Site icon Vistara News

Karnataka Bandh LIVE Updates: ಸುಪ್ರೀಂ ಕೋರ್ಟ್, ಕಾವೇರಿ ಪ್ರಾಧಿಕಾರದ ಮುಂದೆ ರಿವಿಶನ್ ಪಿಟಿಷನ್ ಎಂದ ಸಿಎಂ

karnataka bandh

ಬೆಂಗಳೂರು: ಸೆಪ್ಟೆಂಬರ್ 29, ಶುಕ್ರವಾರ ಕರ್ನಾಟಕ ಬಂದ್ (Karnataka Bandh LIVE Updates) ಆಚರಿಸಲಾಗುತ್ತಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ವಿವಿಧ ಕನ್ನಡ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಇದರ ನಡುವೆಯೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ) (CWMA) ಶುಕ್ರವಾರ ಸಭೆಯಲ್ಲೂ ರಾಜ್ಯಕ್ಕೆ ಹಿನ್ನಡೆಯಾಗಿದೆ. ಅ. 15ರವರೆಗೆ ತಮಿಳುನಾಡಿಗೆ ಪ್ರತಿ ದಿನವೂ 3000 ಕ್ಯೂಸೆಕ್‌ ನೀರು ಬಿಡಬೇಕು ಎಂಬ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಆದೇಶವನ್ನು ಪ್ರಾಧಿಕಾರ ಎತ್ತಿ ಹಿಡಿದಿದೆ. ಈಗ ತಮಿಳುನಾಡಿಗೆ 3000 ಕ್ಯೂಸೆಕ್ ನೀರು ಬಿಡುಗಡೆ ಮಾಡಲು ಸಿಡಬ್ಲ್ಯುಎಂಎ ಆದೇಶಿಸಿರುವ ಕ್ರಮವನ್ನು ಪ್ರಶ್ನಿಸಿ ರಿವಿಶನ್ ಪಿಟಿಷನ್ ಸಲ್ಲಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅಲ್ಲದೆ, ಸುಪ್ರೀಂ ಕೋರ್ಟ್‌ನಲ್ಲಿಯೂ ಅರ್ಜಿ ಸಲ್ಲಿಸುವುದಾಗಿ ಹೇಳಿದ್ದಾರೆ. ಕರ್ನಾಟಕ ಬಂದ್ ಕ್ಷಣ ಕ್ಷಣ ಸುದ್ದಿಗಳಿಗಾಗಿ ವಿಸ್ತಾರ ನ್ಯೂಸ್ ಜಾಲತಾಣಕ್ಕೆ ಭೇಟಿ ನೀಡಿ(Karnataka Live News).

Prabhakar R

ಬರೋಬ್ಬರಿ 100 ಬಾರಿ ಟ್ರಾಫಿಕ್‌ ರೂಲ್ಸ್‌ ಉಲ್ಲಂಘಿಸಿದ ಸವಾರನಿಗೆ ಬಿತ್ತು ಭಾರಿ ದಂಡ!

ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಕಡಿಮೆ ಮಾಡಲು ಸಂಚಾರ ಪೊಲೀಸ್‌ ವಿಭಾಗ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು, ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. ಇನ್ನು ಒಂದೆರಡು ಬಾರಿ ಸಂಚಾರ ನಿಯಮ ಉಲ್ಲಂಘಿಸಿ ದಂಡ ಕಟ್ಟುವವರನ್ನು ಎಲ್ಲೆಡೆ ಕಾಣುತ್ತೇವೆ. ಆದರೆ, ಇಲ್ಲೊಬ್ಬ ಮಹಾಶಯ ಬರೋಬ್ಬರಿ 100 ಬಾರಿ ಟ್ರಾಫಿಕ್‌ ರೂಲ್ಸ್‌ ಉಲ್ಲಂಘಿಸಿರುವುದು ಬೆಂಗಳೂರಿನಲ್ಲಿ ಕಂಡುಬಂದಿದ್ದು, ಆತನ ಮೇಲೆ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ, ಭಾರಿ ಮೊತ್ತದ ದಂಡ ವಿಧಿಸಿದ್ದಾರೆ.

Traffic Fine: ಬರೋಬ್ಬರಿ 100 ಬಾರಿ ಟ್ರಾಫಿಕ್‌ ರೂಲ್ಸ್‌ ಉಲ್ಲಂಘಿಸಿದ ಸವಾರನಿಗೆ ಬಿತ್ತು ಭಾರಿ ದಂಡ!
Adarsha Anche

Cauvery water dispute : ಸುಪ್ರೀಂ ಕೋರ್ಟ್, ಕಾವೇರಿ ಪ್ರಾಧಿಕಾರದ ಮುಂದೆ ರಿವಿಶನ್ ಪಿಟಿಷನ್ ಎಂದ ಸಿಎಂ

ತಮಿಳುನಾಡಿಗೆ 3000 ಕ್ಯೂಸೆಕ್ ನೀರು ಬಿಡುಗಡೆ ಮಾಡಲು ಕಾವೇರಿ ನೀರು ನಿರ್ವಹಣೆ ಪ್ರಾಧಿಕಾರವು (CWMA) ಆದೇಶಿಸಿರುವ ಕ್ರಮವನ್ನು ಪ್ರಶ್ನಿಸಿ ರಿವಿಶನ್ ಪಿಟಿಷನ್ ಸಲ್ಲಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅಲ್ಲದೆ, ಸುಪ್ರೀಂ ಕೋರ್ಟ್‌ನಲ್ಲಿಯೂ ಅರ್ಜಿ ಸಲ್ಲಿಸುವುದಾಗಿ ಹೇಳಿದ್ದಾರೆ.

Cauvery water dispute : ಸುಪ್ರೀಂ ಕೋರ್ಟ್, ಕಾವೇರಿ ಪ್ರಾಧಿಕಾರದ ಮುಂದೆ ರಿವಿಶನ್ ಪಿಟಿಷನ್ ಎಂದ ಸಿಎಂ
Deepa S

ವಾರಾಂತ್ಯದಲ್ಲಿ ಭಾರಿ ಮಳೆ; ಯಾವ ಜಿಲ್ಲೆಗಳಿಗೆ ಆರೆಂಜ್‌, ಯೆಲ್ಲೋ ಅಲರ್ಟ್‌

ನೈರುತ್ಯ ಮುಂಗಾರು ಪ್ರತ್ಯೇಕ ಕಡೆಗಳಲ್ಲಿ (karnataka weather forecast) ಚುರುಕುಗೊಂಡಿದೆ. ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ (Rain News ) ಮುನ್ಸೂಚನೆಯನ್ನು ಹವಾಮಾನ ಇಲಾಖೆ (weather report) ನೀಡಿದೆ.

https://vistaranews.com/weather/karnataka-weather-forecast-heavy-rain-over-the-weekend-orange-yellow-alert-issued-for-which-districts/467237.html

Deepa S

ರಾಜ್ಯಾದ್ಯಂತ ಕಾವೇರಿ ಕಿಚ್ಚು ಹೇಗಿತ್ತು? ಇಲ್ಲಿದೆ ಫೋಟೊ ಝಲಕ್‌

ಕಾವೇರಿ ನದಿ (Cauvery Dispute) ನೀರನ್ನು ತಮಿಳುನಾಡಿಗೆ ಬಿಡುತ್ತಿರುವುದನ್ನು ಖಂಡಿಸಿ ರಾಜ್ಯಾದ್ಯಂತ ಕನ್ನಡ ಸಂಘಟನೆಗಳು ನೀಡಿದ ಕರ್ನಾಟಕ ಬಂದ್‌ಗೆ (Karnataka Bandh) ಉತ್ತಮ ಬೆಂಬಲ ವ್ಯಕ್ತವಾಗಿದೆ. ಕನ್ನಡ ಸಂಘಟನೆಗಳ ಕಾರ್ಯಕರ್ತರು, ಸಾರ್ವಜನಿಕರು ರಸ್ತೆ ತಡೆ ನಡೆಸಿ, ರಾಜಕೀಯ ನಾಯಕರ ಪ್ರತಿಕೃತಿ ದಹಿಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಿನ್ನ-ವಿಭಿನ್ನ ರೀತಿಯಲ್ಲಿ ತಮ್ಮ ಆಕ್ರೋಶವನ್ನು ತೋರಿದ್ದಾರೆ. ಎಲ್ಲಿಲ್ಲಿ ಹೇಗಿತ್ತು ಪ್ರತಿಭಟನೆ ಸ್ವರೂಪ ಇಲ್ಲಿದೆ ನೋಡಿ ಚಿತ್ರಗಳು..

https://vistaranews.com/karnataka/karnataka-bandh-how-was-the-cauvery-fire-across-the-state-heres-the-photo/467181.html

Adarsha Anche

Cauvery Water Dispute : ರಾಜ್ಯ ಸರ್ಕಾರಕ್ಕೆ ರೈತರು, ಕಾನೂನು ತಜ್ಞರು ಈಗ ನೆನಪಾದರೇ? ಬಸವರಾಜ ಖಡಕ್‌ ಪ್ರಶ್ನೆ

ಪ್ರಾಮಾಣಿಕವಾಗಿ ಕಾನೂನು ಹೋರಾಟ ಮಾಡಿ, ರಾಜ್ಯದ ವಿರುದ್ಧ ಆದೇಶ ಬರದಂತೆ ನೋಡಿಕೊಳ್ಳಲಿ ಎಂದು ರಾಜ್ಯ ಸರ್ಕಾರಕ್ಕೆ ಬಸವರಾಜ ಬೊಮ್ಮಾಯಿ ಕಿವಿಮಾತು ಹೇಳಿದ್ದಾರೆ.

Cauvery Water Dispute : ರಾಜ್ಯ ಸರ್ಕಾರಕ್ಕೆ ರೈತರು, ಕಾನೂನು ತಜ್ಞರು ಈಗ ನೆನಪಾದರೇ? ಬೊಮ್ಮಾಯಿ ಖಡಕ್‌ ಪ್ರಶ್ನೆ
Exit mobile version