Site icon Vistara News

Karnataka election 2023: ಸಿದ್ದರಾಮಯ್ಯ ತಪ್ಪಿನಿಂದ ಗಂಗಾವತಿಯಲ್ಲಿ ಕಾಂಗ್ರೆಸ್ ಸೋಲು ಖಚಿತ: ಮಾಜಿ ಎಂಎಲ್‌ಸಿ ಶ್ರೀನಾಥ್

Karnataka election 2023 Ex CM Siddaramaiah s mistake is sure to defeat Congress in Gangavati Ex MLC Srinath

ಗಂಗಾವತಿ: ಹಿಂದುತ್ವದ ಅಲೆ ಇರುವ ಗಂಗಾವತಿಯಂತಹ ಸೂಕ್ಷ್ಮ ಕ್ಷೇತ್ರಕ್ಕೆ ಟಿಕೆಟ್ ಹಂಚಿಕೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಪಕ್ಷದ ಹೈಕಮಾಂಡ್ ಮಾಡಿದ ತಪ್ಪಿನಿಂದಾಗಿ ಈ ಬಾರಿಯ ಚುನಾವಣೆಯಲ್ಲಿ (Karnataka election 2023) ಗಂಗಾವತಿಯಲ್ಲಿ ಕಾಂಗ್ರೆಸ್ ಸೋಲುತ್ತದೆ ಎಂದು ಮಾಜಿ ಎಂಎಲ್‌ಸಿ, ಕಾಂಗ್ರೆಸ್ ಮುಖಂಡ ಎಚ್.ಆರ್. ಶ್ರೀನಾಥ್ ಭವಿಷ್ಯ ನುಡಿದಿದ್ದಾರೆ.

ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಎಚ್.ಆರ್. ಶ್ರೀನಾಥ್, ಗಂಗಾವತಿಯಲ್ಲಿ ಇಕ್ಬಾಲ್ ಅನ್ಸಾರಿಗೆ ಟಿಕೆಟ್ ನೀಡಿದ್ದಕ್ಕೆ ವಿರೋಧ ವ್ಯಕ್ತಪಡಿಸಿ, ಕ್ಷೇತ್ರದ ವಿಚಾರವಾಗಿ ಈಗಾಗಲೇ ರಾಹುಲ್ ಗಾಂಧಿ ಸೇರಿದಂತೆ ಎಐಸಿಸಿ ಪದಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೂ ಯಾವುದೇ ಬದಲಾವಣೆ ಮಾಡಿಲ್ಲ ಎಂದರು.

ಇದನ್ನೂ ಓದಿ: Karnataka Elections :‌ ಹತ್ತು ಡಿಕೆಶಿಗಳು ಬಂದರೂ ಲಿಂಗಾಯತರ ಡ್ಯಾಂ ಒಡೆಯಲು ಅಸಾಧ್ಯ ಎಂದ ಸಿ.ಸಿ ಪಾಟೀಲ್

ಗಂಗಾವತಿಯಲ್ಲಿ ಹಿಂದುತ್ವದ ಅಲೆ

ಗಂಗಾವತಿ ಕ್ಷೇತ್ರದಲ್ಲಿ ಹಿಂದುತ್ವದ ಅಲೆ ಇದೆ. ಹೀಗಾಗಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಿರುವುದು ತಪ್ಪು. ಇಲ್ಲಿ ಪಕ್ಷ ಕೈಗೊಂಡ ನಿರ್ಧಾರವೇ ಮುಳುವಾಗಲಿದೆ ಎಂದು ಶ್ರೀನಾಥ್ ಹೇಳಿದರು.

ನನಗೆ ಟಿಕೆಟ್ ನೀಡದಿದ್ದರಿಂದಾಗಿ ಸಹಜವಾಗಿ ಬೇಸರವಾಗಿದೆ. ಅಲ್ಲದೆ, ಟಿಕೆಟ್ ಪಡೆದುಕೊಂಡ ವ್ಯಕ್ತಿ ಸಹ ಸೌಜನ್ಯಕ್ಕೂ ನನ್ನನ್ನು ಭೇಟಿಯಾಗಿಲ್ಲ. ಹೀಗಾಗಿ ನನಗೆ ಅಗೌರವವಾಗಿದೆ. ಹೀಗಾಗಿ ನಾನೊಂದು ನಿರ್ಣಯಕ್ಕೆ ಬಂದಿದ್ದೇನೆ. ಈಗಾಗಲೇ ನನ್ನ ಬೆಂಬಲಿಗರ ಸಭೆ ನಡೆಸಿ ತೀರ್ಮಾನ ಕೈಗೊಂಡಿದ್ದೇನೆ ಎಂದರು.

ಈ ಬಾರಿ ಸಂಪೂರ್ಣ ತಟಸ್ಥ ನಿಲುವು

ಈ ಬಾರಿಯ ಚುನಾವಣೆಯಲ್ಲಿ ನಾನು ತಟಸ್ಥ ನಿಲುವು ತಳೆಯುತ್ತೇನೆ. ಅದು ಗಂಗಾವತಿಗೆ ಮಾತ್ರ ಸೀಮಿತ. ರಾಜ್ಯದ ಬೇರೆ ವಿಧಾನಸಭಾ ಕ್ಷೇತ್ರದಲ್ಲಿ ಅದರಲ್ಲೂ ಮುಖ್ಯವಾಗಿ ಯು.ಟಿ. ಖಾದರ್, ಜಮೀರ್ ಅಹ್ಮದ್ ಕ್ಷೇತ್ರಕ್ಕೆ ಹೋಗಿ ಪ್ರಚಾರ ಮಾಡುತ್ತೇನೆ. ಆದರೆ ಗಂಗಾವತಿಯಲ್ಲಿ ಮಾತ್ರ ಸಂಪೂರ್ಣ ತಟಸ್ಥ ನಿಲುವು ತಾಳುತ್ತೇನೆ. ನನ್ನ ಬೆಂಬಲಿಗರಿಗೆ ಯಾರನ್ನು ಬೆಂಬಲಿಸಬೇಕು ಎಂದು ಹೇಳುವುದಿಲ್ಲ. ಅವರು ಈಗಾಗಲೇ ಸ್ವತಂತ್ರ ನಿರ್ಣಯ ಕೈಗೊಂಡು ಬೇರೆ ಬೇರೆ ಪಕ್ಷಗಳಿಗೆ ಹೋಗಿದ್ದಾರೆ. ಇದರಿಂದ ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆ. ಇದಕ್ಕೆ ನಾನು ಹೊಣೆಯಲ್ಲ. ಟಿಕೆಟ್ ವಿಚಾರದಲ್ಲಿ ಹೈಕಮಾಂಡ್ ಕೈಗೊಂಡ ನಿರ್ಣಯವೇ ಗಂಗಾವತಿಯಲ್ಲಿ ಪಕ್ಷ ಸಂಘಟನೆಯಲ್ಲಿ ಕೊರತೆಗೆ ಕಾರಣವಾಗಲಿದೆ ಎಂದು ಎಚ್.ಆರ್. ಶ್ರೀನಾಥ ವಾಗ್ದಾಳಿ‌ ನಡೆಸಿದರು.

Exit mobile version