ಹೊಸಪೇಟೆ: ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ (Karnataka election 2023) ಸಂಬಂಧಿಸಿದಂತೆ ವಿಜಯನಗರ ಜಿಲ್ಲೆಯ (Vijayanagar district) 5 ವಿಧಾನಸಭಾ ಕ್ಷೇತ್ರಗಳಿಂದ ನಾಮಪತ್ರ ಸಲ್ಲಿಸಿದ್ದ 69 ಜನ ಅಭ್ಯರ್ಥಿಗಳ ಪೈಕಿ ಒಟ್ಟು 14 ಜನ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂಪಡೆದಿದ್ದಾರೆ (nomination withdrawal) ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೆಂಕಟೇಶ್ ಬಾಬು ತಿಳಿಸಿದ್ದಾರೆ.
ಕ್ಷೇತ್ರವಾರು ನಾಮಪತ್ರ ಹಿಂಪಡೆದ ಅಭ್ಯರ್ಥಿಗಳ ವಿವರ ಈ ರೀತಿ ಇದೆ.
88-ಹೂವಿನಹಡಗಲಿ ವಿಧಾನಸಭಾ ಕ್ಷೇತ್ರ (ಒಬ್ಬ ಅಭ್ಯರ್ಥಿ)
ಹೂವಿನಹಡಗಲಿ ವಿಧಾನಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದ 9 ಜನ ಅಭ್ಯರ್ಥಿಗಳ ಪೈಕಿ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಕೆ.ಉಚ್ಚಂಗೆಪ್ಪ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ.
89-ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ (4 ಅಭ್ಯರ್ಥಿಗಳು)
ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದ 16 ಜನ ಅಭ್ಯರ್ಥಿಗಳ ಪೈಕಿ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ವಿಜಯ ನಾಯ್ಕ, ಪರಮೇಶ್ವರ ಎಲ್., ಗೀತಾ ಬಿ. ಹಾಗೂ ಆದರ್ಶ ಎಲ್. ನಾಮಪತ್ರವನ್ನು ಹಿಂಪಡೆದಿದ್ದಾರೆ.
ಇದನ್ನೂ ಓದಿ: Wipro layoffs | ವಿಪ್ರೋದಿಂದ 500 ಹೊಸ ಉದ್ಯೋಗಿಗಳ ವಜಾ
90-ವಿಜಯನಗರ ವಿಧಾನಸಭಾ ಕ್ಷೇತ್ರ (ಒಬ್ಬ ಅಭ್ಯರ್ಥಿ)
ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದ 13 ಜನ ಅಭ್ಯರ್ಥಿಗಳ ಪೈಕಿ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಎಚ್.ಜಿ. ವಿರೂಪಾಕ್ಷಿ ನಾಮಪತ್ರವನ್ನು ಹಿಂಪಡೆದಿದ್ದಾರೆ.
96-ಕೂಡ್ಲಿಗಿ ವಿಧಾನಸಭಾ ಕ್ಷೇತ್ರ (4 ಅಭ್ಯರ್ಥಿಗಳು)
ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದ 12 ಜನ ಅಭ್ಯರ್ಥಿಗಳ ಪೈಕಿ ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ಬಂಗಾರಿ ಹನುಮಂತ, ರಾಘವೇಂದ್ರ ಗುರಿಕಾರ್, ಕೆ. ಲಲಿತಾ ಹಾಗೂ ಬಿ. ಹುಲಿಕುಂಟೆಪ್ಪ ಅವರು ತಮ್ಮ ನಾಮಪತ್ರ ಹಿಂಪಡೆದಿದ್ದಾರೆ.
104-ಹರಪನಹಳ್ಳಿ ವಿಧಾನಸಭಾ ಕ್ಷೇತ್ರ (4 ಅಭ್ಯರ್ಥಿಗಳು)
ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದ 19 ಜನ ಅಭ್ಯರ್ಥಿಗಳ ಪೈಕಿ ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ಬಿ.ಆರ್. ಕೃಷ್ಣ ನಾಯ್ಕ, ಬೇಲ್ದಾರ್ ಬಾಷಾಸಾಬ್, ವೀಣಾ ಮಹಾಂತೇಶ ಹಾಗೂ ಪ್ರಭಾಕರ್ ಎಸ್. ನಾಮಪತ್ರವನ್ನು ಹಿಂಪಡೆದಿದ್ದಾರೆ.
ಇದನ್ನೂ ಓದಿ: Karnataka election 2023: ಚುನಾವಣಾ ಕಣದಿಂದ ಹಿಂದೆ ಸರಿದ ಲಿಂಗಸುಗೂರು ವಿಧಾನಸಭಾ ಕ್ಷೇತ್ರದ ಆಪ್ ಅಭ್ಯರ್ಥಿ
ವಿಜಯನಗರ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಅಂತಿಮವಾಗಿ 55 ಜನ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ, ಕ್ಷೇತ್ರವಾರು ಅಭ್ಯರ್ಥಿಗಳ ವಿವರ ಈ ರೀತಿ ಇದೆ.
88-ಹೂವಿನಹಡಗಲಿ ವಿಧಾನಸಭಾ ಕ್ಷೇತ್ರ (8 ಅಭ್ಯರ್ಥಿಗಳು)
ಪುತ್ರೇಶ ಕಾಯಣ್ಣನವರ (ಜೆಡಿಎಸ್), ಕೃಷ್ಣ ನಾಯ್ಕ (ಬಿಜೆಪಿ), ಪಿ.ಟಿ.ಪರಮೇಶ್ವರ ನಾಯ್ಕ (ಕಾಂಗ್ರೆಸ್), ಎನ್.ಶ್ರೀಧರ ನಾಯ್ಕ (ಎಎಪಿ), ಎಲ್.ಅನಿಲ್ ಕುಮಾರ (ಕೆಆರ್‌ಎಸ್), ಡಿ.ಬೋಜ್ಯ ನಾಯ್ಕ (ಕೆಆರ್‌ಪಿಪಿ), ಲಕ್ಕಪ್ಪ ಅಂಗಡಿ (ರಾಣಿ ಚನ್ನಮ್ಮ) , ಎನ್.ಮಲ್ಲೇಶ್ ನಾಯ್ಕ (ಪಕ್ಷೇತರ).
89-ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ (12 ಜನ ಅಭ್ಯರ್ಥಿ)
ಎಚ್.ತಿಪ್ಪೇಸ್ವಾಮಿ (ಬಿಎಸ್‌ಪಿ), ನೇಮಿರಾಜ ನಾಯ್ಕ ಕೆ. (ಜೆಡಿಎಸ್), ಭೀಮಾನಾಯ್ಕ ಎಲ್.ಬಿ.ಪಿ (ಕಾಂಗ್ರೆಸ್), ಬಲ್ಲಾಹುಣ್ಸಿ ರಾಮಣ್ಣ (ಬಿಜೆಪಿ), ಡಾ.ವಿ.ಎಚ್. ಹನುಮಂತಪ್ಪ (ಎಎಪಿ), ಡಿ. ಲಾಲ್ಯಾ ನಾಯ್ಕ (ಇಂಡಿಯನ್ ಮೂವ್‌ಮೆಂಟ್ ಪಕ್ಷ), ಹನಸಿ ಶಿವಮೂರ್ತಿ (ಕೆಆರ್‌ಪಿಪಿ), ಸುಗುಣಾ ಕೆ. (ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ), ಎಚ್.ವಿ.ಸಂತೋಷ್ ಕುಮಾರ್ (ಕೆಆರ್‌ಎಸ್), ಜೆ.ಅಂಜಿನಪ್ಪ (ಪಕ್ಷೇತರ), ಎಚ್.ಮಂಜುನಾಥ ನಾಯ್ಕ (ಪಕ್ಷೇತರ), ಡಾ.ಎ.ಎಂ.ಎ.ಸುರೇಶ್ ಕುಮಾರ್ (ಪಕ್ಷೇತರ).
90-ವಿಜಯನಗರ ವಿಧಾನಸಭಾ ಕ್ಷೇತ್ರ (12 ಅಭ್ಯರ್ಥಿಗಳು)
ಎಚ್.ಆರ್.ಗವಿಯಪ್ಪ (ಕಾಂಗ್ರೆಸ್), ದಾಸರ ಶಂಕರ್ (ಎಎಪಿ), ಸಿದ್ಧಾರ್ಥ್ ಸಿಂಗ್ ಎ. ಠಾಕೂರ್ (ಬಿಜೆಪಿ), ಕಲ್ಲೇಶಿ ಕೆ.ಎಸ್. (ಉತ್ತಮ ಪ್ರಜಾಕೀಯ ಪಕ್ಷ), ಕೆ. ಮಂಜುನಾಥ (ಕೆಆರ್‌ಎಸ್), ಎ. ವಿಜಯಕುಮಾರ (ಕೆಆರ್‌ಪಿಪಿ), ಉಮೇಶ್ ಕಾಗಿ (ಪಕ್ಷೇತರ), ಕಾರ್ತಿಕ್ ಆರ್.ಎಸ್. (ಪಕ್ಷೇತರ), ಕುರುಬರ ಹಾಲಪ್ಪ (ಪಕ್ಷೇತರ), ಪ.ಯ.ಗಣೇಶ್ (ಪಕ್ಷೇತರ), ಎಸ್.ಕೆ.ಚೌಡಪ್ಪ (ಪಕ್ಷೇತರ), ಶಿವನಂದನ (ಪಕ್ಷೇತರ).
96-ಕೂಡ್ಲಿಗಿ ವಿಧಾನಸಭಾ ಕ್ಷೇತ್ರ (8 ಅಭ್ಯರ್ಥಿಗಳು)
ಕೋಡಿಹಳ್ಳಿ ಭೀಮಪ್ಪ (ಜೆಡಿಎಸ್), ಲೋಕೇಶ್ ವಿ. ನಾಯಕ (ಬಿಜೆಪಿ), ನಾರಿ ಶ್ರೀನಿವಾಸ್ (ಎಎಪಿ), ಡಾ.ಶ್ರೀನಿವಾಸ ಎನ್.ಟಿ. (ಕಾಂಗ್ರೆಸ್), ಅಮ್ಮನಕೇರಿ ಚನ್ನವೀರ (ಕೆಆರ್‌ಎಸ್), ಎಚ್. ವೀರಣ್ಣ (ಸಿಪಿಐ), ಶರಣೇಶ ಎಂ. (ಉತ್ತಮ ಪ್ರಜಾಕೀಯ ಪಕ್ಷ), ಕೆ. ನಕುಲಪ್ಪ (ಪಕ್ಷೇತರ).
104-ಹರಪನಹಳ್ಳಿ ಕ್ಷೇತ್ರ (15 ಅಭ್ಯರ್ಥಿಗಳು)
ಜಿ. ಕರುಣಾಕರರೆಡ್ಡಿ (ಬಿಜೆಪಿ), ಅರಸಿಕೆರೆ ಎನ್. ಕೊಟ್ರೇಶ್ (ಕಾಂಗ್ರೆಸ್), ನಾಗರಾಜ ಎಚ್ (ಎಎಪಿ), ಎನ್.ಎಂ.ನೂರ್ ಅಹಮ್ಮದ್ (ಜೆಡಿಎಸ್), ಈಡಿಗರ ಕರಿಬಸಪ್ಪ ನೀಲಗುಂದ (ಕೆಆರ್‌ಎಸ್), ಜಯಣ್ಣ ಕೆ. (ಕರ್ನಾಟಕ ಮಕ್ಕಳ ಪಕ್ಷ) (ವಿದ್ಯುತ್ ಕಂಬ), ರವಿ ಲಂಬಾಣಿ (ಉತ್ತಮ ಪ್ರಜಾಕೀಯ ಪಕ್ಷ) (ಆಟೋ ರಿಕ್ಷಾ), ಜಿ. ಕಲಿವೀರ ಗೌಡ್ರ (ಪಕ್ಷೇತರ) (ಲಾಳಿಕೆ), ಬಿ.ಎಂ. ಗುರುಮೂರ್ತಿ (ಪಕ್ಷೇತರ), ಎ.ಪಿ. ಖಲಂದರ್ (ಪಕ್ಷೇತರ), ರವಿನಾಯ್ಕ ಬಿ. (ಪಕ್ಷೇತರ), ಲತಾ (ಪಕ್ಷೇತರ), ಲತಾ ಮಲ್ಲಿಕಾರ್ಜುನ (ಪಕ್ಷೇತರ), ಸುಮಂತ್ ಕುಮಾರ್ ಆರ್.ಎಸ್. (ಪಕ್ಷೇತರ), ಸಂಗವ್ವ ಕೆ.ಉತ್ತಂಗಿ (ಪಕ್ಷೇತರ).