Site icon Vistara News

Karnataka Election 2023: ಮೋದಿ ವಿಷದ ಹಾವು ಎಂದು ಹೇಳಿದ ಕುರಿತು ಖರ್ಗೆ ವಿಷಾದ: ಇಲ್ಲಿದೆ, ವಿಧಾನಸಭೆ ಚುನಾವಣೆಯ ಪ್ರಮುಖ ಬೆಳವಣಿಗೆಯ ಹೈಲೈಟ್ಸ್‌

Karnataka Election 2023 Live updates Check details In Kannada
Harish Kera

ಶಿವಮೊಗ್ಗದ ಗ್ರಾಮಸ್ಥರೊಂದಿಗೆ ಮೋದಿ ಸಂವಾದ

ಶಿವಮೊಗ್ಗ: ರಾಜ್ಯದ ಬಿಜೆಪಿ ಕಾರ್ಯಕರ್ತರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಆನ್‌ಲೈನ್ ಮೂಲಕ ಸಂವಾದ ನಡೆಸಲಿದ್ದಾರೆ. ಬೆಳಿಗ್ಗೆ 9.30ಕ್ಕೆ ಶಿವಮೊಗ್ಗದ ಗೊಂಧಿ ಚಟ್ನಹಳ್ಳಿಯ ಸಭಾಭವನದಲ್ಲಿ ಕಾರ್ಯಕ್ರಮ ಆಯೋಜನೆಯಾಗಿದೆ.

Mallikarjun Tippar

ಗೆಲ್ಲಿಸುವಂತೆ ಕಣ್ಣೀರು ಹಾಕಿದ ಬಬಲೇಶ್ವರ ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲ್

ಒಂದು ಬಾರಿ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದು ಬಿಜೆಪಿ (BJP) ಅಭ್ಯರ್ಥಿಯೊಬ್ಬರು ಕಣ್ಣೀರಿಟ್ಟ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರ ವ್ಯಾಪ್ತಿಯ ಕನಮಡಿ ಗ್ರಾಮದಲ್ಲಿ ಬುಧವಾರ ನಡೆದಿದೆ. ಬಿಜೆಪಿಯ ಅಭ್ಯರ್ಥಿ ವಿಜುಗೌಡ ಪಾಟೀಲ್ (Vijugouda Patil) ಅವರು ಗ್ರಾಮದ ಪ್ರಚಾರ ಸಭೆಯಲ್ಲಿ ಕಣ್ಣೀರಿಡುತ್ತಾ, ''ಒಂದೇ ಒಂದು ಬಾರಿ ತಮ್ಮ ಸೇವೆ ಮಾಡಲು ಶಾಸಕ ಸ್ಥಾನಕ್ಕೆ ಆಯ್ಕೆ ಮಾಡುವಂತೆ'' ಮತದಾರರನ್ನು ಕೇಳಿಕೊಂಡಿದ್ದಾರೆ. ಬಬಲೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ ಬಿ ಪಾಟೀಲ್ ವಿರುದ್ಧ ವಿಜುಗೌಡ ಪಾಟೀಲ್ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ(Karnataka Election 2023).

Ramaswamy Hulakodu

ರಾಜ್ಯದಲ್ಲಿರುವ ಮತದಾರರ ಸಂಖ್ಯೆ: 5,30,85,566

ರಾಜ್ಯದಲ್ಲಿ ಒಟ್ಟು 5,30,85,566 ಮತದಾರರಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಇವರಲ್ಲಿ 11,71,558 ಮಂದಿ ಹೊಸ ಮತದಾರರಾಗಿದ್ದಾರೆ.

ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Mallikarjun Tippar

ಜಗದೀಶ್ ಶೆಟ್ಟರ್ ಅವರನ್ನು ಸೋಲಿಸುವ ಜವಾಬ್ದಾರಿ ನಂದು, ಸವದಿಯನ್ನು ನೀವು ಸೋಲಿಸಿ; ಅಥಣಿ ಮತದಾರರಿಗೆ ಯಡಿಯೂರಪ್ಪ ಕರೆ

ಬಿಜೆಪಿ ಪಕ್ಷಕ್ಕೆ ದ್ರೋಹ ಬಗೆದು ಕಾಂಗ್ರೆಸ್ ಪಕ್ಷವನ್ನು ಸೇರಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಅವರನ್ನು ನಾನು ಸೋಲಿಸುತ್ತೇನೆ. ಅದು ನನ್ನ ಜವಾಬ್ದಾರಿ. ಹಾಗೆಯೇ ಪಕ್ಷಕ್ಕೆ ವಿಶ್ವಾಸ ದ್ರೋಹ ಮಾಡಿರುವ ಲಕ್ಷ್ಮಣ್ ಸವದಿಯನ್ನು ನೀವು(ಅಥಣಿ ಮತದಾರರು) ಸೋಲಿಸಬೇಕು. ಈ ಬಾರಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಠಳ್ಳಿ 30 ಸಾವಿರ ಮತಗಳಿಂದ ಗೆಲ್ಲಲಲಿದ್ದಾರೆ ಎಂದು ಬಿ ಎಸ್ ಯಡಿಯೂರಪ್ಪ ಹೇಳಿದರು.

Mallikarjun Tippar

ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ವಿರುದ್ದ ಚುನಾವಣಾ ಆಯೋಗಕ್ಕೆ ದೂರು

ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಹಾಗೂ ಜೆಡಿಎಸ್ ಅಭ್ಯರ್ಥಿ ಆಲೂರು ಮಲ್ಲು ನಡುವಿನ ಸಂಭಾಷಣೆಯ ಆಡಿಯೋ ಕುರಿತು ವಿಸ್ತಾರ ನ್ಯೂಸ್ ಗೆ ಸ್ಪಷ್ಟನೆ ನೀಡಿದ ಚಾಮರಾಜನಗರ ಜೆಡಿಎಸ್ ಅಭ್ಯರ್ಥಿ ಆಲೂರು ಮಲ್ಲು, ಸೋಮಣ್ಣ ಅವರು ಕರೆ ಮಾಡಿ, ನಾಮಪತ್ರ ವಾಪಸ್ ಪಡೆಯಲು ಹಣದ ಆಮಿಷ ಒಡ್ಡಿದರು ಎಂದು ತಿಳಿಸಿದ್ದಾರೆ. ಈ ಪ್ರಕರಣ ಕುರಿತು ಚುನಾವಣಾ ಆಯೋಗಕ್ಕೆ ವಂದೇ ಮಾತರಂ‌ ಸಮಾಜಸೇವಾ ಸಂಘಟನೆ ಅಧ್ಯಕ್ಷ ಸಿಎಂ ಶಿವಕುಮಾರ್ ನಾಯಕ್ ಅವರು ದೂರು ನೀಡಿದ್ದಾರೆ. ಈ ನಡುವೆ, ಈ ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರು, ''ಗೂಟದ ಕಾರು ಅಂದರೆ ಏನು? ಪ್ರೈವೇಟ್ ಕಾರ್ ತಗೊಂಡು ಗೂಟಾ ಇಟ್ಟುಕೊಡ್ತಾರಾ'' ಎಂದು ವ್ಯಂಗ್ಯ ಮಾಡಿದ್ದಾರೆ(Karnataka Election 2023).

Exit mobile version