ಬಸವಕಲ್ಯಾಣ: ತಾಲೂಕಿನ ಯಳವಂತಗಿ ಗ್ರಾಮದ ಅಕ್ಷತಾ ಆರ್. ಮಡಿವಾಳ ಎಂಬ ಪುಟ್ಟ ಬಾಲಕಿ (Little girl) ತಾನು ಕೂಡಿಟ್ಟಿದ್ದ 5 ಸಾವಿರ ರೂಪಾಯಿ ಹಣವನ್ನು ಗುರುವಾರ ನಡೆದ ಬಹಿರಂಗ ಪ್ರಚಾರದ ಕಾರ್ಯಕ್ರಮದಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಅವರಿಗೆ ನೀಡಿದ್ದಾಳೆ.
ಹರಕೆ ಹೊತ್ತಿದ್ದ ಬಾಲಕಿ
ಕಳೆದ ಉಪಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿ ಶರಣು ಸಲಗರ ಅವರು ಕೈಗೊಂಡ ಕಾರ್ಯಗಳು, ಬಡವರ ಬಗ್ಗೆ ಇರುವ ಕಾಳಜಿಯನ್ನು ಮೆಚ್ಚಿರುವುದಾಗಿ ತಿಳಿಸಿರುವ ಪುಟ್ಟ ಬಾಲಕಿ ಅಕ್ಷತಾ, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಟಿಕೆಟ್ ಶರಣು ಸಲಗರ ಅವರಿಗೇ ಸಿಗಲಿ ಎಂದು ಗ್ರಾಮದ ಮಹಾದೇವ ದೇವರಲ್ಲಿ ಹರಕೆ ಹೊತ್ತಿದ್ದಳು.
ಇದನ್ನೂ ಓದಿ: Karnataka Election: ನನ್ನ ತಾಯಿಯನ್ನು ವಿಷ ಕನ್ಯೆ ಎಂದ ಮಿ. ಯತ್ನಾಳ್, ನಿಮ್ಮ ನಾಲಿಗೇನಾ.. ; ಡಿಕೆಶಿ ಆಕ್ರೋಶ
ಹೀಗಾಗಿ ಕಳೆದ ಆರು ತಿಂಗಳಿಂದ ಅತ್ಯಂತ ಜತನದಿಂದ ಉಳಿತಾಯ ಮಾಡಿ ಕೂಡಿಟ್ಟಿದ್ದ 5000 ರೂಪಾಯಿ ಹಣವನ್ನು ಬಿಜೆಪಿ ಅಭ್ಯರ್ಥಿ ಶರಣು ಸಲಗರ ಅವರಿಗೆ ಚುನಾವಣೆ ಖರ್ಚಿಗಾಗಿ ನೀಡಿದ್ದಾಳೆ .
ಪುಟ್ಟ ಬಾಲಕಿಯ ಈ ಕಾರ್ಯಕ್ಕೆ ಗ್ರಾಮದ ಪ್ರಮುಖರು, ಬಿಜೆಪಿ ಕಾರ್ಯಕರ್ತರು, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.