Site icon Vistara News

Karnataka Bandh LIVE Updates: ಸುಪ್ರೀಂ ಕೋರ್ಟ್, ಕಾವೇರಿ ಪ್ರಾಧಿಕಾರದ ಮುಂದೆ ರಿವಿಶನ್ ಪಿಟಿಷನ್ ಎಂದ ಸಿಎಂ

karnataka bandh

ಬೆಂಗಳೂರು: ಸೆಪ್ಟೆಂಬರ್ 29, ಶುಕ್ರವಾರ ಕರ್ನಾಟಕ ಬಂದ್ (Karnataka Bandh LIVE Updates) ಆಚರಿಸಲಾಗುತ್ತಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ವಿವಿಧ ಕನ್ನಡ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಇದರ ನಡುವೆಯೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ) (CWMA) ಶುಕ್ರವಾರ ಸಭೆಯಲ್ಲೂ ರಾಜ್ಯಕ್ಕೆ ಹಿನ್ನಡೆಯಾಗಿದೆ. ಅ. 15ರವರೆಗೆ ತಮಿಳುನಾಡಿಗೆ ಪ್ರತಿ ದಿನವೂ 3000 ಕ್ಯೂಸೆಕ್‌ ನೀರು ಬಿಡಬೇಕು ಎಂಬ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಆದೇಶವನ್ನು ಪ್ರಾಧಿಕಾರ ಎತ್ತಿ ಹಿಡಿದಿದೆ. ಈಗ ತಮಿಳುನಾಡಿಗೆ 3000 ಕ್ಯೂಸೆಕ್ ನೀರು ಬಿಡುಗಡೆ ಮಾಡಲು ಸಿಡಬ್ಲ್ಯುಎಂಎ ಆದೇಶಿಸಿರುವ ಕ್ರಮವನ್ನು ಪ್ರಶ್ನಿಸಿ ರಿವಿಶನ್ ಪಿಟಿಷನ್ ಸಲ್ಲಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅಲ್ಲದೆ, ಸುಪ್ರೀಂ ಕೋರ್ಟ್‌ನಲ್ಲಿಯೂ ಅರ್ಜಿ ಸಲ್ಲಿಸುವುದಾಗಿ ಹೇಳಿದ್ದಾರೆ. ಕರ್ನಾಟಕ ಬಂದ್ ಕ್ಷಣ ಕ್ಷಣ ಸುದ್ದಿಗಳಿಗಾಗಿ ವಿಸ್ತಾರ ನ್ಯೂಸ್ ಜಾಲತಾಣಕ್ಕೆ ಭೇಟಿ ನೀಡಿ(Karnataka Live News).

Adarsha Anche

Karnataka Bandh : ಸಚಿವ ಜಮೀರ್‌ ನಿಂಬೆ ಹಣ್ಣು ಕೊಟ್ಟರು ಎಂದ ಕರವೇ ನಾರಾಯಣ ಗೌಡ; ನಾಯಕತ್ವಕ್ಕಾಗಿ ಮುನಿಸು!

ರಾಜ್ಯಾದ್ಯಂತ ಕಾವೇರಿ ಕಿಚ್ಚು ಹೊತ್ತಿದ್ದರೂ ಕರ್ನಾಟಕ ಬಂದ್‌ಗೆ ಬೆಂಬಲ ಕೊಡದೇ ಇರಲು ಏನು ಕಾರಣ ಎಂದು ಕರವೇ ನಾರಾಯಣ ಗೌಡ ಮಾಧ್ಯಮಗಳಿಗೆ ತಿಳಿಸಿದ್ದಾರೆ. ತಮ್ಮ ನೇತೃತ್ವದಲ್ಲಿ ಹೋರಾಟ ನಡೆಯಬೇಕಿತ್ತು. ಯಾರದ್ದೋ ಕೆಳಗೆ ನಾನು ಹೋರಾಟ ಮಾಡಲೇ? ಎಂದು ಪ್ರಶ್ನೆ ಮಾಡಿದ್ದಾರೆ.

Karnataka Bandh : ಸಚಿವ ಜಮೀರ್‌ ನಿಂಬೆ ಹಣ್ಣು ಕೊಟ್ಟರು ಎಂದ ಕರವೇ ನಾರಾಯಣ ಗೌಡ; ನಾಯಕತ್ವಕ್ಕಾಗಿ ಮುನಿಸು!
Deepa S

ದೇವನಹಳ್ಳಿಯಲ್ಲಿ ವೈಕುಂಠ ಸಮಾರಾಧನೆ ಮಾಡಿ ಕಿಡಿ

ತಮಿಳುನಾಡಿನ ಸಿಎಂ ಸ್ಟಾಲಿನ್ ಭಾವಚಿತ್ರಕ್ಕೆ ಹಾರ ಹಾಕಿ ವೈಕುಂಠ ಸಮಾರಾಧನೆ ಮಾಡಿ ಹೋರಾಟಗಾರರು ಆಕ್ರೋಶ ಹೊರಹಾಕಿದರು. ಕರವೇ ಕಾರ್ಯಕರ್ತರು ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಶಿವಗಣೇಶ ಸರ್ಕಲ್‌ನಲ್ಲಿ ಸರ್ಕಾರದ ವಿರುದ್ಧ ಕಿಡಿಕಾರಿದರು. ಕೂಡಲೇ ನೀರು ಬಿಡುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.

Krishna Bhat

Karnataka Bandh : ವಾಟಾಳ್‌ ನಾಗರಾಜ್‌ ಬುರ್ಕಾದಲ್ಲಿ ಪ್ರತ್ಯಕ್ಷ; ಸಿದ್ದರಾಮೇಶ್ವರ ವಿರುದ್ಧ ಕೆಂಡಾಮಂಡಲ
Deepa S

ಕಾವೇರಿ ನೀರಿಗಾಗಿ ಪಟ್ಟು; ತಮಿಳುನಾಡು ಸಿಎಂ ಅಣುಕು ಶವ ಯಾತ್ರೆ

ತಮಿಳುನಾಡು ಸಿಎಂ ಸ್ಟಾಲಿನ್‌ರ ಅಣಕು ಶವಯಾತ್ರೆಯ ಮೂಲಕ ಮೆರವಣಿಗೆ ನಡೆಸುತ್ತಿದ್ದಾರೆ. ಚಟ್ಟ ಕಟ್ಟಿ, ಸ್ಟ್ಯಾಲಿನ್ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು, ಅಣುಕು ಶವದ ಎದುರು ಬಾಯಿ ಬಾಯಿ ಬಡಿದುಕೊಂಡು ಕಿಡಿಕಾರಿದ್ದಾರೆ. ನಗರದ ಟೌನ್ ಹಾಲ್ ವೃತ್ತದಿಂದ ಚಟ್ಟ ಹೊತ್ತು, ಜಿಲ್ಲಾಧಿಕಾರಿ ಕಚೇರಿವರೆಗೆ ಕೈಲಾಸರಥದಲ್ಲಿ ಮೆರವಣಿಗೆ ನಡೆಸಿದ್ದಾರೆ. ಪ್ರಾಣ ಕೊಟ್ಟೆವು ಕಾವೇರಿ ನೀರು ಬಿಡೇವು ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ. ಕೊನೆಯಲ್ಲಿ ಅಣಕುಶವಕ್ಕೆ ಅಗ್ನಿಸ್ಪರ್ಶ ಮಾಡಲಿದ್ದಾರೆ.

Karnataka Bandh : ಕಾವೇರಿ ನೀರಿಗಾಗಿ ಪಟ್ಟು; ತಮಿಳುನಾಡು ಸಿಎಂ ಅಣುಕು ಶವ ಯಾತ್ರೆ
B Somashekhar

ಬುರ್ಖಾ ಧರಿಸಿ ಪ್ರತಿಭಟನೆ ನಡೆಸಿದ ವಾಟಾಳ್‌ ನಾಗರಾಜ್‌

ರಾಜ್ಯದಲ್ಲಿ ವಿನೂತನ ಶೈಲಿಯ ಪ್ರತಿಭಟನೆಗಳಿಂದಲೇ ಖ್ಯಾತಿ ಗಳಿಸಿರುವ ವಾಟಾಳ್‌ ನಾಗರಾಜ್‌ ಅವರು ಕರ್ನಾಟಕ ಬಂದ್‌ ಹಿನ್ನೆಲೆಯಲ್ಲಿ ಬುರ್ಖಾ ಧರಿಸಿ ಪ್ರತಿಭಟನೆ ನಡೆಸುವ ಮೂಲಕ ಗಮನ ಸೆಳೆದರು. “ಕಾವೇರಿ ನೀರು ಬಿಡಬಾರದು. ಆದರೆ, ರಾಜ್ಯ ಸರ್ಕಾರ ಅಸಹಕಾರ ತೋರುತ್ತಿದೆ. ಪ್ರತಿಭಟನೆ ನಡೆಸುತ್ತಿರುವವರನ್ನೇ ಬಂಧಿಸುತ್ತಿದೆ. ಆದರೂ, ರಾಜ್ಯಾದ್ಯಂತ ಬಂದ್‌ಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ನಾಡಿನ ಜನ ಅಖಂಡ ಕರ್ನಾಟಕ ತತ್ವವನ್ನು ಬೆಂಬಲಿಸಿದ್ದಾರೆ. ಎಲ್ಲರಿಗೂ ಧನ್ಯವಾದಗಳು” ಎಂದರು.

Exit mobile version