Site icon Vistara News

Karnataka election 2023: ಈ ಬಾರಿ ಸತ್ಯ ಮತ್ತು ಸುಳ್ಳುಗಳ ನಡುವೆ ಚುನಾವಣೆ; ಎಎಪಿ ಮುಖಂಡ ಮುಖ್ಯಮಂತ್ರಿ ಚಂದ್ರು

Karnataka election 2023 Between truth and lies this time assembly election AAP leader Chief Minister Chandru

ಬಳ್ಳಾರಿ: ಈ ಬಾರಿಯ ವಿಧಾನಸಭಾ ಚುನಾವಣೆ (Karnataka election 2023) ಸತ್ಯ ‌ಮತ್ತು ಸುಳ್ಳುಗಳ ನಡುವೆ ನಡೆಯುವ ಚುನಾವಣೆಯಾಗಿದೆ ಎಂದು ಎಎಪಿ ಮುಖಂಡ ಮುಖ್ಯಮಂತ್ರಿ ಚಂದ್ರು ‌ಹೇಳಿದರು. ನಗರದ ಮರ್ಚೆಡ್ ಹೋಟೆಲ್ ನಲ್ಲಿ‌ ಎಎಪಿ ಪಕ್ಷದಿಂದ ಶುಕ್ರವಾರ ನಡೆದ‌ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ

ಪ್ರಾಮಾಣಿಕ ಮತ್ತು ಅಪ್ರಾಮಾಣಿಕರ ಚುನಾವಣೆಯಾಗಿದೆ. ಏಕೆಂದರೆ ಈಗಾಗಲೇ ‌ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆಡಳಿತ ನಡೆಸಿದ್ದಾರೆ. ಅದರೆ ಇಲ್ಲಿಯವರೆಗೆ ರಾಜ್ಯದಲ್ಲಿ ಅಭಿವೃದ್ಧಿಯಾಗದೆ ಭ್ರಷ್ಟಾಚಾರ ಹೆಚ್ಚಾಗಿದೆ, ಪ್ರಧಾನಮಂತ್ರಿ ಉಚಿತವಾಗಿ ಕೊಡುವುದರಿಂದ ರಾಜ್ಯ ದಿವಾಳಿತನಯಾಗುತ್ತದೆ ಎಂದು ಹೇಳುತ್ತಿದ್ದಾರೆ ಎಂದು ದೂರಿದರು.

ಇದನ್ನೂ ಓದಿ: Sudha Murthy : ನನ್ನ ಮಗಳು ಗಂಡನನ್ನು ಪ್ರಧಾನಿ ಮಾಡಿದ್ದಾಳೆ: ಸುಧಾಮೂರ್ತಿ ಬಣ್ಣನೆ

ಕಾಂಗ್ರೆಸ್ ಪಕ್ಷ ಆಪ್‌ ಆದ್ಮಿ ಪಕ್ಷದ ಪ್ರಣಾಳಿಕೆಯನ್ನು ಕಾಪಿ ಮಾಡುತ್ತಿದೆ. ಜೆಡಿಎಸ್ ಪಕ್ಷ ಪ್ರಣಾಳಿಕೆಯನ್ನು ಪೂರ್ಣ ಪ್ರಮಾಣದಲ್ಲಿ ಕಾಪಿ‌ ಮಾಡಲಾಗಿದೆ ಎಂದರು. ಎಎಪಿ ಪಕ್ಷದಲ್ಲಿ ಸರಳ, ಸಜ್ಜನರ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದೆ. ಅದರೆ, ಮೂರು ಪಕ್ಷಗಳು ನೂರರು ಕೋಟಿ ರೂ. ಆಸ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ ಎಂದರು ಮುಖ್ಯಮಂತ್ರಿ ಚಂದ್ರು.
ಎಲ್ಲ ಪಕ್ಷಗಳಲ್ಲೂ ಇದ್ದು ನಾಯಕರನ್ನು ರಿಪೇರಿ ಮಾಡಲಾಗದೆ ‌ಪಕ್ಷ ತ್ಯಜಿಸಿದೆ ಎಂದು ಇದೇ ವೇಳೆ ಚಂದ್ರು ತಮ್ಮ ಪಕ್ಷಾಂತರದ ಕಥೆ ಹೇಳಿದರು. ಈ ಸಂದರ್ಭದಲ್ಲಿ ಕಿರಣಕುಮಾರ್, ಸಯ್ಯದ್ ಅಮಿರ್‌ ಖಾನ್, ಜಮೀರ್ ಅಹ್ಮದ್ ಹಾಗೂ ಇತರರಿದ್ದರು.

Exit mobile version