ಸಿರುಗುಪ್ಪ: ಬಸವರಾಜ್ ಬೊಮ್ಮಾಯಿ (Basavaraj Bommai) ಬಹಳ ಭ್ರಷ್ಟ ಮುಖ್ಯಮಂತ್ರಿ, ಇವರಷ್ಟು ಭ್ರಷ್ಟರು ಇತಿಹಾಸದಲ್ಲಿಯೇ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು.
ಜಿಲ್ಲೆಯ ಸಿರುಗುಪ್ಪದಲ್ಲಿ ಗುರುವಾರ ನಡೆದ ಪಕ್ಷದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಲಿಂಗಾಯತರಲ್ಲಿ ಒಳ್ಳೆಯ ಸಚಿವರಿದ್ದಾರೆ, ಲಿಂಗಾಯತರ ಬಗ್ಗೆ ನನ್ನ ಹೇಳಿಕೆ ಟ್ವಿಸ್ಟ್ ಮಾಡುವುದಕ್ಕೆ ನೋಡಿದರೂ ಆದರೆ ಅದು ಠುಸ್ಸು ಆಯ್ತು ಎಂದರು.
ಇದನ್ನೂ ಓದಿ: Karnataka Election : ಮೋದಿ ಅಂದ್ರೆ ವಿಷದ ಹಾವಿದ್ದಂತೆ; ಮಲ್ಲಿಕಾರ್ಜುನ ಖರ್ಗೆ ವಿವಾದಾತ್ಮಕ ಹೇಳಿಕೆ
ಲಿಂಗಾಯತರ ಬಗ್ಗೆ ಅಪಾರ ಗೌರವ
ನನಗೆ ಲಿಂಗಾಯತರ ಬಗ್ಗೆ ಅಪಾರ ಗೌರವವಿದೆ. ಕಳೆದ ಬಾರಿ ಲಿಂಗಾಯತರಿಗೆ 47 ಕ್ಷೇತ್ರದಲ್ಲಿ ಟಿಕೆಟ್ ಕೊಟ್ಟರೆ, ಈ ಬಾರಿ 53 ಕಡೆ ಟಿಕೆಟ್ ಕೊಟ್ಟಿದ್ದೇವೆ. ಕಾಂಗ್ರೆಸ್‌ಗೆ ಎಲ್ಲ ಜಾತಿಯ ವೋಟು ಬರುತ್ತದೆ. ಎಲ್ಲಾ ಜಾತಿಯನ್ನು ಸಮಾನತೆಯಿಂದ ನೋಡುವ ಪಕ್ಷ ಕಾಂಗ್ರೆಸ್ ಎಂದರು.
ಭ್ರಷ್ಟಾಚಾರದ 8 ಪ್ರಕರಣ ಸಿಬಿಐಗೆ
ನಾನು ಐದು ವರ್ಷ ಸರ್ಕಾರ ಮಾಡಿದ್ದೇನೆ. ಭ್ರಷ್ಟಾಚಾರದ ಆರೋಪ ಬಂದರೆ ಅಂದೇ ರಾಜೀನಾಮೆ ಕೊಡುತ್ತಿದ್ದೆ ಎಂದ ಅವರು, ನಮ್ಮ ಅವಧಿಯಲ್ಲಿ ಭ್ರಷ್ಟಾಚಾರದ 8 ಪ್ರಕರಣ ಸಿಬಿಐಗೆ ಕೊಟ್ಟಿದ್ದೇನೆ. ಎಲ್ಲಾ ಆರೋಪ ಸುಳ್ಳು ಎಂದು ಸಿಬಿಐ ವರದಿ ನೀಡಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಮಾಜಿ ಶಾಸಕ ಚಂದ್ರಯ್ಯಸ್ವಾಮಿ, ಮುಖಂಡರಾದ ಚೊಕ್ಕಬಸವಗೌಡ, ಕಾಂಗ್ರೆಸ್ ಅಭ್ಯರ್ಥಿ ಬಿ.ಎಂ.ನಾಗರಾಜ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿ.ಶಿವಯೋಗಿ ಇತರರು ಇದ್ದರು.