Site icon Vistara News

Karnataka election: ಬಿಜೆಪಿ ಸರ್ಕಾರ ಸ್ಥಾಪನೆಯಲ್ಲಿ ರೆಡ್ಡಿ ಪಾತ್ರ ಏನಿತ್ತು ಬಿಎಸ್‌ವೈಗೆ ಗೊತ್ತು ಎಂದ ಭೀಮಾಶಂಕರ್

Bheema shankar

Bheema shankar

ಗಂಗಾವತಿ: 2008ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ (BJP Government) ಅಸ್ತಿತ್ವಕ್ಕೆ ಬರಲು ಆಗ ಜನಾರ್ದನ ರೆಡ್ಡಿ (G Janardhana Reddy) ಅವರ ಪಾತ್ರ ಏನಿತ್ತು ಎಂಬುದನ್ನು ಬಿಜೆಪಿಯ ಈಗಿನ ನಾಯಕರು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ (bs yediyurappa) ಅವರನ್ನು ಕೇಳಿ ತಿಳಿದುಕೊಳ್ಳಬೇಕು ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ಭೀಮಾಶಂಕರ್ ಹೇಳಿದರು. ‌

ನಗರದ ಖಾಸಗಿ ಹೊಟೇಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗಂಗಾವತಿ ಉಸ್ತುವಾರಿಯಾಗಿರುವ ಬಳ್ಳಾರಿಯ ಪ್ರಭು ಕಪ್ಪಗಲ್, ದೆಹಲಿಯ ಶಾಸಕ ಅಜಯ್ ಮಹರ್ ಮತ್ತು ಬಳ್ಳಾರಿ ಸಂಸದ ದೇವೇಂದ್ರಪ್ಪ ಮಾಡಿದ್ದ ಟೀಕೆಗೆ ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ: Karnataka Election 2023: ಕಾಡುಗೊಲ್ಲ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ, ಪ್ರಿಯಾಂಕಾ ವಾದ್ರಾ ಭರವಸೆ

ಬಿಜೆಪಿಗೆ ಪ್ರಭು ಕಪ್ಪಗಲ್ ಮತ್ತು ರೆಡ್ಡಿಯಿಂದ ಸಂಸದರಾಗಿರುವ ದೇವೇಂದ್ರಪ್ಪ ನಿನ್ನೆ ಮೊನ್ನೆ ಪಕ್ಷಕ್ಕೆ ಬಂದಿದ್ದಾರೆ. ಆದರೆ 2008 ರಲ್ಲಿ ಆರ್‌ಎಸ್ಎಸ್ ಮನೆಯಾಗಿರುವ ಕೇಶವ ಕೃಪಾದ ನಡುಮನೆಯಲ್ಲಿ ಅಂದು ಏನು ನಡೆದಿತ್ತು ಎಂಬುದನ್ನು ದೇವೇಂದ್ರಪ್ಪ ಅವರಿಗಾಗಲಿ, ಪ್ರಭು ಕಪ್ಪಗಲ್ ಗಾಗಲಿ ಗೊತ್ತಿಲ್ಲ. ಐತಿಹಾಸ ತಿಳಿಯದೇ ಯಾರನ್ನೂ ತೇಜೋವಧೆ ಮಾಡುವ ಕೆಲಸ ಮಾಡಬಾರದು.

ಹಿರಿಯ ನಾಯಕರ ಬಳಿ ಕೇಳಿ ತಿಳಿದುಕೊಳ್ಳಿ

2008 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಜನಾರ್ದನ ರೆಡ್ಡಿ ನಿರ್ವಹಿಸಿದ ಪಾತ್ರ ಇಂದು ಯಡಿಯೂರಪ್ಪ, ಈಶ್ವರಪ್ಪ, ಸದಾನಂದಗೌಡ, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಅವರಂತಹ ಹಿರಿಯರಿಗೆ ಮಾತ್ರ ಗೊತ್ತು. ಈ ಬಗ್ಗೆ ಅನುಮಾನವಿದ್ದರೆ ಸ್ವತಃ ನಿಮ್ಮ ಪಕ್ಷದ ಹಿರಿಯ ನಾಯಕರನ್ನು ಕೇಳಿ ತಿಳಿದುಕೊಂಡು ಮಾತನಾಡಿ ಎಂದು ಭೀಮಾಶಂಕರ್ ತಿರುಗೇಟು ನೀಡಿದರು.

ರಾಜ್ಯದಲ್ಲಿ 40 ಪರ್ಸೆಂಟೇಜ್ ಲೂಟಿ ಮಾಡಿದ್ದು ಬಿಜೆಪಿ ಸರ್ಕಾರವೆ ಹೊರತು ಜನಾರ್ದನರೆಡ್ಡಿ ಅಲ್ಲ. ರೆಡ್ಡಿ ಅವರ ರಾಜಕೀಯ ಜೀವನದಲ್ಲಿ ಆರೋಪಕ್ಕೆ ಎಲ್ಲಾದರೂ ಒಂದು ಸಣ್ಣ ಭ್ರಷ್ಟಾಚಾರದ ಕಳಂಕವಿಲ್ಲದೇ ಆಡಳಿತ ಮಾಡಿದ್ದಾರೆ. ಗಣಿ ಹಗರಣದಲ್ಲಿ ವಿನಃ ಕಾರಣ ರಾಜಕೀಯ ಒತ್ತಡದಿಂದ ಸಿಲುಕಿಸಲಾಗಿದೆ. ಇಂದಿಗೂ ದೇಶದ ಯಾವುದೇ ನ್ಯಾಯಾಲಯಗಳು ರೆಡ್ಡಿಯನ್ನು ಅಪರಾಧಿ ಎಂದು ಘೋಷಣೆ ಮಾಡಿಲ್ಲ. ಆದರೆ ವಿಪಕ್ಷ ನಾಯಕರು ವೈಯಕ್ತಿಕ ಟೀಕೆಗಳನ್ನು ಬಿಟ್ಟು ಅಭಿವೃದ್ಧಿ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಬರುವಂತೆ ಆಗ್ರಹಿಸಿದರು.

ದಾಖಲೆ ಸಮೇತ ಚರ್ಚೆಗೆ ಬರಲಿ

ಇನ್ನು ಪೌರಾಣಿಕ ಮತ್ತು ಐತಿಹಾಸಿಕ ಮಹತ್ವದ ಅಂಜನಾದ್ರಿ ಪರ್ವತದ ಅಭಿವೃದ್ಧಿ ವಿಚಾರದಲ್ಲಿ ರಾಜ್ಯ ಸರ್ಕಾರ 125 ಕೋಟಿ ಹಣ ಬಿಡುಗಡೆ ಮಾಡಿದೆ ಎಂದು ಗರ್ವ ಪಟ್ಟುಕೊಳ್ಳುವ ಬಿಜೆಪಿಗರು ದಾಖಲೆ ಸಮೇತ ಎಷ್ಟು ಅಭಿವೃದ್ಧಿಯಾಗಿದೆ ಎಂಬುವುದನ್ನು ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸಿದರು. ವಾಸ್ತವದಲ್ಲಿ 125 ಕೋಟಿ ರುಪಾಯಿಯಲ್ಲಿ ಬಳಕೆಯಾಗಿದ್ದು ಕೇವಲ 3.25 ಕೋಟಿ ಮಾತ್ರ. ಈ ಬಗ್ಗೆ ಬೇಕಿದ್ದರೆ ದಾಖಲೆ ಸಮೇತ ಚರ್ಚೆಗೆ ಬರಲಿ ಎಂದು ಸವಾಲ್‌ ಹಾಕಿದರು.

Exit mobile version