ಬಿಜೆಪಿ ಪ್ರಣಾಳಿಕೆಯ ಮುಖ್ಯಾಂಶಗಳು;
4. ಉನ್ನತ ಮಟ್ಟದ ಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ ಕರ್ನಾಟಕದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೊಳಿಸಲಾಗುತ್ತದೆ.
5. ರಾಜ್ಯದಾದ್ಯಂತ ನಿವೇಶನ ರಹಿತ/ವಸತಿ ರಹಿತ ನಿವಾಸಿಗಳಿಗೆ ಸರ್ವರಿಗೂ ಸೂರು ಯೋಜನೆಯಡಿ ಹತ್ತು ಲಕ್ಷ ವಸತಿ ನಿವೇಶನಗಳನ್ನು ಕಂದಾಯ ಇಲಾಖೆ ಮೂಲಕ ಹಂಚಿಕೆ ಮಾಡುತ್ತೇವೆ.
6. ʻಒನಕೆ ಓಬವ್ವ ಸಾಮಾಜಿಕ ನ್ಯಾಯ ನಿಧಿʼ ಯೋಜನೆಯನ್ನು ಪ್ರಾರಂಭಿಸಲಾಗುತ್ತದೆ. ಈ ಯೋಜನೆಯಡಿ ಎಸ್‌ಸಿ/ಎಸ್‌ಟಿ ಸಮುದಾಯದ ಮಹಿಳೆಯರು ಐದು ವರ್ಷಗಳ ಅವಧಿಗೆ ಮಾಡುವ ಸ್ಥಿರ ಠೇವಣಿಗಳ ಮೇಲೆ ಹತ್ತು ಸಾವಿರದವರೆಗೆ ತಾಳೆಯಾಗುವ ಠೇವಣಿ ನೀಡಲಾಗುತ್ತದೆ.
ಬಿಜೆಪಿ ಪ್ರಣಾಳಿಕೆಯ ಮುಖ್ಯಾಂಶ;
1. ಬಿಪಿಎಲ್ ಕುಟಂಬಗಳಿಗೆ ಪ್ರತಿ ವರ್ಷ ಯುಗಾದಿ, ಗಣೇಶ ಚತುರ್ಥಿ ಮತ್ತು ದೀಪಾವಳಿಗೆ ತಲಾ ಒಂದರಂತೆ 3 ಅಡುಗೆ ಅನಿಲದ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡಲಾಗುತ್ತದೆ.
2.ಕೈಗೆಟುಕುವ ದರದಲ್ಲಿ ಗುಣಮಟ್ಟದ ಮತ್ತು ಆರೋಗ್ಯಕರ ಆಹಾರದವನ್ನು ಒದಗಿಸಲು ರಾಜ್ಯದ ಪ್ರತಿ ಮಹಾನಗರ ಪಾಲಿಕೆಯ ವಾರ್ಡ್‌ಗಳಲ್ಲಿ ʻಅಟಲ್ ಆಹಾರ ಕೇಂದ್ರʼ ಸ್ಥಾಪನೆ.
3. ಪೋಷಣೆ ಯೋಜನೆಯ ಮೂಲಕ ಪ್ರತಿ ಬಿಪಿಎಲ್ ಕುಟುಂಬಗಳಿಗೆ ಪ್ರತಿದಿನ ಅರ್ಧ ಲೀಟರ್ ನಂದಿನಿ ಹಾಲು ಮತ್ತು ಪ್ರತಿ ತಿಂಗಳು ಐದು ಕೆಜಿ ಶ್ರೀ ಅನ್ನ -ಸಿರಿಧಾನ್ಯ ವನ್ನು ಒಳಗೊಂಡ ಪಡಿತರ ಕಿಟ್ ನೀಡಲಾಗುತ್ತದೆ.
ಬಿಜೆಪಿ ಪ್ರಣಾಳಿಕೆಯ ಮುಖ್ಯಾಂಶಗಳು;
– ಮೂರು ಹೊಸ ಫುಡ್ ಪ್ರೋಸೆಸಿಂಗ್ ಪಾರ್ಕ್ ಆರಂಭಿಸಲಾಗುವುದು.
– ಐದು ಹೊಸ ಅಗ್ರೋ- ಇಂಡಸ್ಟ್ರಿ ಕ್ಲಸ್ಟರ್ ರೂಪಿಸಲು ಕ್ರಮ.
– ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡಲು, ಕಲ್ಯಾಣ ಸಕ್ಯೂಟ್,ಬನವಾಸಿ ಸಕ್ಯೂಟ್, ಪರಶುರಾಮ ಸಕ್ಯೂಟ್, ಕಾವೇರಿ ಸಕ್ಯೂಟ್, ಗಾಣಗಪುರ ಕಾರಿಡಾರ್ ನಿರ್ಮಾಣ. ಇದಕ್ಕಾಗಿ 1,500 ಕೋಟಿ ವಿನಿಯೋಗಿಸಲಾಗುವುದು
ಬಿಜೆಪಿ ಪ್ರಣಾಳಿಕೆಯ ಮುಖ್ಯಾಂಶಗಳು
-ಕರ್ನಾಟಕದ ರಾಜಧಾನಿ ಬೆಂಗಳೂರು ಸಮಗ್ರ ಅಭಿವೃದ್ಧಿ, ಡಿಜಿಟಲ್ ಇನೋವೇಷನ್‌ನ ಗ್ಲೋಬಲ್ ಹಬ್ ಆಗಿ ರೂಪಿಸಲಾಗುತ್ತದೆ.
– ಬಿಎಂಟಿಸಿ ಬಸ್‌ಗಳನ್ನು ಎಲೆಕ್ಟ್ರಿಕಲ್ ವೆಹಿಕಲ್ ಆಗಿ ಪರಿವರ್ತನೆ. ಈ ಸಂಬಂಧ ಒಂದು ಸಾವಿರ ಸ್ಟಾರ್ಟ್‌ಅಪ್‌ಗಳಿಗೆ ಪ್ರೋತ್ಸಾಹ. ಎಲ್ಲೆಡೆ ಚಾರ್ಜಿಂಗ್ ಸ್ಟೇಷನ್‌ಗಳನ್ನು ತೆರೆಯಲಾಗುವುದು.
ಬಿಜೆಪಿ ಪ್ರಣಾಳಿಕೆಯ ಮುಖ್ಯಾಂಶಗಳು
– ಸಣ್ಣ ಕೈಗಾರಿಕೆಗಳ ಮತ್ತು ಐಟಿಐಗಳ ನಡುವೆ ಸಮನ್ವಯತೆ ಮೂಡಿಸಲು ಸಮನ್ವಯ ಯೋಜನೆ ಜಾರಿ.
– ಐಎಎಸ್/ಕೆಎಎಸ್/ ಬ್ಯಾಂಕ್ ಹುದ್ದೆಗಳಿಗೆ ತರಬೇತಿ ಪಡೆಯಲು ಅಭ್ಯರ್ಥಿಗಳಿಗೆ ಆರ್ಥಿಕ ನೆರವು.
– ನಮ್ಮ ಕ್ಲೀನಿಕ್‌ಗಳಿಗೆ ಡಯಾಗ್ನೋಸ್ಟಿಕ್ ಸೌಕರ್ಯಗಳನ್ನು ಒದಗಿಸಲಾಗುವುದು.