Site icon Vistara News

Karnataka Election 2023: ಮುಂದುವರಿದ ಬಿಜೆಪಿ ಬಂಡಾಯ; ಪುಷ್ಪಾಂಜಲಿ ಗುನ್ನಾಳ್ ಸೇರಿ ಅನೇಕರು ಕಾಂಗ್ರೆಸ್‌ ಸೇರ್ಪಡೆ

Karnataka election 2023 BJP ticket aspirant Pushpanjali Gunnal many BJP leaders join Congress

ಕಾರಟಗಿ: ಪ್ರಸಕ್ತ ಸಾಲಿನ ವಿಧಾನಸಭಾ ಚುನಾವಣೆಯಲ್ಲಿ (Karnataka election 2023) ಕನಕಗಿರಿ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಪುಷ್ಪಾಂಜಲಿ ಗುನ್ನಾಳ್ ಸೇರಿದಂತೆ ಅನೇಕ ಮುಖಂಡರು ಶನಿವಾರ ಕಾಂಗ್ರೆಸ್ ಸೇರ್ಪಡೆಯಾಗುವ ಮೂಲಕ ಬಿಜೆಪಿಗೆ ಶಾಕ್ ಕೊಟ್ಟಿದ್ದಾರೆ.

ಸಿದ್ದಾಪುರದ ಬಿಜೆಪಿ ಮುಖಂಡ ಮಲ್ಲಿಕಾರ್ಜುನಗೌಡ ಹೊಸಮನಿ ಅವರ ಮನೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪುಷ್ಪಾಂಜಲಿ ಗುನ್ನಾಳ್ ಅವರ ಜತೆಯಲ್ಲಿ ವೀರೇಶಪ್ಪ ಸುಂಕದ್, ಶರಣೇಗೌಡ ಮಾಲಿಪಾಟೀಲ್, ಪಂಪನಗೌಡ ಹೊಸಮನಿ, ಬುಡ್ಡನಗೌಡ ಹೊಸಮನಿ, ವರುಣ್ ಗುನ್ನಾಳ್, ಶಿವಕುಮಾರ್ ಸುಂಕದ್ ಸೇರಿದಂತೆ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾದರು.

ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾದ ಮುಖಂಡರು ಈ ವೇಳೆ ಮಾತನಾಡಿ, ಕಳೆದ ಹದಿನೇಳು ವರ್ಷಗಳಿಂದ ಬಿಜೆಪಿ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದು, ವಿವಿಧ ಸ್ತರದಲ್ಲಿ ಪದಾಧಿಕಾರಿಯಾಗಿ ಪಕ್ಷದ ಸಂಘಟನೆಗೆ ಸಾಕಷ್ಟು ಶ್ರಮಿಸಿದ್ದೆವು. ಆದರೆ, ಶಾಸಕ ಬಸವರಾಜ್ ದಡೇಸುಗೂರು ಹಾಗೂ ಕೆಲ ಬಿಜೆಪಿಯ ಹಿರಿ ಮುಖಂಡರು ನಿಷ್ಠಾವಂತ ಕಾರ್ಯಕರ್ತರನ್ನು ನಿರ್ಲಕ್ಷ್ಯ ಮಾಡಿರುವುದು ಮತ್ತು ಇವರುಕ್ಷೇತ್ರದಲ್ಲಿ ಮಾಡುತ್ತಿರುವ ಭ್ರಷ್ಟಾಚಾರ, ದುರಾಡಳಿತ, ಗೂಂಡಾಗಿರಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ ಎಂದು ಆರೋಪಿಸಿದ ಅವರು, ಇದರಿಂದಾಗಿ ಕ್ಷೇತ್ರದ ಜನಮಾನಸದಲ್ಲಿ ಅಸಮಾಧಾನ ಹೆಚ್ಚಾಗಿದ್ದರಿಂದ ಬೇಸತ್ತು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದೇವೆ ಎಂದು ತಿಳಿಸಿದರು.

Exit mobile version