Site icon Vistara News

Karnataka Election 2023 Live Updates: ಚಿತ್ತಾಪುರದಲ್ಲಿ ಮೇ 6ರಂದು ನಡೆಯಬೇಕಿದ್ದ ಮೋದಿ ಸಮಾವೇಶ ರದ್ದು

Karnataka Election 2023 Live updates Check details In Kannada

ಬೆಂಗಳೂರು: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ (Karnataka Election 2023) ಮೇ 10ರಂದು ನಡೆಯಲಿದ್ದು, 13ರಂದು ಫಲಿತಾಂಶ ಹೊರಬೀಳಲಿದೆ. ಬಿಜೆಪಿ, ಕಾಂಗ್ರೆಸ್​, ಜೆಡಿಎಸ್​ ಸೇರಿ ಇನ್ನಿತರ ಕೆಲವು ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿವೆ. ಬಿಜೆಪಿ ಪಕ್ಷ ಈಗಾಗಲೇ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಇಂದು ಕಾಂಗ್ರೆಸ್​ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.

B Somashekhar

ಚಿತ್ತಾಪುರದಲ್ಲಿ ನಡೆಯಬೇಕಿದ್ದ ಮೋದಿ ಸಮಾವೇಶ ರದ್ದು

ಮೇ 6ರಂದು ನಡೆಬೇಕಿದ್ದ ಚುನಾವಣೆ ರ‍್ಯಾಲಿ

ಚಿತ್ತಾಪುರ ಬಿಜೆಪಿ ಅಭ್ಯರ್ಥಿ ವಿರುದ್ಧ ಕ್ರಿಮಿನಲ್‌ ಕೇಸ್‌ ಹಿನ್ನೆಲೆ ರದ್ದು?

ಮಣಿಕಂಠ ರಾಠೋಡ್‌ ವಿರುದ್ಧ ಹಲವು ಕ್ರಿಮಿನಲ್‌ ಕೇಸ್‌ ದಾಖಲು

ಇದೇ ಕಾರಣಕ್ಕಾಗಿ ಮೋದಿ ಸಮಾವೇಶ ರದ್ದು ಎಂಬ ವರದಿ

B Somashekhar

ಖರ್ಗೆ ಕೋಟೆ ಕಬ್ಜ ಮಾಡಿದ ಮೋದಿ

ಕಲಬುರಗಿಯಲ್ಲಿ ಪ್ರಧಾನಿ ಬೃಹತ್‌ ರೋಡ್‌ ಶೋ

ಮೋದಿ ಅವರಿಗೆ ಹೂಮಳೆ ಸುರಿಸಿ ಅಭಿಮಾನ ಮೆರೆದ ಜನ

ಬಿಸಿಲನಾಡಿನಲ್ಲಿ ಚುನಾವಣೆ ಕಾವು ಮತ್ತಷ್ಟು ಏರಿಕೆ

B Somashekhar

ಸೀನಿಯರ್‌ ಖರ್ಗೆ, ಜ್ಯೂನಿಯರ್‌ ಖರ್ಗೆ 'ಲಾಯಕ್‌ ನಾಯಕರು' ಎಂದ ಮೋದಿ

ಸಿಂಧನೂರು: ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಮೋದಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್‌ನ ಓಪನಿಂಗ್‌ ಬ್ಯಾಟ್ಸ್‌ಮನ್‌ ಎಂದರು. “ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಮೋದಿ ವಾಗ್ದಾಳಿ ನಡೆಸಿದರು. ಕಾಂಗ್ರೆಸ್‌ನ ಓಪನಿಂಗ್‌ ಬ್ಯಾಟ್ಸ್‌ಮನ್‌ ಆದ ಮಲ್ಲಿಕಾರ್ಜುನ ಖರ್ಗೆ ಅವರು ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರನ್ನು ಖುಷಿಪಡಿಸಲು ನನ್ನನ್ನು ವಿಷದ ಹಾವು ಎಂದರು. ಇನ್ನು ಅವರ ಪುತ್ರ ಕೂಡ ನನ್ನ ವಿರುದ್ಧ ವಾಗ್ದಾಳಿ ನಡೆಸಿದರು. ಆ ಮೂಲಕ ಇಬ್ಬರೂ ಲಾಯಕ್‌ ಎನಿಸಿದರು. ಲಾಯಕ್‌ ತಂದೆಯಂತೆ ಪುತ್ರನೂ ಲಾಯಕ್‌ ಆದರು. ಆದರೆ, ನಾನು ಇದನ್ನು ಪದೇಪದೆ ಪ್ರಸ್ತಾಪಿಸುವುದಿಲ್ಲ. ಕರ್ನಾಟಕದ ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡುವುದಿಲ್ಲ” ಎಂದು ಹೇಳಿದರು.

B Somashekhar

ಮೋದಿ ಭಾಷಣದ ಮಧ್ಯೆ ಕನ್ನಡ ಕಲರವ

ಸಿಂಧನೂರು: ಸಾಮಾನ್ಯವಾಗಿ, ಕೇಂದ್ರದ ಯಾವುದೇ ಪಕ್ಷದ ನಾಯಕರು ಕರ್ನಾಟಕಕ್ಕೆ ಬಂದಾಗ, ಕನ್ನಡದಲ್ಲಿಯೇ ಭಾಷಣ ಆರಂಭಿಸುತ್ತಾರೆ. “ನಮಸ್ಕಾರ ಕರ್ನಾಟಕ” ಎಂಬ ಪದಗಳನ್ನಷ್ಟೇ ಬಳಸುತ್ತಾರೆ. ಆದರೆ, ನರೇಂದ್ರ ಮೋದಿ ಅವರು ಸಿಂಧನೂರಿನ ಸಮಾವೇಶದಲ್ಲಿ ಮಾಡಿದ ಭಾಷಣದ ಮಧ್ಯೆ ಕನ್ನಡ ಮಾತನಾಡಿದರು. “ಸಹೋದರ ಸಹೋದರಿಯರೇ”, “ಸ್ನೇಹಿತರೇ”, “ಈ ಬಾರಿಯ ನಿರ್ಧಾರ, ಬಹುಮತದ ಬಿಜೆಪಿ ಸರ್ಕಾರ” ಎಂಬ ವಾಕ್ಯಗಳನ್ನು ಮೋದಿ ಕನ್ನಡದಲ್ಲಿಯೇ ಮಾತನಾಡಿದರು.

Ramaswamy Hulakodu

ಭಜರಂಗದಳ ನಿಷೇಧ ವಿಷಯ ಪ್ರಸ್ತಾಪಿಸಿದ ಮೋದಿ

ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭಜರಂಗದಳ ದಂತಹ ಸಂಘಟನೆಗಳ ನಿಷೇಧಿಸುವ ಭರವಸೆ ನೀಡಿರುವುದನ್ನು ಪ್ರಧಾನಿ ಮೋದಿ ಹೊಸಪೇಟೆಯಲ್ಲಿ ಬಹಿರಂಗ ಭಾಷಣ ಮಾಡುವಾಗ ಪ್ರಸ್ತಾಪಿಸಿದ್ದಾರೆ.

ಜೈ ಬಜರಂಗಿ ಅನ್ನುವವರನ್ನು ಬಂಧಿಸುವ ಮಾತನ್ನು ಕಾಂಗ್ರೆಸ್‌ ಆಡುತ್ತಿದೆ. ಈ ಹಿಂದೆ ಪ್ರಭು ಶ್ರೀರಾಮಚಂದ್ರರನ್ನು ಬಂಧಿಸಿಟ್ಟಿದ್ದರು. ಕಾಂಗ್ರೆಸ್ ನವರು ಹೀಗ್ಯಾಕೆ ಮಾಡುತ್ತಾರೋ ಗೊತ್ತಿಲ್ಲ. ನಮಗೆ ಪ್ರಭು ಶ್ರಿರಾಮ ಹಾಗೂ ಹನುಮಂತರು ಪೂಜ್ಯರು ಎಂದು ಮೋದಿ ಹೇಳಿದ್ದಾರೆ.

Exit mobile version