Site icon Vistara News

Karnataka Election 2023: ಮಧ್ಯರಾತ್ರಿವರೆಗೂ ಮೆಟ್ರೋ ಸಂಚಾರ; ಎಲೆಕ್ಷನ್‌ಗಾಗಿ ಈ ನಿರ್ಧಾರ

Bengaluru Metro

Bengaluru Metro

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಮತದಾನದ ಪ್ರಯುಕ್ತ ಬಿಎಂಆರ್‌ಸಿಎಲ್ ಮೆಟ್ರೋ ರೈಲು ಸೇವೆಯ ಸಮಯವನ್ನು ವಿಸ್ತರಣೆ ಮಾಡಿದೆ. ರಾಜ್ಯ ವಿಧಾನಸಭೆ ಚುನಾವಣೆ (Karnataka Election 2023) ಮತದಾನಕ್ಕೆ (polling day) ಇನ್ನು ಒಂದೇ ದಿನ ಬಾಕಿ ಇದೆ. ಚುನಾವಣಾ ಕಾರ್ಯಗಳಿಗೆ ಸರ್ಕಾರಿ ಹಾಗೂ ಖಾಸಗಿ ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ ಮೇ 9-10ರಂದು ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ಓಲಾ, ಉಬರ್‌ ಕ್ಯಾಬ್‌ಗಳ (Ola, Uber Cab) ಸೇವೆಯಲ್ಲೂ ವ್ಯತ್ಯಯ ಉಂಟಾಗಲಿದೆ.

ಹೀಗಾಗಿ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗದಂತೆ ಮೆಟ್ರೋ ಕ್ರಮವಹಿಸುತ್ತಿದೆ. ಮೇ 10 ಬುಧವಾರದಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ಪ್ರಯುಕ್ತ ನಿಗಮವು ಮೆಟ್ರೋ ರೈಲು ಸೇವೆಗಳನ್ನು ಮಧ್ಯರಾತ್ರಿಯವರೆಗೆ ವಿಸ್ತರಿಸಿದೆ.

ಇದನ್ನೂ ಓದಿ: Karnataka Election 2023: ಚುನಾವಣೆ ಅಶಯ: ಕಳೆಯಿಲ್ಲದ ಕರಾವಳಿ ಕರ್ನಾಟಕ ಹೊಳೆಯುವುದು ಹೇಗೆ?

ಟರ್ಮಿನಲ್ ನಿಲ್ದಾಣಗಳಾದ ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ ರೇಷ್ಮೆ ಸಂಸ್ಥೆ, ಕೃಷ್ಣರಾಜಪುರ ಮತ್ತು ವೈಟ್‌ಫೀಲ್ಡ್ (ಕಾಡುಗೋಡಿ) ಗಳಿಂದ ಕೊನೆಯ ರೈಲು ಸೇವೆಯು ಮೇ 11ರಂದು ಮಧ್ಯರಾತ್ರಿ 12.05 ಗಂಟೆಗೆ ಹೊರಡಲಿದೆ. ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್‌ನಿಂದ ಕೊನೆಯ ರೈಲು ಸೇವೆಯು ಮೇ 11 ರಂದು ಮಧ್ಯರಾತ್ರಿ 12.35 ಗಂಟೆಗೆ ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ, ರೇಷ್ಮೆ ಸಂಸ್ಥೆಯಿಂದ ಹೊರಡಲಿದೆ.

Exit mobile version