ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಐಕ್ಯತಾ ಯಾತ್ರೆಯನ್ನು ಟೀಕಿಸಿ ಕರ್ನಾಟಕ ಬಿಜೆಪಿ ವಿವಿಧ ಮಾಧ್ಯಮಗಳಿಗೆ ಜಾಹಿರಾತು ನೀಡಿದ್ದು, ತೋಡೋ ಪಿತಾಮಹನ ಮರಿಮಗನಿಂದ ಭಾರತವನ್ನು ಜೋಡಿಸಲು ಸಾಧ್ಯವೇ ಎಂದು ಪ್ರಶ್ನಿಸಿದೆ.
ಭಾರತ ವಿಭಜನೆಯ ಪಿತಾಮಹ ಪಕ್ಷದಿಂದ ಭಾರತದ ಐಕ್ಯತೆ ಸಾಧ್ಯವೇ? ತನ್ನ ಅಧಿಕಾರದ ಹಪಹಪಿಗೆ ದೇಶವಾಸಿಗಳ ರಕ್ತಹರಿಸಿದ ಪಕ್ಷದಿಂದ ಭಾರತ ಐಕ್ಯತೆ ಸಾಧ್ಯವೇ? ದೇಶ ಒಡೆಯುವವರನ್ನು ಬೆಂಬಲಿಸುವರಿಂದ ಐಕ್ಯತೆ ಸಾಧ್ಯವೇ? ಎಂದು ಜಾಹಿರಾತಿನಲ್ಲಿ ಬಿಜೆಪಿ ಪ್ರಶ್ನಿಸಿದೆ. ಭಾರತ ಐಕ್ಯತಾ ಯಾತ್ರೆಯ ನಿಜವಾದ ಅಜೆಂಡಾ ಭಾರತ ವಿಭಜನೆಯೇ ಅಗಿದೆ ಎಂದಿದೆ.
ಜಾಹಿರಾತಿನಲ್ಲಿ ಎರಡು ಕಡೆ ಜವಾಹರಲಾಲ್ ನೆಹರು ಹಾಗೂ ಮಹಮ್ಮದ್ ಅಲಿ ಜಿನ್ನಾ ಪೋಟೋ ಹಾಕಲಾಗಿದೆ. ನಡುವೆ ಅಖಂಡ ಭಾರತದ ಭೂಪಟದ ಚಿತ್ರ ಹಾಕಲಾಗಿದೆ. ಈ ಹಿಂದೆ ಮೇಕೆದಾಟು ಪಾದಯಾತ್ರೆ ಸಂದರ್ಭದಲ್ಲಿ ನಡೆದ ನೀರಾವರಿ ಯೋಜನೆಗಳ ಬಗ್ಗೆ ಜಾಹಿರಾತು ನೀಡಲಾಗಿತ್ತು. ಜೋಡೋ ಯಾತ್ರೆ ಕಾಂಗ್ರೆಸ್ ಪಕ್ಷದಿಂದ ನಡೆಯುತ್ರಿರುವ ಹಿನ್ನೆಲೆಯಲ್ಲಿ ಈ ಜಾಹೀರಾಥು ನೀಡಲಾಗಿದೆ.
ಬಿಜೆಪಿಯವರಿಗೆ ನಡುಕ: ಪ್ರಿಯಾಂಕ್
ರಾಹುಲ್ ಗಾಂಧಿ ರಾಜ್ಯಕ್ಕೆ ಬಂದು ಎರಡು ದಿನ ಮಾತ್ರ ಆಗಿದೆ. ಆಗಲೇ ಬಿಜೆಪಿಯವರಿಗೆ ನಡುಕ ಶುರುವಾಗಿದೆ. ಹಾಗಾಗಿ ಈ ರೀತಿಯ ಜಾಹಿರಾತು ಕೊಡುತ್ತಾ ಇದ್ದಾರೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಏಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಸಿದ್ದಾರೆ. ಶಶಿ ತರೂರು ಸೇರಿ ಇನ್ನೂ ಹಲವರು ಸ್ಪರ್ಧೆಯಲ್ಲಿದ್ದಾರೆ. ಚುನಾವಣೆ ಆಗಲಿ ಪ್ರಿಯಾಂಕ್, ವಿಸ್ತಾರ ನ್ಯೂಸ್‌ಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬಿಬಿಎಂಪಿ ಚುನಾವಣೆ ವಿಚಾರ ಕೋರ್ಟ್ ಸೂಚನೆ ಕೊಟ್ಟ ಮೇಲಾದರೂ ಎಲೆಕ್ಷನ್ ಮಾಡಲಿ ಎಂದಿದ್ದಾರೆ.
ಇದನ್ನೂ ಓದಿ | ವಿಸ್ತಾರ TOP 10 NEWS | ರಾಜ್ಯಕ್ಕೆ ಕಾಲಿಟ್ಟ ಭಾರತ್ ಜೋಡೋದಿಂದ 5G ಪದಾರ್ಪಣೆವರೆಗಿನ ಪ್ರಮುಖ ಸುದ್ದಿಗಳಿವು