ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಪ್ರಚಾರ ಕಣ ರಂಗೇರುತ್ತಿದೆ. ದೇಶದ ಘಟಾನುಘಟಿ ನಾಯಕರು ಆಗಮಿಸಿ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇಂದಿನ ಕಣದ ಪ್ರತಿಕ್ಷಣದ ಸುದ್ದಿ ಇಲ್ಲಿದೆ. ಇಂದು ರಾಜ್ಯಕ್ಕೆ ಬಿಜೆಪಿ ಕಡೆಯಿಂದ ಅಮಿತ್ ಶಾ, ಜೆ.ಪಿ. ನಡ್ಡಾ, ಕಾಂಗ್ರೆಸ್ ಕಡೆಯಿಂದ ರಾಹುಲ್ ಗಾಂಧಿ ಆಗಮಿಸಿ ವಿವಿಧೆಡೆ ಸಭೆ ನಡೆಸಲಿದ್ದಾರೆ.
ದಾವಣಗೆರೆ ಜಿಲ್ಲೆ ಹರಿಹರದ ಪ್ರಮುಖ ಮಠಗಳಿಗೆ ಅಮಿತ್ ಶಾ ಭೇಟಿ
ಕಾಗಿನೆಲೆಯ ಕನಕ ಪೀಠ ಹಾಗೂ ಪಂಚಮಸಾಲಿ ಮಠಕ್ಕೆ ಸಚಿವ ಭೇಟಿ
ಕಾಗಿನೆಲೆ ಶ್ರೀ, ವಚನಾನಂದ ಶ್ರೀಗಳ ಆಶೀರ್ವಾದ ಪಡೆದ ಅಮಿತ್ ಶಾ
ಜಗದೀಶ್ ಶೆಟ್ಟರ್ ಪರ ಪ್ರಚಾರ
ಬಿಜೆಪಿಯ 27 ಕಾರ್ಯಕರ್ತರ ಉಚ್ಚಾಟನೆ
ಉಚ್ಚಾಟನೆಗೊಳಿಸಿ ಬಿಜೆಪಿ ಆದೇಶ
ಪಕ್ಷ ವಿರೋಧಿ ಚಟುವಟಿಕೆ ಆರೋಪದ ಅನ್ವಯ ಉಚ್ಚಾಟನೆ
ಜಗದೀಶ್ ಶೆಟ್ಟರ್ ಪರವಾಗಿ ಪ್ರಚಾರ ಮಾಡಿದ ಹಿನ್ನೆಲೆ ಕ್ರಮ
ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ಶೆಟ್ಟರ್
ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ತಲೆಗೆ ಕಲ್ಲೇಟು
ಕೊರಟಗೆರೆಯಲ್ಲಿ ದುಷ್ಕರ್ಮಿಯಿಂದ ಕಲ್ಲೇಟು
ಚಿಕಿತ್ಸೆ ಬಳಿಕ ಮನೆಯಲ್ಲಿ ಪರಮೇಶ್ವರ್ ವಿಶ್ರಾಂತಿ
ದಲಿತ ನಾಯಕರ ಮೇಲೆ ಏಕಿಷ್ಟು ದ್ವೇಷ ಎಂದು ಬಿಜೆಪಿಗೆ ಕಾಂಗ್ರೆಸ್ ಪ್ರಶ್ನೆ
ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ಓಪನ್ ಮಾಡಲು ಬಂದಿದ್ದೇನೆ- ರಾಹುಲ್ ಗಾಂಧಿ
ಬಳ್ಳಾರಿ ಮೋತಿ ಸರ್ಕಲ್ನಲ್ಲಿ ಕಾಂಗ್ರೆಸ್ (Congress) ಬಹಿರಂಗ ಸಭೆ ಆಯೋಜಿಸಿತ್ತು. ಈ ಸಭೆಯಲ್ಲಿ ಪಾಲ್ಗೊಂಡ ರಾಹುಲ್ ಗಾಂಧಿ ಅವರು ತಮ್ಮ ಮಾತುಗಳ ಮೂಲಕ ಅಲ್ಲಿ ನೆರೆದಿದ್ದ ಸಾವಿರಾರು ಜನರ ಮನಸ್ಸು ಗೆದ್ದರು. ''ದ್ವೇಷದ ಮಾರುಕಟ್ಡೆಯಲ್ಲಿ, ಪ್ರೀತಿಯ ಅಂಗಡಿಯನ್ನು ಓಪನ್ ಮಾಡಲು ಬಂದಿದ್ದೇನೆ,'' ಎಂಬ ರಾಹುಲ್ ಗಾಂಧಿ (Rahul Gandhi) ಅವರ ಮಾತಿಗೆ ನೆರೆದಿದ್ದ ಜನರು ತಲೆದೂಗಿದರು. ಬಿಜೆಪಿ ಶಾಸಕರ ವ್ಯಾಪಾರ ಮಾಡಿ ಸರ್ಕಾರ ಕಿತ್ತುಕೊಂಡಿದ್ದರು. ಬಿಜೆಪಿಯದ್ದು 40 ಪರ್ಸೆಂಟ್ ಸರ್ಕಾರ. ಅವರಿಗೆ 40 ಸಂಖ್ಯೆ ಭಾರೀ ಇಷ್ಟು. ಅವರನ್ನು 40 ಶಾಸಕರಿಗಷ್ಟೇ ನಿಲ್ಲಿಸಬೇಕು ಎಂದು ರಾಹುಲ್ ಗಾಂಧಿ ಹೇಳಿದರು(Karnataka Election 2023).
ಖರ್ಗೆ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು
ಪ್ರಧಾನಿ ಮೋದಿ ಅವರನ್ನು ವಿಷಕಾರಿ ಹಾವು ಎಂದು ಟೀಕಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿಯು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ನವದೆಹಲಿಯಲ್ಲಿ ಕೇಂದ್ರ ಸಚಿವ ಭೂಪೇಂದ್ರ ಯಾದವ್ ನೇತೃತ್ವದ ಬಿಜೆಪಿ ನಿಯೋಗ ಈ ದೂರು ನೀಡಿದೆ.