Site icon Vistara News

Karnataka Election 2023: ಏ.5ರಿಂದ ಅಖಾಡಕ್ಕೆ ಇಳಿಯುವೆ: ಆನಂದ ಅಸ್ನೋಟಿಕರ್

Anand Asnotikar Ankola

#image_title

ಅಂಕೋಲಾ: “ಜೆಡಿಎಸ್‌ನಲ್ಲಿ ಮುಂದುವರಿಯುವುದೋ ಅಥವಾ ರಾಷ್ಟ್ರೀಯ ಪಕ್ಷವೊಂದರಲ್ಲಿ ಸೇರುವುದೋ ಎಂಬ ಬಗ್ಗೆ ನಿರ್ಧಾರ ಇನ್ನೂ ಬಾಕಿ ಇದೆ. ಏ. 5 ರಿಂದ ಚುನಾವಣಾ (Karnataka Election 2023) ಪ್ರಚಾರಕ್ಕಾಗಿ ಅಖಾಡಕ್ಕೆ ಇಳಿಯುವೆ” ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ಹೇಳಿದರು.

ಅವರು ಮಂಗಳವಾರ (ಮಾ.28) ದೇವರ ದರ್ಶನಕ್ಕೆಂದು ಪಟ್ಟಣದ ಶ್ರೀ ಶಾಂತಾದುರ್ಗಾ ದೇವಸ್ಥಾನಕ್ಕೆ ಆಗಮಿಸಿದ್ದು, ಈ ವೇಳೆ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿ, ತಮ್ಮ ರಾಜಕೀಯ ನಡೆ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಈ ಬಗ್ಗೆ ಶೀಘ್ರದಲ್ಲಿಯೇ ನಿರ್ಧಾರವನ್ನು ಪ್ರಕಟ ಮಾಡುವೆ ಎಂದು ಹೇಳಿದರು.

ಗೊಂದಲದಲ್ಲಿ ಅಸ್ನೋಟಿಕರ್‌

ಕಳೆದ ನಾಲ್ಕೈದು ತಿಂಗಳ ಹಿಂದೆ ಅಂಕೋಲಾಕ್ಕೆ ಆಗಮಿಸಿದ್ದ ವೇಳೆ ಅವರು ರಾಷ್ಟ್ರೀಯ ಪಕ್ಷವೊಂದಕ್ಕೆ ಸೇರುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಇಂದಿನ ಅವರ ಹೇಳಿಕೆ ಜೆಡಿಎಸ್ ಕಾರ್ಯಕರ್ತರಲ್ಲಿ ಜಿಜ್ಞಾಸೆ ಮೂಡಿಸಿತಾದರೂ ಅವರ ಅಭಿಮಾನಿಗಳು ಆನಂದ ಅವರು ಜೆಡಿಎಸ್ ಪಕ್ಷದಿಂದಲೇ ಸ್ಪರ್ಧಿಸುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಆನಂದ ಅವರ ಹೇಳಿಕೆ ಬಹಳಷ್ಟು ಕುತೂಹಲಕ್ಕೆ ಕಾರಣವಾಗಿದ್ದು ಕಾಂಗ್ರೆಸ್ ಸೇರುತ್ತಾರೋ ಅಥವಾ ಬಿಜೆಪಿ ಸೇರುತ್ತಾರೋ ಅಥವಾ ಜೆಡಿಎಸ್‌ನಿಂದಲೇ ಪ್ರಬಲ ಪೈಪೋಟಿ ನೀಡುತ್ತಾರೋ ಎನ್ನುವುದನ್ನು ಏ. 5ರವರೆಗೆ ಕಾದು ನೋಡಬೇಕಾಗಿದೆ. ಈ ವೇಳೆ ಜೆಡಿಎಸ್ ತಾಲೂಕು ಅಧ್ಯಕ್ಷ ಸಂದೀಪ್ ಬಂಟ ಹಾಗೂ ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: Karnataka Election 2023: ಜೆಡಿಎಸ್‌-ಬಿಜೆಪಿಯಿಂದ ಈ ಬಾರಿಯೂ ಮ್ಯಾಚ್‌ ಫಿಕ್ಸಿಂಗ್‌: ಸಿದ್ದರಾಮಯ್ಯ

Exit mobile version