ಬೆಂಗಳೂರು: ವಿಧಾನಸಭೆ ಚುನಾವಣೆಯ (Karnataka Election 2023) ಮತದಾನಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವ ಹಾಗೂ ಮತದಾನವನ್ನು ಉತ್ತೇಜಿಸುವ ಕೆಲಸಗಳು ನಡೆಯುತ್ತಿದೆ. ಸದ್ಯ ಅಮ್ಯೂಸ್‌ಮೆಂಟ್ ಪಾರ್ಕ್ ವಂಡರ್ ಲಾ ವಿಶೇಷ ರಿಯಾಯಿತಿಯನ್ನು ಘೋಷಿಸಿದೆ.
ಮೇ 10 ರಂದು ಮತದಾನ ಮಾಡುವ ಪ್ರತಿಯೊಬ್ಬ ಮತದಾರರಿಗೂ ವಂಡರ್‌ಲಾ ಪ್ರವೇಶ ಶುಲ್ಕದ ಮೇಲೆ ಶೇ.15 ರಷ್ಟು ರಿಯಾಯಿತಿ ನೀಡುತ್ತಿದೆ. ಈ ಕೊಡುಗೆಯು ಮೇ 10 ರಿಂದ 12ರವರೆಗೂ ಆನ್‌ಲೈನ್‌ನಲ್ಲಿ ಮಾತ್ರ ಲಭ್ಯವಿದ್ದು, ಬುಕ್ಕಿಂಗ್ ಪೋರ್ಟಲ್ ಈಗಾಗಲೇ ಓಪನ್ ಆಗಿದೆ.
ಜನರು ತಮ್ಮ ಬುಕ್ಕಿಂಗ್‌ನನ್ನು https://www.wonderla.com/ ಮೂಲಕ ಮಾಡಿಕೊಳ್ಳಬಹುದು. ಎಂಟ್ರಿಯಲ್ಲಿ ಆನ್‌ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸಿದ ಮತದಾರರಿಗೆ ಕೈ ಬೆರಳಿಗೆ ಹಾಕಿದ ಶಾಯಿಯ ಆಧಾರದ ಮೇಲೆ ಪ್ರವೇಶ ನೀಡಲಾಗುತ್ತದೆ.
ಇದನ್ನೂ ಓದಿ: Karnataka Election 2023: ಮೇ 10ಕ್ಕೆ ಹಾಕಿ ಮತ; ಬೆಣ್ಣೆ ದೋಸೆ, ಮೈಸೂರ್ ಪಾಕ್ ಪೂರ್ತಿ ಉಚಿತ, ಸಿನಿಮಾ ಟಿಕೆಟ್ಟೂ ಖಚಿತ
ಈ ಕುರಿತು ಮಾತನಾಡಿದ ವಂಡರ್‌ಲಾ ಹಾಲಿಡೇಸ್‌ನ ವ್ಯವಸ್ಥಾಪಕ ನಿರ್ದೇಶಕ ಅರುಣ್ ಚಿತ್ತಿಲಪಿಲ್ಲಿ, ಪ್ರತಿಯೊಬ್ಬ ನಾಗರಿಕನೂ ಮತದಾನ ಮಾಡುವುದು ಅವರ ಕರ್ತವ್ಯವಾಗಿದೆ. ಮತದಾನವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇದು ನಮ್ಮ ಪುಟ್ಟ ಹೆಜ್ಜೆ ಎಂದರು.