ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ (Karnataka Election 2023) ದಿನಾಂಕ ಘೋಷಣೆಯ ಬೆನ್ನಲ್ಲೇ ಸರ್ಕಾರಿ, ಖಾಸಗಿ, ಗೂಡ್ಸ್, ಟ್ಯಾಕ್ಸಿಗಳಿಗೆ ರಾಜ್ಯ ಸರ್ಕಾರವು ಬಾಡಿಗೆ ದರವನ್ನು ನಿಗದಿಪಡಿಸಿದೆ. ಚುನಾವಣಾ ಆಯೋಗದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಾರಿಗೆ ಇಲಾಖೆಗಳ ಜತೆಯಲ್ಲಿ ಕಳೆದ ಫೆ.22ರಂದು ಸಭೆ ನಡೆಸಿ ತೀರ್ಮಾನಿಸಲಾಗಿತ್ತು. ಇದೀಗ ದರ ಪಟ್ಟಿ ಮಾಡಿ ಅಧಿಕೃತ ಆದೇಶ ಹೊರಡಿಸಿದೆ.
ಮತಗಟ್ಟೆ ಸಿಬ್ಬಂದಿ ಕೆಲಸಕ್ಕೆ, ಮತಗಟ್ಟೆ ಕೇಂದ್ರಗಳಿಗೆ ಬೇಕಾದ ವಸ್ತುಗಳನ್ನು ಸಾಗಿಸಲು ಇತರೆ ಚುನಾವಣಾ ಚಟುವಟಿಕೆಗೆ ಸಂಬಂಧಿಸಿದಂತೆ ಬಳಸುವ ವಾಹನಗಳಿಗೆ ಸರ್ಕಾರ ದರ ನಿಗದಿಪಡಿಸಿದೆ. ಪ್ರಸುತ್ತ ಪೆಟ್ರೋಲ್, ಡೀಸೆಲ್, ಭತ್ಯೆ, ಕೂಲಿ, ವಾಹನದ ಬಿಡಿ ಭಾಗಗಳ ಬೆಲೆಗಳನ್ನು ಪರಿಗಣಿಸಿ ದರ ನಿಗದಿ ಮಾಡಲಾಗಿದೆ.
ಕೆಎಸ್‌ಆರ್‌ಟಿಸಿ (KSRTC), ಬಿಎಂಟಿಸಿ (BMTC), ಎನ್‌ಡಬ್ಲ್ಯೂಕೆಆರ್‌ಟಿಸಿ (NWKRTC), ಎನ್‌ಇಕೆಆರ್‌ಟಿಸಿ (NEKRTC) ಹಾಗೂ ಖಾಸಗಿ ಬಸ್‌ಗಳಿಗೆ ಪ್ರತಿ ಕಿ.ಮೀ.ಗೆ 57.50 ರೂಪಾಯಿ ಬಾಡಿಗೆ ದರಗಳನ್ನು ನಿಗದಿ ಪಡಿಸಲಾಗಿದೆ. ಒಂದು ದಿನಕ್ಕೆ 11,500 ರೂಪಾಯಿಯನ್ನು ಮುಂಗಡವಾಗಿ ನೀಡಬೇಕು. ಎರಡು ಗಂಟೆಗೂ ಹೆಚ್ಚು ಸಮಯವಾದರೆ ಒಂದು ದಿನದ ಲೆಕ್ಕದಲ್ಲಿ ಬಾಡಿಗೆ ನೀಡಬೇಕು.
ಬೆಂಗಳೂರು ವ್ಯಾಪ್ತಿಯ ಖಾಸಗಿ ವಾಹನಗಳಿಗೆ 35+1 ಸೀಟ್ ಸಾಮರ್ಥ್ಯ ಹೊಂದಿರುವಂತ ವಾಹನಗಳಿಗೆ ಪ್ರತಿ ಕಿಲೋ ಮೀಟರ್‌ಗೆ 43.50 ರೂಪಾಯಿ ಹಾಗೂ ಒಂದು ದಿನಕ್ಕೆ 8,700 ರೂಪಾಯಿ ಬಾಡಿಗೆ ದರವನ್ನು ನಿಗದಿ ಮಾಡಲಾಗಿದೆ. ಬಾಡಿಗೆ ಪಡೆದು ಬಳಕೆ ಮಾಡದ ವಾಹನಗಳಿಗೆ 4,350 ರೂಪಾಯಿ ಇದೆ.
ಬೆಂಗಳೂರು ನಗರ ಹೊರತುಪಡಿಸಿ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಚುನಾವಣಾ ಕಾರ್ಯಕ್ಕೆ ವಾಹನ ಬಾಡಿಗೆ ಪಡೆದರೆ ಪ್ರತಿ ಕಿಲೋ ಮೀಟರ್‌ಗೆ 42.50 ರೂಪಾಯಿ ಹಾಗೂ ದಿನದ ಬಾಡಿಗೆ ದರ 8200 ರೂಪಾಯಿ ಮತ್ತು ಬಾಡಿಗೆ ಪಡೆದು ಬಳಕೆ ಮಾಡದೇ ಇದ್ದರೆ 5200 ರೂಪಾಯಿ ನಿಗದಿ ಮಾಡಲಾಗಿದೆ.
ಲಘು ಗೂಡ್ಸ್ ವಾಹನಗಳು
ಬೆಂಗಳೂರು ವ್ಯಾಪ್ತಿಯ ಲಘು ಗೂಡ್ಸ್ ವಾಹನಗಳಿಗೆ ಪ್ರತಿ ಕಿಲೋ ಮೀಟರ್‌ಗೆ 29 ರೂಪಾಯಿ ಹಾಗೂ ದಿನದ ಬಾಡಿಗೆ 2,900 ರೂಪಾಯಿ, ಒಂದು ಗಂಟೆಗೆ 200 ರೂಪಾಯಿ, ದಿನದ ಬಾಡಿಗೆ ಎಂದರೆ 2,900 ರೂಪಾಯಿ ಆಗಲಿದೆ. ಬೆಂಗಳೂರು ಹೊರತುಪಡಿಸಿ ಲಘು ಗೂಡ್ಸ್ ವಾಹನಗಳಿಗೆ ಪ್ರತಿ ಕಿಲೋ ಮೀಟರ್‌ಗೆ 29 ರೂಪಾಯಿ ಹಾಗೂ ದಿನಕ್ಕೆ 2,900 ರೂಪಾಯಿ, ಒಂದು ಗಂಟೆಗೆ 190 ರೂಪಾಯಿ ನಿಗದಿಯಾಗಿದೆ.
ಟ್ಯಾಕ್ಸಿ, ಕ್ಯಾಬ್‌ಗಳು
ಬೆಂಗಳೂರು ಸಿಟಿಗೆ ಟಾಕ್ಸಿ ಕ್ಯಾಬ್‌ಗಳಿಗೆ ಪ್ರತಿ ಕಿಲೋ ಮೀಟರ್‌ಗೆ 20 ರೂಪಾಯಿ, ದಿನದ ಬಾಡಿಗೆ 4000 ರೂಪಾಯಿ ಹಾಗೂ ಬಾಡಿಗೆ ಪಡೆದು ಬಳಕೆ ಮಾಡದೇ ಇದ್ದರೆ 3,500 ರೂಪಾಯಿ ಮತ್ತು ಗಂಟೆಯ ಲೆಕ್ಕದಲ್ಲಿ 220 ರೂಪಾಯಿಯನ್ನು ನಿಗದಿ ಮಾಡಲಾಗಿದ್ದರೆ, ದಿನದ ಬಾಡಿಗೆಗೆ 3,200 ರೂಪಾಯಿ ಇದೆ. ಇತ್ತ ಬೆಂಗಳೂರು ನಗರ ಹೊರತುಪಡಿಸಿ ಟಾಕ್ಸಿ, ಕ್ಯಾಬ್‌ಗಳ ಬಳಕೆಗೆ ಪ್ರತಿ ಕಿಲೋ ಮೀಟರ್‌ಗೆ 19 ರೂಪಾಯಿ, ದಿನದ ಬಾಡಿಗೆ 3,800 ರೂಪಾಯಿ ಇದ್ದು ಬಳಕೆ ಮಾಡದೇ ಇದ್ದರೆ 3,400 ಬಾಡಿಗೆ ಇದೆ. ಒಂದು ಗಂಟೆಯ ಲೆಕ್ಕದಲ್ಲಿ 210 ರೂಪಾಯಿ ಹಾಗೂ ದಿನಕ್ಕೆ ಬಾಡಿಗೆ 3,050 ರೂಪಾಯಿಯನ್ನು ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Karnataka Election 2023: ಅಥಣಿಯಿಂದ ಸ್ಪರ್ಧೆ ಮಾಡುವೆನೆಂದ ಲಕ್ಷ್ಮಣ ಸವದಿ; ಜಾರಕಿಹೊಳಿಗೆ ಸೆಡ್ಡು
ಭಾರಿ ಗಾತ್ರದ ಗೂಡ್ಸ್ ವಾಹನಗಳು
ಬೆಂಗಳೂರು ನಗರ ವ್ಯಾಪ್ತಿಯ ಗೂಡ್ಸ್ ವಾಹನಗಳಿಗೆ ಪ್ರತಿ ಕಿಲೋ ಮೀಟರ್‌ಗೆ 34 ರೂಪಾಯಿ ಹಾಗೂ ದಿನದ ಬಾಡಿಗೆಯಂತೆ 6000 ರೂಪಾಯಿ ಹಾಗೂ ಗಂಟೆಯ ಲೆಕ್ಕದಲ್ಲಿ 1,000 ನಿಗದಿ ಮಾಡಲಾಗಿದೆ.