ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಲವೇ ಕ್ಷಣಗಳಲ್ಲಿ ಬಜೆಟ್ (Karnataka Budget 2024) ಮಂಡಿಸಲಿದ್ದು, ಕೆಂಪು ಬ್ಯಾಗ್ ಹಿಡಿದು ಅವರು ವಿಧಾನಸೌಧಕ್ಕೆ ಆಗಮಿಸಿದ್ದಾರೆ. ಸಿದ್ದರಾಮಯ್ಯ (Siddaramaiah) ಅವರ 15ನೇ ಬಜೆಟ್ ಮಂಡನೆ ಇದಾಗಿದ್ದು, ರಾಜ್ಯದ ಜನರಿಗೆ ಭರಪೂರ ಕೊಡುಗೆಗಳ ನಿರೀಕ್ಷೆ ಹೆಚ್ಚಾಗಿದೆ. ರೈತರು, ಬಡವರು, ಹಿಂದುಳಿದವರ ಕಲ್ಯಾಣಕ್ಕೆ ಹೆಚ್ಚಿನ ಹಣ ಮೀಸಲಿಡುವ ಜತೆಗೆ ಗ್ಯಾರಂಟಿ ಯೋಜನೆಗಳಿಗೆ (Guarantee Schemes) ಹಣ ವಿನಿಯೋಗವು ಸಿದ್ದರಾಮಯ್ಯ ಅವರ ಬಜೆಟ್‌ನ ಪ್ರಮುಖ ಗುರಿಯಾಗಿದೆ. ಸಿದ್ದರಾಮಯ್ಯ ಅವರ ಬಜೆಟ್‌ನ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ.
ಸೂಟ್‌ಕೇಸ್ ಬದಲು ಬ್ಯಾಗ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆಗೆ ಸೂಟ್‌ಕೇಸ್ ಬದಲು ಬ್ಯಾಗ್ ಬಳಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಸರ್ಕಾರಿ ಸೌಮ್ಯದ ಲಿಡ್ಕರ್ ಕಂಪನಿಯ ಬ್ಯಾಗ್‌ನಲ್ಲಿ ಬಜೆಟ್ ಪ್ರತಿ ಇರಿಸಲಾಗಿದ್ದು, ಅದನ್ನು ತೆಗೆದುಕೊಂಡು ಸಿದ್ದರಾಮಯ್ಯ ಅವರು ಕಾವೇರಿಯಿಂದ ವಿಧಾನಸೌಧಕ್ಕೆ ಆಗಮಿಸಿದ್ದಾರೆ. ಬ್ಯಾಗ್‌ನಲ್ಲಿ ಬಜೆಟ್ ಪ್ರತಿ ಇರಿಸಿಕೊಂಡ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಮಾಧ್ಯಮದವರಿಗೆ ಬ್ಯಾಗ್ ಪ್ರದರ್ಶಿಸಿದರು.
ಯಾವ ಇಲಾಖೆಗೆ ಎಷ್ಟು ಟಾರ್ಗೆಟ್?
- ಅಬಕಾರಿ: 40 ಸಾವಿರ ಕೋಟಿ ರೂಪಾಯಿ ಗುರಿ ಸಾಧ್ಯತೆ
- ವಾಣಿಜ್ಯ ತೆರಿಗೆ: 1.21 ಲಕ್ಷ ಸಾವಿರ ಕೋಟಿ ರೂ. ಟಾರ್ಗೆಟ್ ಸಾಧ್ಯತೆ
- ನೋಂದಣಿ ಮತ್ತು ಮುದ್ರಾಂಕ: 35 ಸಾವಿರ ಕೋಟಿ ರೂ. ಕೊಡುವ ಸಾಧ್ಯತೆ
- ಸಾರಿಗೆ: 20 ಸಾವಿರ ಕೋಟಿ ಕೊಡುವ ಸಾಧ್ಯತೆ
ಒಟ್ಟಾರೆ 2.25 ಲಕ್ಷ ಕೋಟಿ ಈ ನಾಲ್ಕು ಇಲಾಖೆಗಳಿಂದ ಸಂಗ್ರಹಿಸಲು ಸಿಎಂ ಸಿದ್ದರಾಮಯ್ಯ ಪ್ಲ್ಯಾನ್ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ವಿಧಾನಸೌಧ ತಲುಪಿದ ಬಜೆಟ್ ಪ್ರತಿಗಳು
ಇದನ್ನೂ ಓದಿ: Karnataka Budget 2024 : ಗೊತ್ತಿರಲಿ, ಅತಿ ಹೆಚ್ಚು ಬಜೆಟ್ ಮಂಡಿಸಿದ್ದು ಸಿದ್ದರಾಮಯ್ಯ ಅಲ್ಲ!
ಈ ಬಾರಿ ಬಜೆಟ್‌ನಲ್ಲಿಯೂ ಅಹಿಂದ ವರ್ಗಕ್ಕೆ ಬಂಪರ್ ಕೊಡುಗೆಯನ್ನು ನೀಡಲು ಸಿಎಂ ಸಿದ್ದರಾಮಯ್ಯ ಯೋಜಿಸಿದ್ದು, ಸಮಾಜ ಕಲ್ಯಾಣ ಮತ್ತು ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ಇಲಾಖೆಗಳಿಗೆ ಭಾರಿ ಕೊಡುಗೆಯನ್ನು ನೀಡಲಿದ್ದಾರೆ ಎನ್ನಲಾಗಿದೆ. ಇರುವ ಎಲ್ಲ ಯೋಜನೆಗಳ ಮುಂದುವರಿಕೆ ಮಾಡಲಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಈ ವರ್ಗ ಹಿಡಿದಿಟ್ಟುಕೊಳ್ಳಲು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ.
ಗ್ಯಾರಂಟಿ ಯೋಜನೆಗಳನ್ನು ಮುಂದುವರಿಕೆ ಮಾಡಲು ಶೇಕಡ 40ರಷ್ಟು ಹಣವನ್ನು ಮೀಸಲು ಇಡಲು ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಈ ಮೂಲಕ ಗ್ಯಾರಂಟಿಗಳನ್ನು ನಿಲ್ಲಿಸಲ್ಲ ಎಂದು ಸಂದೇಶವನ್ನು ರವಾನೆ ಮಾಡಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ. ಹೀಗಾಗಿ ಇದರ ಜತೆಗೆ ಲೋಕಸಭಾ ವೋಟ್ ಬ್ಯಾಂಕ್ ಅನ್ನು ಸಹ ಗ್ಯಾರಂಟಿ ಮಾಡಿಕೊಳ್ಳುವ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ