Site icon Vistara News

Karnataka Election 2023: ಜಯನಗರ ಶಾಸಕಿ ಸೌಮ್ಯಾರೆಡ್ಡಿ ಕಾರು ಚಾಲಕನ ಮೇಲೆ ಎಫ್‌ಐಆರ್‌ ದಾಖಲು

Soumya reddy

#image_title

ಬೆಂಗಳೂರು: ಜಯನಗರದ (Jayanagar) ಶಾಸಕಿ ಸೌಮ್ಯ ರೆಡ್ಡಿ (MLA Sowmya Reddy) ಅವರ ಕಾರು ಚಾಲಕನ (Car Driver) ಮೇಲೆ ಎಫ್ಐಆರ್ ದಾಖಲಾಗಿದೆ. ನಾಲ್ಕು ದಿನಗಳ ಹಿಂದೆ ಸೌಮ್ಯ ರೆಡ್ಡಿಗೆ ಸೇರಿದ ಕಾರು ಪರಿಶೀಲನೆ ವೇಳೆ ಸೀರೆ, ರವಿಕೆ ಕಣಗಳು ಪತ್ತೆಯಾಗಿತ್ತು. ಹೀಗಾಗಿ ವಾಹನವನ್ನು ವಶಕ್ಕೆ ಪಡೆಯಲಾಗಿತ್ತು. ಇದೀಗ ಕಾರು ಚಾಲಕ ರಾಮಚಂದ್ರಪ್ಪ ಎಂಬಾತನ ಮೇಲೆ ತಿಲಕ್ ನಗರ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ.

ಏನಿದು ಸೀರೆ ಪ್ರಕರಣ?

ಚುನಾವಣಾ ಅಧಿಕಾರಿಗಳು ಮತ್ತು ಪೊಲೀಸರು ಮಾರೇನಹಳ್ಳಿ ಚೆಕ್ ಪೋಸ್ಟ್ ಕಳೆದ ಏ.6ರಂದು ಕಾರ್ಯಾಚರಣೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಕಾರೊಂದು ಬಂದಿತ್ತು. ಅದನ್ನು ಪರಿಶೀಲಿಸಿದಾಗ ಅದರಲ್ಲಿ ಸೀರೆಗಳು ಪತ್ತೆಯಾಗಿದ್ದವು. ವಿಚಾರಣೆ ನಡೆಸಿದಾಗ ಇದು ಸೌಮ್ಯ ರೆಡ್ಡಿ ಅವರಿಗೆ ಸೇರಿದ ಇನ್ನೋವಾ ಕ್ರೇಟಾ ಕಾರು ಎನ್ನುವುದು ಪತ್ತೆಯಾಗಿತ್ತು. ಆದರೆ, ಕಾರಿನಲ್ಲಿ ಸೌಮ್ಯಾ ರೆಡ್ಡಿ ಅವರು ಇರಲಿಲ್ಲ.

ಕೂಡಲೇ ಚುನಾವಣಾಧಿಕಾರಿಗಳು ಕಾರನ್ನು ವಶಕ್ಕೆ ಪಡೆದು ತಿಲಕ್‌ ನಗರ ಠಾಣೆಗೆ ಒಪ್ಪಿಸಿದ್ದಾರೆ. ಚಾಲಕ ರಾಮಚಂದ್ರಪ್ಪ ಎಂಬುವರು ಕಾರು ಚಾಲನೆ ಮಾಡುತ್ತಿದ್ದರು. ಕಾರಿನಲ್ಲಿ 23 ಸೀರೆ, 23 ರವಿಕೆ ಪೀಸ್, ಆಂಡ್ರಾಯ್ಡ್‌ ಮೊಬೈಲ್, 13 ಶಾಲು, 150 ಪುಸ್ತಕಗಳನ್ನು ಕಾರಿನಿಂದ ವಶಕ್ಕೆ ಪಡೆಯಲಾಗಿದೆ. ಈ ಸೀರೆಗಳು ಮತದಾರರಿಗೆ ಹಂಚಲು ಒಯ್ಯುತ್ತಿದ್ದವುಗಳೆಂದು ಅನುಮಾನವಿದೆ. ಇವುಗಳ ಮೇಲೆ ಸೌಮ್ಯಾರೆಡ್ಡಿಯವರ ಫೋಟೊ ಇತ್ತೆಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Nandini vs Amul: ಅಮುಲ್ ಕರ್ನಾಟಕವನ್ನು ಪ್ರವೇಶಿಸುತ್ತಿಲ್ಲ ಎಂದ ಬಿಜೆಪಿ ನಾಯಕ, ಕಾಂಗ್ರೆಸ್‌ ವಿರುದ್ಧ ಅಪಪ್ರಚಾರ ಆರೋಪ!

ಕಾರನ್ನು ಸದ್ಯ ತಿಲಕ್‌ ನಗರ ಠಾಣೆ ಬಳಿ ನಿಲ್ಲಿಸಲಾಗಿದ್ದು. ಕಾರಿಗೆ ಪೂರ್ತಿ ಕವರ್‌ ಹಾಕಿ ಮುಚ್ಚಲಾಗಿದೆ. ಫ್ಲೈಯಿಂಗ್ ಸ್ಕ್ವಾಡ್ ನವರು ಚಾಲಕ ರಾಮಚಂದ್ರ ವಿರುದ್ಧ ತಿಲಕ್‌ ನಗರ ಪೊಲೀಸ್ ಠಾಣೆಗೆ ದೂರು ನೀಡಿದ ಕಾರಣ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Exit mobile version