Site icon Vistara News

Karnataka Bandh LIVE Updates: ಸುಪ್ರೀಂ ಕೋರ್ಟ್, ಕಾವೇರಿ ಪ್ರಾಧಿಕಾರದ ಮುಂದೆ ರಿವಿಶನ್ ಪಿಟಿಷನ್ ಎಂದ ಸಿಎಂ

karnataka bandh

ಬೆಂಗಳೂರು: ಸೆಪ್ಟೆಂಬರ್ 29, ಶುಕ್ರವಾರ ಕರ್ನಾಟಕ ಬಂದ್ (Karnataka Bandh LIVE Updates) ಆಚರಿಸಲಾಗುತ್ತಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ವಿವಿಧ ಕನ್ನಡ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಇದರ ನಡುವೆಯೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ) (CWMA) ಶುಕ್ರವಾರ ಸಭೆಯಲ್ಲೂ ರಾಜ್ಯಕ್ಕೆ ಹಿನ್ನಡೆಯಾಗಿದೆ. ಅ. 15ರವರೆಗೆ ತಮಿಳುನಾಡಿಗೆ ಪ್ರತಿ ದಿನವೂ 3000 ಕ್ಯೂಸೆಕ್‌ ನೀರು ಬಿಡಬೇಕು ಎಂಬ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಆದೇಶವನ್ನು ಪ್ರಾಧಿಕಾರ ಎತ್ತಿ ಹಿಡಿದಿದೆ. ಈಗ ತಮಿಳುನಾಡಿಗೆ 3000 ಕ್ಯೂಸೆಕ್ ನೀರು ಬಿಡುಗಡೆ ಮಾಡಲು ಸಿಡಬ್ಲ್ಯುಎಂಎ ಆದೇಶಿಸಿರುವ ಕ್ರಮವನ್ನು ಪ್ರಶ್ನಿಸಿ ರಿವಿಶನ್ ಪಿಟಿಷನ್ ಸಲ್ಲಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅಲ್ಲದೆ, ಸುಪ್ರೀಂ ಕೋರ್ಟ್‌ನಲ್ಲಿಯೂ ಅರ್ಜಿ ಸಲ್ಲಿಸುವುದಾಗಿ ಹೇಳಿದ್ದಾರೆ. ಕರ್ನಾಟಕ ಬಂದ್ ಕ್ಷಣ ಕ್ಷಣ ಸುದ್ದಿಗಳಿಗಾಗಿ ವಿಸ್ತಾರ ನ್ಯೂಸ್ ಜಾಲತಾಣಕ್ಕೆ ಭೇಟಿ ನೀಡಿ(Karnataka Live News).

Adarsha Anche

Karnataka Bandh : ಕಾವೇರಿದ ಕಾವೇರಿ ವಿವಾದ; ನಿರ್ಲಕ್ಷ್ಯಕ್ಕೆ ಕಿಡಿ ಕಿಡಿ, ಸರ್ಕಾರದ ವಿರುದ್ಧ ಮುಗಿಬಿದ್ದ ಬಿಜೆಪಿ

ಕಾವೇರಿ ಜಲ ವಿವಾದವನ್ನು ಬಗೆಹರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಸಂಸದ ತೇಜಸ್ವಿ ಸೂರ್ಯ ಕಿಡಿಕಾರಿದ್ದಾರೆ. ಅಲ್ಲದೆ, ತಮಿಳುನಾಡು ಸಿಎಂ ಜತೆ ಸಿಎಂ ಸಿದ್ದರಾಮಯ್ಯ ಹೋಗಿ ಮಾತನಾಡಲಿ ಎಂದು ಆಗ್ರಹಿಸಿದ್ದಾರೆ.

Karnataka Bandh : ಕಾವೇರಿದ ಕಾವೇರಿ ವಿವಾದ; ನಿರ್ಲಕ್ಷ್ಯಕ್ಕೆ ಕಿಡಿ ಕಿಡಿ, ಸರ್ಕಾರದ ವಿರುದ್ಧ ಮುಗಿಬಿದ್ದ ಬಿಜೆಪಿ
Deepa S

ಬಂದ್ ನಡುವೆ ಯುವ ರಾಜ್‌ಕುಮಾರ್‌ ಸಿನಿಮಾ ಶೂಟಿಂಗ್‌; ಸೆಟ್‌ಗೆ ನುಗ್ಗಿದ ಹೋರಾಟಗಾರರು

Cauvery water dispute : ಬೆಂಗಳೂರಲ್ಲಿ ಸ್ಯಾಂಡಲ್‌ವುಡ್‌ನ ದಿಗ್ಗಜರು ಕಾವೇರಿ ನೀರಿಗಾಗಿ ಹೋರಾಟಕ್ಕೆ ಧುಮ್ಮುಕಿದರೆ ಇತ್ತ ಬಂದ್ ನಡುವೆ ನಟ ಯುವ ರಾಜ್‌ಕುಮಾರ್‌ ಸಿನಿಮಾ ಶೂಟಿಂಗ್‌ ಸೆಟ್‌ಗೆ ಹೋರಾಟಗಾರರು ನುಗ್ಗಿದ್ದಾರೆ.

Karnataka Bandh : ಬಂದ್ ನಡುವೆ ಯುವ ರಾಜ್‌ಕುಮಾರ್‌ ಸಿನಿಮಾ ಶೂಟಿಂಗ್‌; ಸೆಟ್‌ಗೆ ನುಗ್ಗಿದ ಹೋರಾಟಗಾರರು
Deepa S

ಬಲೆಗೆ ಬಿದ್ದ ವಿವಾಹಿತೆಯ ನಗ್ನ ಫೋಟೊ ಕ್ಲಿಕ್ಕಿಸಿದ; ಹಣಕ್ಕಾಗಿ ಪೀಡಿಸಿದ

ಸೋಶಿಯಲ್‌ ಮೀಡಿಯಾದಲ್ಲಿ ಶುರುವಾದ ಪರಿಚಯವೊಂದು ಬ್ಲ್ಯಾಕ್‌ ಮೇಲ್‌ಗೆ ತಿರುಗಿದೆ. ವಿವಾಹಿತ ಮಹಿಳೆಯ ಹಿಂದೆ ಬಿದ್ದ ವ್ಯಕ್ತಿಯೊಬ್ಬ ಮೋಡಿ ಮಾಡಿ, ಹಣಕ್ಕಾಗಿ ಬ್ಲ್ಯಾಕ್‌ ಮೇಲ್‌ (black mail) ಮಾಡಿದ್ದಾನೆ.

https://vistaranews.com/karnataka/uttara-kannada/physical-abuse-man-from-puttur-sexually-assaulted-and-blackmailed-for-money/466798.html

Krishna Bhat

ಬೆಂಗಳೂರು-ಮೈಸೂರು ಹೆದ್ದಾರಿ ಪ್ರವೇಶಿಸುವ ರೈತರ ಯತ್ನಕ್ಕೆ ತಡೆ, 250 ಮಂದಿ ವಶಕ್ಕೆ

ಮಂಡ್ಯ: ಮೈಸೂರು-ಬೆಂಗಳೂರು ಹೈವೇ ತಡೆದಂತೆ ಸೂಚಿಸಿದ್ದೆವು. ಅದನ್ನು ಮೀರಿ ರೈತರು ಹೆದ್ದಾರಿಗೆ ನುಗ್ಗಿ ರಸ್ತೆ ತಡೆಯುವ ಪ್ರಯತ್ನ ಮಾಡಿದ್ರು. ಇದರಿಂದ ಪ್ರತಿಭಟನಕಾರರನ್ನು ವಶಕ್ಕೆ ಪಡೆದಿದ್ದೇವೆ. ಸುಮಾರು 500 ಜನ ಪ್ರತಿಭಟನಾಕಾರರ ಪೈಕಿ ಹೈವೆಗೆ ನುಗ್ಗಿದ 250 ಕ್ಕು ಹೆಚ್ಚು ಮಂದಿಯನ್ನ ವಶಕ್ಕೆ ಪಡೆದಿದ್ದೇವೆ.

ದಕ್ಷಿಣ ವಲಯದ 5 ಜಿಲ್ಲೆಗಳಲ್ಲಿ ವಾಣಿಜ್ಯ ಚಟುವಟಿಕೆಗಳು ಬಂದ್ ಆಗಿದೆ. ಯಾವುದೇ ಅಹಿಕತರ ಘಟನೆ ನಡೆದಿಲ್ಲ.

ವಾಹನ ಸಂಚಾರ ವಿರಳವಾಗಿದೆ ಎಂದು ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ಹೇಳಿದ್ದಾರೆ.

Krishna Bhat

Karnataka Bandh : ಟೌನ್‌ಹಾಲ್‌ ಬಳಿ ಪ್ರತಿಭಟನೆ ಹತ್ತಿಕ್ಕಿದ ಪೊಲೀಸರು; ಹೋರಾಟಗಾರರು ಫ್ರೀಡಂ ಪಾರ್ಕ್‌ಗೆ
Exit mobile version