Site icon Vistara News

Karnataka Election 2023: ಮೋದಿ ವಿಷದ ಹಾವು ಎಂದು ಹೇಳಿದ ಕುರಿತು ಖರ್ಗೆ ವಿಷಾದ: ಇಲ್ಲಿದೆ, ವಿಧಾನಸಭೆ ಚುನಾವಣೆಯ ಪ್ರಮುಖ ಬೆಳವಣಿಗೆಯ ಹೈಲೈಟ್ಸ್‌

Karnataka Election 2023 Live updates Check details In Kannada
Ramaswamy Hulakodu

ಯಡಿಯೂರಪ್ಪರ ಹೆಗಲ ಮೇಲೆ ಬಂದೂಕು!

ಬಿಜೆಪಿ ನಾಯಕರು ಯಡಿಯೂರಪ್ಪರ ಹೆಗಲ ಮೇಲೆ ಬಂದೂಕು ಇಟ್ಟು ತಮ್ಮ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ.

ಯಡಿಯೂರಪ್ಪ ಮಾಡಿರುವ ಟೀಕೆಗಳಿಗೆ ಪ್ರತಿಕ್ರಿಯಿಸಿದ ಅವರು, ಲಿಂಗಾಯಿತ ನಾಯಕರನ್ನೇ ಒಬ್ಬರ ಮೇಲೆ ಮತ್ತೊಬ್ಬರನ್ನು ಎತ್ತಿಕಟ್ಟುವ ಕೆಲಸವನ್ನು ಬಿಜೆಪಿ ಹೈಕಮಾಂಡ್‌ ಮಾಡುತ್ತಿದೆ ಎಂದಿದ್ದಾರೆ.

Ramaswamy Hulakodu

ಮಂಡ್ಯದಲ್ಲಿ ಯೋಗಿ ರೋಡ್‌ ಶೋ

ಮಂಡ್ಯಕ್ಕೆ ಆಗಮಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ರೋಡ್‌ ಶೋ ನಡೆಸುತ್ತಿದ್ದಾರೆ.

Ramaswamy Hulakodu

ಶೃಂಗೇರಿಯಲ್ಲಿ ಪ್ರಿಯಾಂಕ ಗಾಂಧಿ

ಶೃಂಗೇರಿಗೆ ಆಗಮಿಸಿದ ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿ ಶ್ರೀ ಶಾರದಾಂಬೆಯ ದರ್ಶನ ಪಡೆದಿದ್ದಾರೆ.

ನಂತರ ಗುರುದ್ವಯರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡರು. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಖಚಿತ ಎಂದು ಅವರು ಹೇಳಿದ್ದಾರೆ.

Ramaswamy Hulakodu

ಬೊಮ್ಮಾಯಿ-ಸಿದ್ದು ಭೇಟಿ

ಚುನಾವಣೆಯ ಪ್ರಚಾರ ಬಿರುಸಿನಿಂದ ನಡೆಯುತ್ತಿರುವ ಈ ಹೊತ್ತಿನಲ್ಲಿಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಮುಖಾಮುಖಿಯಾಗಿದ್ದಾರೆ.

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಈ ಇಬ್ಬರು ನಾಯಕರು ಆಕಸ್ಮಿಕವಾಗಿ ಭೇಟಿಯಾದರು. ಕುಶಲೋಪರಿ ವಿಚಾರಿಸಿಕೊಂಡರು.

Mallikarjun Tippar

ಹಿಂದುತ್ವಕ್ಕಾಗಿ ಮಡಿದವರಿಗೆ ಟಿಕೆಟ್ ನೀಡುತ್ತಾ ಹೋದ್ರೆ, ಬಹಳ ಜನರಿಗೆ ಟಿಕೆಟ್ ನೀಡಬೇಕಾಗುತ್ತದೆ- ಈಶ್ವರಪ್ಪ

ಹಿಂದುತ್ವಕ್ಕಾಗಿ ಹೋರಾಟ ಪ್ರಾಣ ಕಳೆದುಕೊಂಡ ಕುಟುಂಬದವರಿಗೆ ಟಿಕೆಟ್ ನೀಡುತ್ತಾ ಹೋದರೆ, ಬಹಳ ಟಿಕೆಟ್ ಕೊಡಬೇಕಾಗುತ್ತದೆ ಎಂದು ಬಿಜೆಪಿಯ ಹಿರಿಯ ನಾಯಕ ಕೆ.ಎಸ್ ಈಶ್ವರಪ್ಪ (KS Eshwarappa) ಅವರು ಲಘುವಾಗಿ ಹೇಳಿದ್ದಾರೆ(Karnataka election 2023). ಬಿಜೆಪಿಗಾಗಿ, ಹಿಂದುತ್ವಕ್ಕಾಗಿ ಹೋರಾಡಿ ಮಡಿದವರ ಕುಟುಂಬದವರಿಗೆ ಬಿಜೆಪಿ ಟಿಕೆಟ್ ಕೊಡೋದಿಲ್ವಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ ಅವರು, ಪ್ರಾಣ ಕಳೆದುಕೊಂಡ ಹಿಂದು ಹೋರಾಟಗಾರರಿಗೆ ಟಿಕೆಟ್ ಕೊಡೋದು ಅಂತಾದರೆ, ಬಹಳಷ್ಟು ಜನರಿಗೆ ಟಿಕೆಟ್ ಕೊಡಬೇಕಾಗುತ್ತದೆ. ಅದು ಆಗದ ಮಾತು. ಹಾಗಂತ, ಹೋರಾಟಕ್ಕೆ ಬೆಲೆ ಇಲ್ಲ ಎಂದಲ್ಲ. ಟಿಕೆಟ್ ಕೊಡಬೇಕಾದರೆ ಅವರು ಗೆಲವು, ಸಂಘಟನೆಗೆ ಎಷ್ಟು ಕೆಲಸ ಮಾಡುತ್ತದೆ ಎಂಬುದನ್ನು ನೋಡಬೇಕಾಗುತ್ತದೆ ಎಂದು ಹೇಳುವ ಮೂಲಕ, ಪ್ರಾಣ ತ್ಯಾಗಕ್ಕೆ ಟಿಕೆಟ್ ಸಿಗುವುದಿಲ್ಲಎಂಬರ್ಥದಲ್ಲಿ ಈಶ್ವರಪ್ಪ ಅವರು ಹೇಳಿದ್ದಾರೆ.

Exit mobile version