Site icon Vistara News

Karnataka election 2023: ಲೋಕಸಭೆ ಎಲೆಕ್ಷನ್‍ಗಾಗಿ ಮಗ, ಅಮ್ಮ ಅಂತಾ ಹೇಳ್ಕೊತ್ತಿದ್ದಾರೆ; ಜೆಡಿಎಸ್ ವಿರುದ್ಧ ಪ್ರೀತಂ ಗೌಡ ಟೀಕೆ

Preetham Gowda

Preetham Gowda

ಹಾಸನ, ಕರ್ನಾಟಕ: ಮುಂಬರುವ ಲೋಕಸಭೆ ಎಲೆಕ್ಷನ್‌ನಲ್ಲಿ ತಮ್ಮ ಪುತ್ರನನ್ನು ಗೆಲ್ಲಿಸಿಕೊಳ್ಳುವುದಕ್ಕಾಗಿ ಜೆಡಿಎಸ್‌ನ ಭವಾನಿ ರೇವಣ್ಣ (Bhavani Ravanna) ಹಾಗೂ ಎಚ್ ಡಿ ರೇವಣ್ಣ ಅವರು ಎಲ್ಲ ಸರ್ಕಸ್ ಮಾಡುತ್ತಿದ್ದಾರೆ. 2023ರಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲಲಿ ಎಂದು ಯಾವ ಕೆಲಸವನ್ನೂ ಮಾಡುತ್ತಿಲ್ಲ ಎಂದು ಹಾಸನ ಬಿಜೆಪಿ ಅಭ್ಯರ್ಥಿ ಪ್ರೀತಮ್ ಗೌಡ (Preetham Gowda) ಅವರು ಕುಟುಕಿದ್ದಾರೆ(Karnataka election 2023).

ಭವಾನಿ ರೇವಣ್ಣ ಅವರು, ಜೆಡಿಎಸ್ ಅಭ್ಯರ್ಥಿ ಸ್ವರೂಪ್ ತಮ್ಮ ಮಗ ಎಂದು ಹೇಳಿಕೊಂಡಿದ್ದಾರೆ. ಅವರ ಪ್ರೀತಿ ಸ್ವರೂಪ್ ಅವರ ಮೇಲಿದೆ ಅದು ಗೊತ್ತಾಗಿದೆ. ಅವರಿಬ್ಬರೂ ಪರಸ್ಪರ ಯಾವುದೇ ರೀತಿಯ ಮಾತನಾಡಿಕೊಳ್ಳದೇ. ನಮ್ಮ ಹಾಸನದ ಪಾಸಿಟಿವ್ ಎನರ್ಜಿ ಇದೆ, ಅಭಿರುಚಿ ಇದೆ ಅದನ್ನ ಹೋಗೋದಕ್ಕೆ ಬಿಡದೇ, ಇಬ್ಬರೂ ಹೊಂದಾಣಿಕೆ ಮಾಡಿಕೊಂಡಿರೋದು ಉತ್ತಮವಾದ ಬೆಳವಣಿಗೆ. ಅವರ ಪಕ್ಷದ ದೃಷ್ಟಿಯಿಂದ ಒಳ್ಳೆಯದು ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.

ಲೋಕಸಭೆ ಎಲೆಕ್ಷನ್‌ನಗೆ ಕಾರ್ಯಕರ್ತರನ್ನು ಉಳಿಸಿಕೊಳ್ಳುವುದಕ್ಕಾಗಿ ಈ ಎಲ್ಲ ಸರ್ಕಸ್ ಮಾಡುತ್ತಿದ್ದಾರೆ. ಕಾರ್ಯಕರ್ತರನ್ನ ಉಳಿಸಿಕೊಳ್ಳಬೇಕು ಅನ್ನೋ ಕಾರಣಕ್ಕೆ ಚುನಾವಣೆ ಮಾಡ್ತಾ ಇದ್ದಾರೆ. ಈ ರೀತಿ 1947ರಲ್ಲಿ ಮಾಡಿದ್ದರೆ ಜನರಿಗೆ ಅರ್ಥ ಆಗ್ತಾ ಇರಲಿಲ್ಲ ಅಂತಾ ಅನ್ಕೋಬಹುದು. ಆಗ ಮಾಧ್ಯಮ ಸ್ಟ್ರಾಂಗ್ ಇರಲಿಲ್ಲ, ಇವಾಗ ಏನ್ ಮಾಡಿದ್ರೂ ಜನಸಾಮಾನ್ಯರಿಗೆ ಅರ್ಥ ಆಗುತ್ತದೆ. ಯಾವ ಕಾರಣಕ್ಕೆ ಒಪ್ಪಿಕೊಂಡಿದ್ದಾರೆ, ಯಾವ ಕಾರಣಕ್ಕೆ ಕೆಲಸ ಮಾಡ್ತಾ ಇದ್ದಾರೆ ಎಂದು ಜನರು ತಿಳಿದುಕೊಳ್ಳುತ್ತಾರೆ.

ಬಿಟ್ಟು ಹೋಗಿದ್ದ ದತ್ತಣ್ಣನನ್ನ ವಾಪಸ್ಸು ಹೋಗಿ ಎಲ್ಲರೂ ಹೋಗಿ ಕರ್ಕೊಂಡ್ ಬಂದಿದ್ದು ಯಾಕೆ? ಹಾಸನದಲ್ಲಿ ಯಾರೂ ಕ್ಯಾಂಡಿಡೆಟ್..? ಹೆಸರು ಗೊತ್ತಿಲ್ಲ ಅಂತಾ ಹೇಳಿದವರು, ಇವಾಗ ನನ್ನ ಮಗ ಅಂತಾ ಹೇಳ್ತಾ ಇದ್ದಾರೆ ಎಲ್ಲಾ ಸಹಜ ಅಲ್ವಾ ರಾಜಕಾರಣ ಅಲ್ವಾ? 2024ಕ್ಕೆ ನಾವೇನಾದ್ರೂ ಉಳ್ಕೋಬೇಕು ಅಂದ್ರೆ ಏನಾದ್ರೂ ತಂತ್ರ ಮಾಡ್ಬೇಕಲ್ಲ ಅಂತಾ ಈಗ ಮಗ.. ಅಮ್ಮ.. ತಂದೆ.. ತಾಯಿ.. ಎಲ್ಲಾ ಜ್ಞಾಪಕಕ್ಕೆ ಬರ್ತಾ ಇದ್ದಾರೆ ಎಂದು ಪ್ರೀತಂ ಗೌಡ ಹರಿಹಾಯ್ದಿದ್ದಾರೆ.

ಇದನ್ನೂ ಓದಿ: Karnataka Election 2023: ಹಾಸನ ಬಿಟ್ಟು ಓಡಿಸುತ್ತೇವೆ; ಪ್ರೀತಂ ಗೌಡ ವಿರುದ್ಧ ಭವಾನಿ ರೇವಣ್ಣ ವಾಗ್ದಾಳಿ

ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷ ಇರಲೇಬೇಕು. ವಿರೋಧ ಪಕ್ಷ ಇರಲಿಲ್ಲ ಅಂದ್ರೆ ಪರಿಣಾಮಕಾರಿಯಾಗಿ ಕೆಲಸ ಮಾಡೋದಕ್ಕೆ ಆಗೋದಿಲ್ಲ. ಹಾಗಾಗಿ ಅವರ ಪಾರ್ಟಿ(ಜೆಡಿಎಸ್) ಬಗ್ಗೆ ಏನೂ ಮಾತಾಡೋದಿಲ್ಲ ಎಂದು ಪ್ರೀತಂ ಗೌಡ ಹೇಳಿದ್ದಾರೆ.

ಜೆಡಿಎಸ್ ವಿರುದ್ಧ ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ ವಾಗ್ದಾಳಿ

Exit mobile version