Site icon Vistara News

Poster Politics | ಇಂಡಿಯನ್‌ ಮನಿ ಸಿಇಒ ಸುಧೀರ್ ವಿಡಿಯೊ ಎಡಿಟ್‌ ಮಾಡಿದ ಕಾಂಗ್ರೆಸ್‌, ದೂರು ದಾಖಲು

Video

ಬೆಂಗಳೂರು: ಪೇಸಿಎಂ ಪೋಸ್ಟರ್‌ಗಳ ಮೂಲಕ ರಾಜ್ಯದಲ್ಲಿ ಪೋಸ್ಟರ್‌ ರಾಜಕೀಯ (Poster Politics)ವನ್ನು ಹೆಚ್ಚಿಸುತ್ತಿರುವ ಕಾಂಗ್ರೆಸ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಪೋಸ್ಟರ್‌ಗಾಗಿ ನಟರೊಬ್ಬರ ಚಿತ್ರವನ್ನು ಕಾಂಗ್ರೆಸ್‌ ಬಳಸಿದ ಬೆನ್ನಲ್ಲೇ ಇಂಡಿಯನ್‌ ಮನಿ.ಕಾಮ್‌ನ ಸಿಇಒ ಸುಧೀರ್‌ ಅವರ ವಿಡಿಯೊವನ್ನು ಕಾಂಗ್ರೆಸ್‌ ಎಡಿಟ್‌ ಮಾಡಿದೆ. ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಅಸ್ತ್ರ ಪ್ರಯೋಗಿಸಲು ಸುಧೀರ್‌ ವಿಡಿಯೊ ಬಳಸಿಕೊಂಡಿದ್ದು, ಈಗ ಸುಧೀರ್‌ ಅವರು ಸೈಬರ್‌ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಹಾಗಾಗಿ, ಪೋಸ್ಟರ್‌ ರಾಜಕೀಯವು ಕಾಂಗ್ರೆಸ್‌ಗೆ ಕಾನೂನು ಬಿಕ್ಕಟ್ಟು ಎದುರಾಗುವ ಸಾಧ್ಯತೆ ತಂದೊಡ್ಡಿದೆ.

ಸಚಿವರಾದ ಡಾ.ಕೆ.ಸುಧಾಕರ್‌, ಡಾ.ಸಿ.ಎನ್.ಅಶ್ವತ್ಥನಾರಾಯಣ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯಸಭೆ ಸದಸ್ಯ ಜಗ್ಗೇಶ್‌ ಸೇರಿ ಹಲವರಿಗೆ ತಿರುಗೇಟು ನೀಡಲು ಇಂಡಿಯನ್‌ ಮನಿ.ಕಾಮ್‌ನ ಸುಧೀರ್‌ ಅವರ ವಿಡಿಯೊವನ್ನು ತಿರುಚಲಾಗಿದೆ. ಕಾಂಗ್ರೆಸ್‌ ಮುಖಂಡ ಬಿ.ಆರ್.ನಾಯ್ಡು ಅವರು ಅನುಮತಿ ಇಲ್ಲದೆಯೇ ವಿಡಿಯೊ ಬಳಸಿಕೊಂಡ ಹಿನ್ನೆಲೆಯಲ್ಲಿ ಸುಧೀರ್‌ ಅವರು ದೂರು ನೀಡಿದ್ದಾರೆ.

ಎರಡು ದಿನಗಳ ಹಿಂದಷ್ಟೇ ಪೇಸಿಎಂ ಫೋಸ್ಟ್ ಹಚ್ಚಿದ ಪ್ರಕರಣದಲ್ಲಿ ನಾಯ್ಡು ಅವರನ್ನು ಪೊಲೀಸರು ವಶಕ್ಕೆ ಪಡೆದು, ಠಾಣೆಗೆ ಕರೆದುಕೊಂಡು ಹೋಗಿದ್ದರು. ಸ್ಟೇಷನ್‌ ಬೇಲ್‌ ಪಡೆದು ನಾಯ್ಡು ಹೊರಬಂದಿದ್ದರು. ಈಗ ವಿಡಿಯೊ ತಿರುಚಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದಕ್ಕೂ ಮೊದಲು ಪೋಸ್ಟರ್‌ಗಾಗಿ ನಟ ಅಖಿಲ್‌ ಅಯ್ಯರ್‌ ಅವರ ಫೋಟೊವನ್ನು ಕಾಂಗ್ರೆಸ್‌ ಬಳಸಿಕೊಂಡಿತ್ತು. ಅನುಮತಿ ಇಲ್ಲದೆ ಬಳಸಿಕೊಂಡ ಕಾರಣ ದೂರು ದಾಖಲಿಸುವುದಾಗಿ ಅಯ್ಯರ್‌ ತಿಳಿಸಿದ್ದಾರೆ. ಹೂಡಿಕೆ, ಸಾಲ, ಹಣದ ನಿರ್ವಹಣೆ ಸೇರಿ ಹಲವು ವಿಷಯಗಳ ಕುರಿತು ಸುಧೀರ್‌ ಅವರು ಇಂಡಿಯನ್‌ ಮನಿ.ಕಾಮ್‌ ಯೂಟ್ಯೂಬ್‌ ಚಾನೆಲ್ ಹಾಗೂ ಆ್ಯಪ್ ಮೂಲಕ ಮಾಹಿತಿ ನೀಡುತ್ತಾರೆ.

ಇದನ್ನೂ ಓದಿ | ಕಾಂಗ್ರೆಸ್‌ಗೆ ಎರಡು ಸಂಕಷ್ಟ: 40% ಪೋಸ್ಟರ್‌ನಲ್ಲಿ ಸಿನಿಮಾ ನಟನ ಫೋಟೊ, ಸಿಎಂ ಕಡೆಯಿಂದ ಲಿಂಗಾಯತ ಕಾರ್ಡ್‌

Exit mobile version