ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿಗರ ಮನ ಗೆಲ್ಲಲು ಬಿಜೆಪಿ ಆಯೋಜಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ಭಾನುವಾರದ (ಮೇ 7) ಮೆಗಾ ರೋಡ್ ಶೋ ಮುಕ್ತಾಯಗೊಂಡಿದೆ. ಬೆಳಗ್ಗೆ ಒಂದಿಷ್ಟು ಮಳೆ ಮೋಡವಿದ್ದರೂ ರೋಡ್ ಶೋ ಆರಂಭವಾಗುವ ಹೊತ್ತಿಗೆ ಬಿಸಿಲು ಬಂತು. ನ್ಯೂ ತಿಪ್ಪೇಸಂದ್ರದಿಂದ ಟ್ರಿನಿಟಿ ಸರ್ಕಲ್‌ವರೆಗೆ 6.5 ಕಿ.ಮೀ. ಕ್ರಮಿಸಿದ ರೋಡ್ ಶೋ ಭಾರಿ ಜನಾಕರ್ಷಣೆ ಪಡೆಯಿತು. ಮೋದಿ ಅವರು ರೋಡ್ ಶೋ ಮುಗಿಸಿ ಶಿವಮೊಗ್ಗದತ್ತ ಪಯಣ ಬೆಳೆಸಿದರು.
ರಾಜಭವನದಿಂದ ನ್ಯೂ ತಿಪ್ಪೇಸಂದ್ರದ ಕಡೆಗೆ ಹೊರಟ ಕ್ಷಣ
ಶಿವಮೊಗ್ಗ, ನಂಜನಗೂಡಿನಲ್ಲೂ ಇಂದು ಮೋದಿ ಕಮಾಲ್
ಬೆಂಗಳೂರು/ ಶಿವಮೊಗ್ಗ/ ಮೈಸೂರು: ರಾಜಧಾನಿಯಲ್ಲಿ ಇಂದು ಎರಡನೇ ಸುತ್ತಿನ ಮೆಗಾ ರೋಡ್ ಶೋ ನಡೆಸುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ಅದನ್ನು ಮುಗಿಸಿ ಶಿವಮೊಗ್ಗ ಹಾಗೂ ನಂಜನಗೂಡುಗಳಲ್ಲಿ ನಡೆಯಲಿರುವ ಬೃಹತ್ ಪ್ರಚಾರ ಕಾರ್ಯಕ್ರಮಗಳಲ್ಲೂ ಭಾಗವಹಿಸಲಿದ್ದಾರೆ.
9.50ಕ್ಕೆ ರಾಜಭವನದಿಂದ ಹೊರಡಲಿದ್ದಾರೆ ನರೇಂದ್ರ ಮೋದಿ
ಈ ಹಿಂದಿನ ಪ್ಲ್ಯಾನ್ ಪ್ರಕಾರ ಪ್ರಧಾನಿ ಮೋದಿ ಅವರು ಅವರು ಟ್ರಿನಿಟಿ ಸರ್ಕಲ್ ಬಳಿಯ ಹೆಲಿಪ್ಯಾಡ್‌ನಿಂದ ರೋಡ್ ಶೋ ಆರಂಭವಾಗಲಿರುವ ನ್ಯೂ ತಿಪ್ಪಸಂದ್ರಕ್ಕೆ ಹೆಲಿಕಾಪ್ಟರ್ ಮೂಲಕ ಹೋಗಬೇಕಾಗಿತ್ತು. ಆದರೆ, ಈಗ ಮಳೆಯ ವಾತಾವರಣ ಇರುವುದರಿಂದ ರಸ್ತೆ ಮಾರ್ಗವಾಗಿಯೇ ಸಂಚರಿಸಲಿದ್ದಾರೆ.
ಮೋದಿ ಅವರು ನ್ಯೂ ತಿಪ್ಪಸಂದ್ರಕ್ಕೆ ತೆರಳುವ ದಾರಿ ಇದು:
ರಾಜಭವನ
ಸಿಟಿಓ ಸರ್ಕಲ್
ಮಣಿಪಾಲ್ ಸೆಂಟರ್
ಟ್ರಿನಿಟಿ ರೈಟ್
ಓಲ್ಡ್ ಏರ್ಪೋರ್ಟ್ ರೋಡ್
ನ್ಯೂ ತಿಪ್ಪಸಂದ್ರ
ಪತ್ರಕರ್ತ ದಿನೇಶ್ ಅಮಿನ್ ಮಟ್ಟು ವಿರುದ್ಧ ಕೇಸ್
ಬಿ.ಎಲ್.ಸಂತೋಷ್ ಕುರಿತು ಅವಹೇಳನಕಾರಿ ಪೋಸ್ಟ್
ಮಟ್ಟು ಸೇರಿ ಐವರ ವಿರುದ್ಧ ಬಿಜೆಪಿ ದೂರು
ದಿನೇಶ್ ಅಮಿನ್ ಮಟ್ಟು, ಬಿಂದು ಗೌಡ ಸೇರಿ ಐವರ ವಿರುದ್ಧ ಕೇಸ್
ಕಾಂಗ್ರೆಸ್‌ಗೆ ವಿಎಚ್‌ಪಿ ಲೀಗಲ್ ನೋಟಿಸ್
ಬಜರಂಗದಳ ನಿಷೇಧದ ಕುರಿತು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಉಲ್ಲೇಖ
ಕಾಂಗ್ರೆಸ್‌ನಿಂದ ಮಾನಹಾನಿ ಎಂದು ನೋಟಿಸ್ ನೀಡಿದ ವಿಎಚ್‌ಪಿ
100 ಕೋಟಿ ರೂ. ಪರಿಹಾರ ಕೇಳಿ ನೋಟಿಸ್ ಜಾರಿ
ಇದುವರೆಗೆ ನೋಟಿಸ್ ಕುರಿತು ಪ್ರತಿಕ್ರಿಯೆ ನೀಡದ ಕಾಂಗ್ರೆಸ್