Site icon Vistara News

Karnataka election 2023: ಡಬಲ್ ಎಂಜಿನ್ ಸರ್ಕಾರದ ಯೋಜನೆಗಳೇ ಬಿಜೆಪಿಗೆ ಶ್ರೀರಕ್ಷೆ; ಸಚಿವ ಬಿ.ಶ್ರೀರಾಮುಲು

Karnataka election 2023 Ambitious schemes of double engine govt are key to BJP victory Minister B Sreeramulu

ಕೂಡ್ಲಿಗಿ: ಕೇಂದ್ರ ಮತ್ತು ರಾಜ್ಯ ಡಬಲ್ ಎಂಜಿನ್ ಸರ್ಕಾರದ (Double Engine Government) ಮಹತ್ವಾಕಾಂಕ್ಷಿ ಯೋಜನೆಗಳೇ ಬಿಜೆಪಿ ಗೆಲುವಿಗೆ ಶ್ರೀರಕ್ಷೆ ಯಾಗಿವೆ ಎಂದು ಸಚಿವ ಬಿ. ಶ್ರೀರಾಮುಲು ಹೇಳಿದರು. ತಾಲೂಕಿನ ಆಲೂರು ಗ್ರಾಮದಲ್ಲಿ ಬುಧವಾರ ಬಿಜೆಪಿ ಪಕ್ಷದ ಚುನಾವಣಾ ಪ್ರಚಾರ ಭಾಷಣದಲ್ಲಿ ಅವರು ಮಾತಾನಾಡಿದರು.

800 ಕೋಟಿ ಅನುದಾನ

ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಸರ್ಕಾರ ಅಂದಿನ ಮುಖ್ಯ ಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಬಹು ವರ್ಷಗಳ ಬೇಡಿಕೆಯಾಗಿದ್ದ ನೀರಾವರಿ ಯೋಜನೆಗಾಗಿ ಸುಮಾರು 800 ಕೋಟಿ ಅನುದಾನ ನೀಡಿದರು. ಇದರಿಂದಾಗಿ ತಾಲೂಕಿನ 74 ಕೆರೆಗಳಿಗೆ ಜೀವಜಲ ದೊರಕಿದೆ. ರೈತರ ಬಾಳು ಹಸನು ಮಾಡುವ ಕೆಲಸ ಬಿಜೆಪಿ ಪಕ್ಷದಿಂದ ಆಗಿದೆ. ಅದರಂತೆ ಉಪ ಮಾರುಕಟ್ಟೆಯಿಂದ ಮೇಲ್ದರ್ಜೆಗೆ ಏರಿಸಿ ಪೂರ್ಣ ಪ್ರಮಾಣದ ಮಾರುಕಟ್ಟೆ ಮಾಡಿ ಈ ಭಾಗದ ರೈತರಿಗೆ ಬೆಳೆಯನ್ನು ಮಾರಲು ಎಪಿಎಂಸಿ ಕಲ್ಪಿಸಿದ ಕೀರ್ತಿ ಬಿಜೆಪಿ ಸರ್ಕಾರಕ್ಕೆ ಸಲ್ಲಿದೆ ಎಂದರು.

ಬಡ ಮಕ್ಕಳ ವಿಧ್ಯಾಭ್ಯಾಸಕ್ಕಾಗಿ ಮೊರಾರ್ಜಿ, ಕಿತ್ತೂರು ರಾಣಿ ಚೆನ್ನಮ್ಮ,ಏಕಲವ್ಯ ಹಾಗೂ ಅಂಬೇಡ್ಕರ್ ವಸತಿ ಶಾಲೆಗಳ ನಿರ್ಮಾಣಕ್ಕೆ ನಿವೇಶನದ ಜತೆ ಅವಶ್ಯ ಅನುದಾನ ನೀಡಿ ಈ ಭಾಗದ ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲಗೊಳಿಸಿದೆ ಎಂದರು.

ಇದನ್ನೂ ಓದಿ: Karnataka Election : ಹನೂರಿನಲ್ಲಿ ಬುಡಕಟ್ಟು ಮಹಿಳೆಯರ ಜತೆ ಆತ್ಮೀಯವಾಗಿ ಬೆರೆತ ಪ್ರಿಯಾಂಕಾ, ಅಪ್ಪುಗೆಯ ಸಾಂತ್ವನ

ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸೌಲಭ್ಯ

ವಸತಿ ಹೀನರಿಗೆ 2,300 ಕ್ಕೂ ಅಧಿಕ ಮನೆ ನೀಡಿದೆ. ಇಡೀ ಕ್ಷೇತ್ರದಲ್ಲಿ ಶಿಕ್ಷಣ, ವಸತಿ,ರಸ್ತೆ,ಕುಡಿಯುವ ನೀರು ಸೇರಿದಂತೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸೌಲಭ್ಯಗಳನ್ನು ನೀಡಿದೆ. ಹಾಗಾಗಿ ಮತ್ತೊಮ್ಮೆ ಬಿಜೆಪಿ ಅಭ್ಯರ್ಥಿ ಲೋಕೇಶ್ ವಿ ನಾಯಕ ಅವರನ್ನ ಪ್ರಚಂಡ ಬಹುಮತದಿಂದ ಆಯ್ಕೆ ಮಾಡುವಂತೆ ಕೋರಿದರು.

ಮಾಜಿ ಸಚಿವ ಬಿ.ಶ್ರೀರಾಮುಲು ಗುಡೇಕೋಟೆ ಹೋಬಳಿ ಹಾಗೂ ಹೊಸಹಳ್ಳಿ ಹೋಬಳಿಯ ಅನೇಕ ಹಳ್ಳಿಗಳಲ್ಲಿ ಬಿಜೆಪಿ ಅಭ್ಯರ್ಥಿ ಲೋಕೇಶ್ ನಾಯಕ ಪರ ಪ್ರಚಾರ ಕೈಗೊಂಡು ಮತಯಾಚನೆ ಮಾಡಿದರು.

ಈ ಸಂಧರ್ಭದಲ್ಲಿ ಬಿಜೆಪಿ ಮುಖಂಡರಾದ ಎಸ್.ಪಿ.ಪ್ರಕಾಶ್, ಕೆ.ಎಚ್.ವೀರನಗೌಡ, ಬಿ.ಭೀಮೇಶ್, ಮಾಜಿ ಜಿಪಂ ಸದಸ್ಯ ಎಚ್.ರೇವಣ್ಣ, ಮಾಜಿ ಜಿಪಂ ಅಧ್ಯಕ್ಷ ಜಿ.ಉಮೇಶ್, ಬಣವಿಕಲ್ಲು ನಾಗರಾಜ, ನಾರಯಣಿ, ಆಲೂರು ಮಲ್ಲಿಕಾರ್ಜುನ, ಪಾಪನಾಯಕ, ಗ್ರಾಪಂ ಸದಸ್ಯ ಮೂರ್ತಿ, ಬೋರಣ್ಣ,ಹಿಮಾಮ್, ಹೀರಾಸಾಬ್, ಪವಿತ್ರ, ಗೀತಾ ಸೇರಿದಂತೆ ಅನೇಕರು ಇದ್ದರು.

Exit mobile version