ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿಗರ ಮನ ಗೆಲ್ಲಲು ಬಿಜೆಪಿ ಆಯೋಜಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ಭಾನುವಾರದ (ಮೇ 7) ಮೆಗಾ ರೋಡ್ ಶೋ ಮುಕ್ತಾಯಗೊಂಡಿದೆ. ಬೆಳಗ್ಗೆ ಒಂದಿಷ್ಟು ಮಳೆ ಮೋಡವಿದ್ದರೂ ರೋಡ್ ಶೋ ಆರಂಭವಾಗುವ ಹೊತ್ತಿಗೆ ಬಿಸಿಲು ಬಂತು. ನ್ಯೂ ತಿಪ್ಪೇಸಂದ್ರದಿಂದ ಟ್ರಿನಿಟಿ ಸರ್ಕಲ್ವರೆಗೆ 6.5 ಕಿ.ಮೀ. ಕ್ರಮಿಸಿದ ರೋಡ್ ಶೋ ಭಾರಿ ಜನಾಕರ್ಷಣೆ ಪಡೆಯಿತು. ಮೋದಿ ಅವರು ರೋಡ್ ಶೋ ಮುಗಿಸಿ ಶಿವಮೊಗ್ಗದತ್ತ ಪಯಣ ಬೆಳೆಸಿದರು.
ಕಾಂಗ್ರೆಸ್ ಸುಳ್ಳಿನ ಬಂಡಲ್, ಮೋದಿ ಕಿಂಡಲ್
ನಂಜನಗೂಡಿನಲ್ಲಿ ಮೋದಿ ಸಮಾವೇಶ
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ
“ಕಾಂಗ್ರೆಸ್ ಲಿಂಗಾಯತರಿಗೆ, ಒಬಿಸಿಯವರಿಗೆ ಅವಮಾನ ಮಾಡಿದೆ”
“ಕಾಂಗ್ರೆಸ್ ಇದ್ದಾಗ ಸರ್ಕಾರದ ಶೇ.85ರಷ್ಟು ಹಣ ಪೋಲಾಗುತ್ತಿತ್ತು”
“ಡಬಲ್ ಎಂಜಿನ್ ಸರ್ಕಾರವು ಅಭಿವೃದ್ಧಿಗೆ ಆದ್ಯತೆ ನೀಡಿದೆ”
“ರಾಜ್ಯವನ್ನು ನಂಬರ್ 1 ಮಾಡಲು ಬಿಜೆಪಿಗೆ ಮತ ನೀಡಿ”
ನಂಜನಗೂಡಿನಲ್ಲಿ ನರೇಂದ್ರ ಮೋದಿ ಹೇಳಿಕೆ
ಮಂಗಳೂರಿಗೆ ಪ್ರಿಯಾಂಕ ಗಾಂಧಿ
ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಮಂಗಳೂರಿಗೆ ಆಗಮಿಸಿದ್ದಾರೆ. ಅವರು ಮೂಡಬಿದ್ರೆ ತಾಲೂಕಿನ ಮುಲ್ಕಿಯಲ್ಲಿ ಕಾಂಗ್ರೆಸ್ನ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ.
ಶಿವಮೊಗ್ಗದಲ್ಲಿ ಮೋದಿ ಭಾಷಣ ಅಂತ್ಯ
ಶಿವಮೊಗ್ಗದಲ್ಲಿ ಪ್ರಧಾನಿ ಮೋದಿ ಅವರ ಪ್ರಚಾರ ಭಾಷಣ ಅಂತ್ಯವಾಗಿದೆ.
ಮುಖ್ಯವಾಗಿ ಅಡಿಕೆ ಆಮದು ಶುಲ್ಕವನ್ನು ಕೇಂದ್ರ ಸರ್ಕಾರ ಹೆಚ್ಚಿಸಿರುವುದನ್ನು ಪ್ರಸ್ತಾಪಿಸಿ ಮೋದಿ ಭಾಷಣ ಮಾಡಿದ್ದಾರೆ.
ಪ್ರಧಾನಿ ಮೋದಿ ಅವರ ಭಾನುವಾರದ ಮೆಗಾ ರೋಡ್ ಶೋ ಅಂತ್ಯ
ನ್ಯೂ ತಿಪ್ಪೇಸಂದ್ರದಿಂದ ಆರಂಭಗೊಂಡ ರೋಡ್ ಶೋ 6.5 ಕಿ. ಮೀ. ಕ್ರಮಿಸಿ ಟ್ರಿನಿಟಿ ಸರ್ಕಲ್ ನಲ್ಲಿ ಅಂತ್ಯಗೊಂಡಿದೆ
ಸಿಎಂಹೆಚ್ ರೋಡ್ ಆದರ್ಶ ಜಂಕ್ಷನ್ ಬಳಿ ಆಗಮಿಸಿದ ಮೋದಿ
ರಸ್ತೆ ಬದಿಯಲ್ಲಿರೋ ಬಿಜೆಪಿ ಕಾರ್ಯಕತ್ತರು ಹಾಗೂ ಅಭಿಮಾನಿಗಳಿಂದ ಪುಷ್ಪ ನಮನ, ಕಲಾ ತಂಡಗಳಿಂದ ಅದ್ದೂರಿ ಸ್ವಾಗತ
ಜನರತ್ತ ಹೂ ಚೆಲ್ಲಿದ ಮೋದಿ, ಮೋದಿ ಮೋದಿ ಎಂದು ಜೈಕಾರ ಕೂಗುತ್ತಿರೋ ಜನ