್ಟ್‌ ಒಳಗಡೆ ಇವರನ್ನು ವಶಕ್ಕೆ ಪಡೆದು ತನಿಖೆ ನಡೆಸಿ, ಟಿಕೆಟ್‌ಗಳನ್ನು ರದ್ದುಪಡಿಸಿ ವಾಪಸ್‌ ಕಳಿಸಸಲಾಯಿತು.

ಇದನ್ನೂ ಓದಿ: Karnataka Bandh: ಏರ್‌ಪೋರ್ಟ್‌ಗೆ ಮುತ್ತಿಗೆ ಯತ್ನ, ಕರವೇ ಕಾರ್ಯಕರ್ತರ ಬಂಧನ

Exit mobile version