ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹುನಿರೀಕ್ಷೆಯ ಬಜೆಟ್ ಮಂಡನೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರು 14ನೇ ಬಾರಿ ಬಜೆಟ್ ಮಂಡನೆ ಮಾಡಿದ್ದು, ಮೂಲಕ ವಿಧಾನಸಭೆಯಲ್ಲಿ ಅತಿ ಹೆಚ್ಚು ಬಜೆಟ್ ಮಂಡಿಸಿದ ದಾಖಲೆಗೆ ಪಾತ್ರರಾಗಿದ್ದಾರೆ. ರಾಜ್ಯದ ಜನರ ಆಶೋತ್ತರಗಳನ್ನು ಈಡೇರಿಸುವ ದಿಸೆಯಲ್ಲಿ ಮಂಡಿಸಿದ ಬಜೆಟ್‌ನ ಕ್ಷಣಕ್ಷಣದ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: Karnataka Budget 2023: ಇಂದು ರಾಜ್ಯ ಬಜೆಟ್; ಸಿದ್ದರಾಮಯ್ಯ ದಾಖಲೆ, ಗ್ಯಾರಂಟಿ ಹೊರೆ; ಏನೇನು ಹೈಲೈಟ್?
ʼಅಲ್ಪʼಸಂಖ್ಯಾತರಿಗೆ ಸಿದ್ದು ʼಬಹುʼ ಕೊಡುಗೆ
-ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಯೋಜನೆ ಮತ್ತೆ ಆರಂಭ; 60 ಕೋಟಿ ರೂ. ಅನುದಾನ
– ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವ್ಯಾಸಂಗಕ್ಕಾಗಿ ಶೈಕ್ಷಣಿಕ ಸಾಲ ಯೋಜನೆ ಅಡಿಯಲ್ಲಿ 28 ವೃತ್ತಿಪರ ಕೋರ್ಸ್ ವ್ಯಾಸಂಗ ಮಾಡಲು ಶೇ. 2 ಬಡ್ಡಿ ದರದಲ್ಲಿ ಸಾಲ
-ರಾಜ್ಯದ ಎಲ್ಲ ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಐದು ಕೋಟಿ ರೂ. ವೆಚ್ಚದಲ್ಲಿ ಭಾಷಾ ಪ್ರಯೋಗಾಲಯ ಸ್ಥಾಪನೆ
– ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಹತ್ತು ತಿಂಗಳು ವಸತಿ ಸಹಿತ ಐಎಎಸ್ ಹಾಗೂ ಕೆಎಎಸ್ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ
- ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿಶ್ವಮಟ್ಟದ ವಿವಿ ಗಳಲ್ಲಿ ಪದವಿ ಸ್ನಾತಕೋತ್ತರ ವ್ಯಾಸಾಂಗ ಅನುಕೂಲಕ್ಕೆ ಶೂನ್ಯ ಬಡ್ಡಿದರದಲ್ಲಿ 20 ಲಕ್ಷ ರೂ.ವರಗೆ ಸಾಲ
ಸಿದ್ದು ಬಜೆಟ್‌ನ ಮುಖ್ಯಾಂಶಗಳು
– ಹಿಂದುಳಿದ ವರ್ಗಗಳ ಪ್ರವರ್ಗ -1 ಮತ್ತು 2ಎ ಜಾತಿಗಳಿಗೆ ಒಂದು ಕೋಟಿ ರೂವರೆಗಿನ ನಿರ್ಮಾಣ ಕಾಮಗಾರಿಯಲ್ಲಿ ಮೀಸಲಾತಿ
-ಡಿಸಿಎಂ ಡಿಕೆಶಿ ಕ್ಷೇತ್ರವಾದ ಕನಕಪುರದಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣ
– ವಿದ್ಯಾಸಿರಿ ಯೋಜನೆ – ಹಾಸ್ಟೆಲ್ ದೊರೆಯದ ವಿದ್ಯಾರ್ಥಿಗಳಿಗೆ ವಾರ್ಷಿಕ 15 ಸಾವಿರ ರೂ. ಕೊಡುವ ಯೋಜನೆ ಮುಂದುವರಿಕೆ – 3.6 ಲಕ್ಷ ವಿದ್ಯಾರ್ಥಿಗಳಿಗೆ 4.32 ಕೋಟಿ ರೂ. ನೆರವು
– ತವರು ಜಿಲ್ಲೆ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿದ ಸಿಎಂ ಸಿದ್ದರಾಮಯ್ಯ
ಸಿದ್ದರಾಮಯ್ಯ ಬಜೆಟ್‌ನ ಪ್ರಮುಖಾಂಶ
– ಇಂದಿರಾ ಕ್ಯಾಂಟೀನ್‌ಗೆ 100 ಕೋಟಿ ರೂ.
– 5 ಗ್ಯಾರಂಟಿ ಯೋಜನೆಗಳ ಜಾರಿಗೆ 52 ಸಾವಿರ ಕೋಟಿ ರೂ.
– ಬೆಂಗಳೂರು ಅಭಿವೃದ್ಧಿಗೆ 45 ಸಾವಿರ ಕೋಟಿ ರೂ.
– ನಮ್ಮ ಮೆಟ್ರೋಗೆ 30 ಸಾವಿರ ಕೋಟಿ ರೂ.
ಯಾವ ಇಲಾಖೆಗೆ ಎಷ್ಟು ಹಣ ವಿನಿಯೋಗ?
– ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ- 24 ಸಾವಿರ ಕೋಟಿ ರೂ.
– ಒಳಾಡಳಿತ ಮತ್ತು ಸಾರಿಗೆ- 16 ಸಾವಿರ ಕೋಟಿ ರೂ.
– ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ- 14,900 ಕೋಟಿ ರೂ.
– ಲೋಕೋಪಯೋಗಿ ಇಲಾಖೆ- 11 ಸಾವಿರ ಕೋಟಿ ರೂ.
– ನಗರಾಭಿವೃದ್ಧಿ ಮತ್ತು ನೀರಾವರಿ- 19 ಸಾವಿರ ಕೋಟಿ ರೂ.
– ಸಮಾಜ ಕಲ್ಯಾಣ ಇಲಾಖೆ – 11 ಸಾವಿರ ಕೋಟಿ ರೂ.
ಮದ್ಯ ಪ್ರಿಯರಿಗೆ ಶಾಕ್ ಕೊಟ್ಟ ಸಿದ್ದರಾಮಯ್ಯ
ಅಬಕಾರಿ ಸುಂಕವನ್ನು ಸಿದ್ದರಾಮಯ್ಯ ಸರ್ಕಾರ ಹೆಚ್ಚಳ ಮಾಡಿದ್ದು, ಇದರಿಂದ ಎಣ್ಣೆ ಪ್ರಿಯರಿಗೆ ಶಾಕ್ ಆಗಿದೆ.