ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್ ಮಂಡನೆ ಆರಂಭಿಸಿದ್ದು, ಆರಂಭದಲ್ಲೇ ವಿರೋಧ ಪಕ್ಷಗಳಿಂದ ಅಡ್ಡಿ ಉಂಟಾಯಿತು.
ಬೆಳಗ್ಗೆ ೧೦.೧೫ಕ್ಕೆ ಬಜೆಟ್ ಮಂಡನೆ ಆರಂಭಿಸಿದ ಬೊಮ್ಮಾಯಿ ಅವರು ಕುವೆಂಪು ಅವರ ಕವನವನ್ನು ಉಲ್ಲೇಖಿಸಿದರು. ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಕಡೆಗೆ ನೋಡಿದರು. ಸಿದ್ದರಾಮಯ್ಯ ಅವರು ಕಿವಿಗೆ ಹೂವಿಟ್ಟುಕೊಂಡಿರುವುದು ಕಂಡಿತು.
ಅವರು, ʻʻಕಿವಿ ಮೇಲೆ ಹೂವು ಇಟ್ಟುಕೊಳ್ಳುವುದು ಬೇಡʼ ಎಂದು ಸಿದ್ದರಾಮಯ್ಯನವರನ್ನು ಬೊಮ್ಮಾಯಿ ಕೆಣಕಿದರು. ಮುಂದಿನ ಸಲವೂ ಸಿದ್ದರಾಮಯ್ಯ ಹೂವು ಇಟ್ಟುಕೊಳ್ಳುತ್ತಾರೆ ಎಂದು ಕೆಣಕಿದರು. ಆಗ ಸಿದ್ದರಾಮಯ್ಯ ಅವರು ನೀವು ರಾಜ್ಯದ ಜನರ ಕಿವಿಗೆ ಹೂವು ಇಡುವುದು ತಾನೇ ಎಂದು ಉತ್ತರಿಸಿದರು.
ಈ ವೇಳೆ, ಆಡಳಿತ ಮತ್ತು ವಿಪಕ್ಷಗಳ ನಡುವೆ ಗದ್ದಲ ಉಂಟಾಯಿತು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿರೋಧ ಪಕ್ಷಗಳು ಈ ರೀತಿ ಮಾಡಬಾರದು ಎಂದು ಆಕ್ರೋಶದಿಂದ ಹೇಳಿದರು. ಈ ನಡುವೆ, ಬೊಮ್ಮಾಯಿ ಬಜೆಟ್ ಓದು ಮುಂದುವರಿಸಿದರು.
ಇದನ್ನೂ ಓದಿ : Karnataka Budget 2023 Live Updates: ಬಸವರಾಜ ಬೊಮ್ಮಾಯಿ ಅವರಿಂದ ಬಜೆಟ್ ಮಂಡನೆ; ಆರಂಭದಲ್ಲೇ ಗದ್ದಲದ ಅಡ್ಡಿ