ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿಗರ ಮನ ಗೆಲ್ಲಲು ಬಿಜೆಪಿ ಆಯೋಜಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ಭಾನುವಾರದ (ಮೇ 7) ಮೆಗಾ ರೋಡ್ ಶೋ ಮುಕ್ತಾಯಗೊಂಡಿದೆ. ಬೆಳಗ್ಗೆ ಒಂದಿಷ್ಟು ಮಳೆ ಮೋಡವಿದ್ದರೂ ರೋಡ್ ಶೋ ಆರಂಭವಾಗುವ ಹೊತ್ತಿಗೆ ಬಿಸಿಲು ಬಂತು. ನ್ಯೂ ತಿಪ್ಪೇಸಂದ್ರದಿಂದ ಟ್ರಿನಿಟಿ ಸರ್ಕಲ್ವರೆಗೆ 6.5 ಕಿ.ಮೀ. ಕ್ರಮಿಸಿದ ರೋಡ್ ಶೋ ಭಾರಿ ಜನಾಕರ್ಷಣೆ ಪಡೆಯಿತು. ಮೋದಿ ಅವರು ರೋಡ್ ಶೋ ಮುಗಿಸಿ ಶಿವಮೊಗ್ಗದತ್ತ ಪಯಣ ಬೆಳೆಸಿದರು.
ಇಂದಿರಾ ನಗರ 100 ಫೀಟ್ ಸರ್ಕಲ್ ಗೆ ಪಿಎಂ ನರೇಂದ್ರ ಮೋದಿ ರೋಡ್ ಶೋ ಆಗಮನ
80 feet ಜಂಕ್ಷನ್ಗೆ ತಲುಪಿದ ಮೋದಿ ರೋಡ್ ಶೋ
ಎಚ್ಎಎಲ್ ಎರಡನೇ ಹಂತಕ್ಕೆ ಆಗಮಿಸಿದ ರೋಡ್ ಶೋ
ಮೋದಿ ರೋಡ್ಶೋನಲ್ಲಿ ಜನರ ಸಂಭ್ರಮ
ಭಾನುವಾರದ ಮೆಗಾ ರೋಡ್ ಶೋ ಆರಂಭ
ಎರಡನೇ ದಿನದ ಮೋದಿ ಮೇಗಾ ರೋಡ್ ಶೋ ನ್ಯೂ ತಿಪ್ಪಸಂದ್ರದ ಕೆಂಪೇಗೌಡ ವೃತ್ತದಿಂದ ರೋಡ್ ಶೋ ಆರಂಭ.
ಕೆಂಪೇಗೌಡರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ಪಿಎಂ ಬಳಿಕ ಬಳಿಕ ತೆರದ ವಾಹನ ಏರಿ ಜನರತ್ತ ಕೈ ಬೀಸುತ್ತಾ ಸಾಗುತ್ತಿದ್ದಾರೆ.
ಮೋದಿ ಜೊತೆಗೆ ರೋಡ್ ಶೋದಲ್ಲಿ ಸಂಸದ ರಾಜೀವ ಚಂದ್ರಶೇಖರ್, ಪಿಸಿ ಮೋಹನ್ ಭಾಗಿಯಾಗಿದ್ದಾರೆ.