ಬೆಂಗಳೂರು: 2023-24ನೇ ಸಾಲಿನ ರಾಜ್ಯ ಬಜೆಟ್ (Karnataka Budget 2023) ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ತಮ್ಮ ರಾಜಕೀಯ ಬದುಕಿನಲ್ಲಿ ದಾಖಲೆಯ 14ನೇ ಬಜೆಟ್ (Siddaramaiah 14th Budget) ಮಂಡಿಸಲು ಸಂಪೂರ್ಣ ಸಿದ್ಧರಾಗಿದ್ದಾರೆ. ಬಜೆಟ್ ಮಂಡನೆಗೆ ಪೂರ್ವಭಾವಿಯಾಗಿ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷ (Congress Legislative Party meeting) ಸಭೆಯನ್ನೂ ಆರಂಭಿಸಿದ್ದಾರೆ.
ಸಿದ್ದರಾಮಯ್ಯ ನೋ ಟೆಂಪಲ್ ರನ್
ಸಾಮಾನ್ಯವಾಗಿ ಮುಖ್ಯಮಂತ್ರಿಗಳು ಬಜೆಟ್ ಮಂಡನೆಗೆ ಮುನ್ನ ದೇವಸ್ಥಾನಗಳಿಗೆ ಭೇಟಿ ನೀಡುವ ವಾಡಿಕೆ ಇದೆ. ಆದರೆ, ಸಿದ್ದರಾಮಯ್ಯ ಅವರು ಮಾತ್ರ ದೇವಸ್ಥಾನಕ್ಕೆ ಹೋಗದೇ ನೇರವಾಗಿ ವಿಧಾನಸೌಧಕ್ಕೆ ಬಂದಿದ್ದಾರೆ.
ಬಸವರಾಜ ಬೊಮ್ಮಾಯಿ ಅವರು ಹಿಂದೆ ಬಜೆಟ್ ಮಂಡನೆಗೂ ಮುನ್ನ ಎರಡು ದೇವಸ್ಥಾನ ವಿಸಿಟ್ ಮಾಡಿದ್ದರು. ಆರ್ ಟಿ ನಗರ ನಂಜುಂಡೇಶ್ವರ ದೇವಸ್ಥಾನ,ಬಾಲಬ್ರೂಯಿಯ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಬೊಮ್ಮಾಯಿ
ಸಾಮಾನ್ಯವಾಗಿ ಬಜೆಟ್ ಮಂಡನೆಗೂ ಮುನ್ನ ದೇವಸ್ಥಾನಕ್ಕೆ ಹೋಗುವ ಸಂಪ್ರದಾಯವಿತ್ತು. ಆದರೆ, ಸಿದ್ದರಾಮಯ್ಯ ಮಾತ್ರ ನೇರವಾಗಿ ಮನೆಯಿಂದ ಶಾಸಕಾಂಗ ಪಕ್ಷ ಸಭೆಗೆ ತೆರಳಿದರು.
ಕಾಂಗ್ರೆಸ್ ಶಾಸಕಾಂಗ ಸಭೆ ಆರಂಭ
ಬಜೆಟ್ ಪೂರ್ವಭಾವಿಯಾಗಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆ ಆರಂಭವಾಗಿದೆ. ಸಭೆಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್, ಹಿರಿಯ ನಾಯಕರಾದ ಶಿವಾನಂದ ಪಾಟೀಲ್, ಡಾ.ಜಿ ಪರಮೇಶ್ವರ್, ಲಕ್ಷ್ಮಿ ಹೆಬ್ಬಾಳ್ಕರ್, ಚಲುವರಾಯಸ್ವಾಮಿ, ಎಂಬಿ ಪಾಟೀಲ್, ಎಚ್.ಕೆ ಪಾಟೀಲ್ ಭಾಗಿಯಾಗಿದ್ದಾರೆ.
ಅಶೋಕ್ ಪಟ್ಟಣ್, ಸಲೀಂ ಅಹ್ಮದ್, ಶರಣ್ ಪ್ರಕಾಶ್ ಪಾಟೀಲ್, ಗಣೇಶ್ ಪ್ರಸಾದ್, ಚನ್ನರಾಜ್ ಹಟ್ಟಿಹೊಳಿ, ಪ್ರದೀಪ್ ಈಶ್ವರ್, ಯು,ಬಿ ಬಣಕರ್, ನಯನಾ ಮೋಟಮ್ಮ, ದರ್ಶನ್ ಧ್ರುವ ನಾರಾಯಣ್, ತುಕಾರಾಂ ಸೇರಿದಂತೆ ಕೈ ಶಾಸಕರು, ಸಚಿವರು ಈಗಾಗಲೇ ಉಪಸ್ಥಿತರಿದ್ದಾರೆ.
ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಆಯೋಜನೆಯಾಗಿರುವ ಈ ಸಭೆಯಲ್ಲಿ ಎಲ್ಲ ಶಾಸಕರು ಕಡ್ಡಾಯವಾಗಿ ಭಾಗವಹಿಸುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದರು.
ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಸದನದಲ್ಲಿ ಹಾಜರಾತಿ ಇರಬೇಕು, ಜೊತೆಗೆ ಸದನದಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಬೇಕು, ವಿಪಕ್ಷಗಳ ಟೀಕೆಗೆ ತಿರುಗೇಟು ನೀಡಬೇಕು ಎಂದು ಸೂಚನೆ ನೀಡಲಾಗಿದೆ.
ಇದನ್ನೂ ಓದಿ: Karnataka Budget 2023 Live: ಬಜೆಟ್ ಮಂಡನೆಗೆ ಮೈಸೂರು ಪಂಚೆ ಧರಿಸಿ ಆಗಮಿಸಿದ ಸಿದ್ದರಾಮಯ್ಯ, ಸಿಎಲ್‌ಪಿ ಸಭೆ ಆರಂಭ