Site icon Vistara News

Karnataka Budget 2023 Live: ನುಡಿದಂತೆ ನಡೆದಿದ್ದೇವೆ, ಎಲ್ಲ ಗ್ಯಾರಂಟಿಗಳೂ ಹಣ ಇಟ್ಟಿದ್ದೇವೆ; ಬಜೆಟ್‌ ಬಳಿಕ ಸಿದ್ದರಾಮಯ್ಯ ಸುದ್ದಿಗೋಷ್ಠಿ

Karnataka Budget 2023 Live Updates

Karnataka Budget 2023 Live Updates In Kannada

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹುನಿರೀಕ್ಷೆಯ ಬಜೆಟ್‌ ಮಂಡನೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರು 14ನೇ ಬಾರಿ ಬಜೆಟ್‌ ಮಂಡನೆ ಮಾಡಿದ್ದು, ಮೂಲಕ ವಿಧಾನಸಭೆಯಲ್ಲಿ ಅತಿ ಹೆಚ್ಚು ಬಜೆಟ್‌ ಮಂಡಿಸಿದ ದಾಖಲೆಗೆ ಪಾತ್ರರಾಗಿದ್ದಾರೆ. ರಾಜ್ಯದ ಜನರ ಆಶೋತ್ತರಗಳನ್ನು ಈಡೇರಿಸುವ ದಿಸೆಯಲ್ಲಿ ಮಂಡಿಸಿದ ಬಜೆಟ್‌ನ ಕ್ಷಣಕ್ಷಣದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: Karnataka Budget 2023: ಇಂದು ರಾಜ್ಯ ಬಜೆಟ್‌; ಸಿದ್ದರಾಮಯ್ಯ ದಾಖಲೆ, ಗ್ಯಾರಂಟಿ ಹೊರೆ; ಏನೇನು ಹೈಲೈಟ್‌?

B Somashekhar

ನಮ್ಮದು ಪೂರ್ಣ ಆಯ-ವ್ಯಯ; ಬಜೆಟ್‌ ಬಳಿಕ ಸಿದ್ದರಾಮಯ್ಯ ಸುದ್ದಿಗೋಷ್ಠಿ

14ನೇ ಬಾರಿಗೆ ಮುಂಗಡಪತ್ರ ಮಂಡಿಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿ ನಡೆಸಿದರು. “ನಮ್ಮದು ಪೂರ್ಣಪ್ರಮಾಣದ ಬಜೆಟ್‌ ಆಗಿದೆ. ಇದು ಬಿಜೆಪಿಗಿಂತ ಭಿನ್ನವಾದ ಮುಂಗಡಪತ್ರವಾಗಿದ್ದು, ರಾಜ್ಯದ ಏಳಿಗೆಗೆ ಸಹಕಾರಿಯಾಗಲಿದೆ” ಎಂದು ಹೇಳಿದರು. “ಪ್ರಸಕ್ತ ವರ್ಷದಲ್ಲಿ ನಮ್ಮ ಸರ್ಕಾರದ ಐದು ಗ್ಯಾರಂಟಿಗಳ ಜಾರಿಗೆ 35,410 ಕೋಟಿ ರೂ. ಬೇಕು. ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ ಖರ್ಚು 52 ಸಾವಿರ ಕೋಟಿ ರೂ.ಗಿಂತ ಜಾಸ್ತಿ ಇದೆ” ಎಂದು ತಿಳಿಸಿದರು.

B Somashekhar

ಬಜೆಟ್‌ ಮಂಡನೆ ಮುಗಿಸಿದ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ 14ನೇ ಬಾರಿಗೆ ಬಜೆಟ್‌ ಮಂಡಿಸಿದ್ದಾರೆ. ಸುಮಾರು 3.27 ಲಕ್ಷ ಕೋಟಿ ರೂಪಾಯಿ ಮೊತ್ತದ ಬಜೆಟ್‌ನಲ್ಲಿ ಸರ್ವರಿಗೂ ಅನುಕೂಲವಾಗುವ ಅಂಶಗಳನ್ನು ಸಿದ್ದರಾಮಯ್ಯ ಪ್ರಸ್ತಾಪಿಸಿದ್ದಾರೆ. ಅದರಲ್ಲೂ, ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಅನುದಾನ ಮೀಸಲಿರಿಸಿದ್ದಾರೆ.

B Somashekhar

ಕೌಂಟರ್‌ ಕೊಡುವ ಬಿಜೆಪಿ ನಾಯಕ ಯಾರು ಎಂಬ ಗೊಂದಲ

ಬಿಜೆಪಿಯು ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡದ ಕಾರಣ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ಗೆ ಕೌಂಟರ್‌ ಕೊಡುವವರು ಯಾರು ಎಂಬ ಪ್ರಶ್ನೆ ಮೂಡಿದೆ. ಸದನದಲ್ಲಿ ಸದನದಲ್ಲಿ ಮಾಜಿ ಸಿಎಂ ಬೊಮ್ಮಾಯಿ ಹಾಗೂ ಸುನೀಲ್ ಕುಮಾರ್ ಅವರು ಪ್ರತ್ಯೇಕವಾಗಿ ಕುಳಿತು ಮಾತುಕತೆ ನಡೆಸಿದ್ದಾರೆ. ಅತ್ತ, ಬಸನಗೌಡ ಪಾಟೀಲ್‌ ಯತ್ನಾಳ್‌ ಒಬ್ಬರೇ ಕುಳಿತಿದ್ದು, ಗೊಂದಲ ಹೆಚ್ಚಾಗಿದೆ. ಆದರೂ, ಬೊಮ್ಮಾಯಿ, ಸುನೀಲ್ ಕುಮಾರ್ ಹಾಗೂ ಯತ್ನಾಳ್ ಒಟ್ಟಾಗಿ ಸೇರಿ ಸುದ್ದಿಗೋಷ್ಢಿ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

B Somashekhar

ತೆರಿಗೆ ಸಂಗ್ರಹದ ಗುರಿ

Ramesha Doddapura

Karnataka Budget 2023: ಕಲ್ಯಾಣ ಕರ್ನಾಟಕಕ್ಕೆ ಸಿದ್ದರಾಮಯ್ಯ ಭರ್ಜರಿ ಗಿಫ್ಟ್‌ ಘೋಷಣೆ

ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಪ್ರದೇಶವಾಗಿರುವ ಕಲ್ಯಾಣ ಕರ್ನಾಟಕ ಭಾಗಕ್ಕೆ ಭರ್ಜರಿ ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ (Karnataka Budget 2023) ಘೋಷಣೆ ಮಾಡಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ 2023-24ನೇ ಸಾಲಿನಲ್ಲಿ 5,000 ಕೋಟಿ ರೂ.ಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Karnataka Budget 2023: ಕಲ್ಯಾಣ ಕರ್ನಾಟಕಕ್ಕೆ ಸಿದ್ದರಾಮಯ್ಯ ಭರ್ಜರಿ ಗಿಫ್ಟ್‌ ಘೋಷಣೆ

Exit mobile version