ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿಗರ ಮನ ಗೆಲ್ಲಲು ಬಿಜೆಪಿ ಆಯೋಜಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ಭಾನುವಾರದ (ಮೇ 7) ಮೆಗಾ ರೋಡ್ ಶೋ ಮುಕ್ತಾಯಗೊಂಡಿದೆ. ಬೆಳಗ್ಗೆ ಒಂದಿಷ್ಟು ಮಳೆ ಮೋಡವಿದ್ದರೂ ರೋಡ್ ಶೋ ಆರಂಭವಾಗುವ ಹೊತ್ತಿಗೆ ಬಿಸಿಲು ಬಂತು. ನ್ಯೂ ತಿಪ್ಪೇಸಂದ್ರದಿಂದ ಟ್ರಿನಿಟಿ ಸರ್ಕಲ್‌ವರೆಗೆ 6.5 ಕಿ.ಮೀ. ಕ್ರಮಿಸಿದ ರೋಡ್ ಶೋ ಭಾರಿ ಜನಾಕರ್ಷಣೆ ಪಡೆಯಿತು. ಮೋದಿ ಅವರು ರೋಡ್ ಶೋ ಮುಗಿಸಿ ಶಿವಮೊಗ್ಗದತ್ತ ಪಯಣ ಬೆಳೆಸಿದರು.
ಶಿರಸಿ ಸರ್ಕಲ್‌ನಲ್ಲಿ ಜಾನಪದ ಕಲಾ ತಂಡಗಳ ಪ್ರದರ್ಶನ
ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋನಲ್ಲಿ ಭಾಗವಹಿಸಲಿರುವ ಆಂಜನೇಯ ವೇಷಧಾರಿ.
ರಾಜಭವನದಿಂದ ಹೊರಟ ಪ್ರಧಾನಿ ಮೋದಿ
ರಾಜಭವನದಿಂದ ಮೇಕ್ರಿ ಸರ್ಕಲ್ ನತ್ತ ಪ್ರಧಾನಿ ಮೋದಿ ಪ್ರಯಾಣ. ಮೇಖ್ರಿ ಸರ್ಕಲ್‌ನಿಂದ ಜೆ.ಪಿ. ನಗರಕ್ಕೆ ಮೋದಿ ಹೆಲಿಕಾಪ್ಟರ್‌ನಲ್ಲಿ ಸಾಗಲಿದ್ದಾರೆ.
ಕಾಡು ಮಲ್ಲೇಶ್ವರ ಸ್ವಾಮಿ ದರ್ಶನ ಮಾಡಲಿರುವ ಮೋದಿ
ಬೆಂಗಳೂರಿನಿಂದ ಜೆ.ಪಿ. ನಗರದಿಂದ ಮಲ್ವೇಶ್ವರದ ವರೆಗೆ ಬೃಹತ್ ರೋಡ್ ಶೋ ನಡೆಸಲಿರುವ ಪ್ರಧಾನಿ ನರೇಂದ್ರ ಮೋದಿ ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿರುವ ಕಾಡುಮಲ್ಲೇಶ್ವರ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಹೀಗಾಗಿ ದೇವಸ್ಥಾನದ ಬಳಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ.