Site icon Vistara News

Karnataka Election 2023: ಮೋದಿ ವಿಷದ ಹಾವು ಎಂದು ಹೇಳಿದ ಕುರಿತು ಖರ್ಗೆ ವಿಷಾದ: ಇಲ್ಲಿದೆ, ವಿಧಾನಸಭೆ ಚುನಾವಣೆಯ ಪ್ರಮುಖ ಬೆಳವಣಿಗೆಯ ಹೈಲೈಟ್ಸ್‌

Karnataka Election 2023 Live updates Check details In Kannada
Ramaswamy Hulakodu

ಶೆಟ್ಟರ್‌ ರನ್ನು ಮರಳಿ ಸೇರಿಸಿಕೊಳ್ಳುವುದಿಲ್ಲ; ಯಡಿಯೂರಪ್ಪ

ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿರುವ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರನ್ನು ಮರಳಿ ಬಿಜೆಪಿಗೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿಯ ಹಿರಿಯ ನಾಯಕ ಬಿ. ಎಸ್‌. ಯಡಿಯೂರಪ್ಪ ಹೇಳಿದ್ದಾರೆ.

ಜಗದೀಶ್‌ ಶೆಟ್ಟರ್‌ ರನ್ನು ಸೋಲಿಸುವ ಕುರಿತು ಅವರು ಲಿಂಗಾಯಿತ ನಾಯಕರ ಸಭೆ ನಡೆಸಿದ್ದಾರೆ.

Ramaswamy Hulakodu

ಜಾತಿ ಗಣತಿ ಆಧಾರದ ಮೇಲೆ ಮೀಸಲಾತಿ

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಾತಿ ಗಣತಿ ಆಧಾರದ ಮೇಲೆ ಮೀಸಲಾತಿ ನೀಡುತ್ತೇವೆ. ಈಗಾಗಲೇ ಜಾತಿ ಗಣನೆ ಮಾಡಿಸಲಾಗಿದೆ. ಅದರ ಆಧಾರದ ಮೇಲೆ ಮೀಸಲಾತಿ ಬಗ್ಗೆ ನಿರ್ಧಾರ ಮಾಡಲಾಗುತ್ತದೆ ಎಂದು ಮೈಸೂರಿನಲ್ಲಿ ಕಾಂಗ್ರೆಸ್‌ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.

Ramaswamy Hulakodu

ಬಿಜೆಪಿ ಹೆಚ್ಚು ಸ್ಥಾನ ಗಳಿಸುತ್ತದೆ ಪಡ್ನವೀಸ್

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸುತ್ತದೆ ಎಂದು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್ ಹೇಳಿದ್ದಾರೆ.

ವಿಜಯಪುರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಮೋದಿ ಅವರ ಮಾರ್ಗದರ್ಶನದಲ್ಲಿ ಬೊಮ್ಮಾಯಿ ನೇತೃತ್ವದ ಸರ್ಕಾರ ಮತ್ತೆ ಅಧಿಕಾರ ಹಿಡಿಯಲಿದೆ ಎಂದಿದ್ದಾರೆ.

Harish Kera

ಇಂದಿನಿಂದ ಮತಬೇಟೆಯ ಅಖಾಡಕ್ಕೆ ನಟ ಕಿಚ್ಚ ಸುದೀಪ್

ಬೆಂಗಳೂರು: ಬಿಜೆಪಿ ಪರ ಪ್ರಚಾರದ ಕಣಕ್ಕೆ ಇಂದು ನಟ ಕಿಚ್ಚ ಸುದೀಪ್‌ ಇಳಿಯಲಿದ್ದಾರೆ. ಮೊಳಕಾಲ್ಮೂರು, ಜಗಳೂರು, ಬಳ್ಳಾರಿ ಮುಂತಾದ ಕಡೆ ರೋಡ್‌ ಶೋ, ಪ್ರಚಾರ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.

Exit mobile version