ಬಿಜೆಪಿ ಪ್ರಣಾಳಿಕೆ ಬಿಡುಗಡೆ
5 ಕೆಜಿ ಅಕ್ಕಿ ಜೊತೆಗೆ 5 ಸಿರಿಧಾನ್ಯ
ವರ್ಷಕ್ಕೆ ಮೂರು ಗ್ಯಾಸ್ ಸಿಲಿಂಡರ್ ಉಚಿತ
ಬಿಜೆಪಿಯ ಪ್ರಣಾಳಿಕೆ ಬಿಡುಗಡೆಯಾಗಿದೆ….
#WATCH | BJP national president JP Nadda releases party's vision document/manifesto for Karnataka elections in Bengaluru. pic.twitter.com/qm2wyGdppZ
— ANI (@ANI) May 1, 2023
ಬಿಜೆಪಿಯ ಪ್ರಣಾಳಿಕೆ ಬಿಡುಗಡೆ
ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಉಪಸ್ಥಿತಿಯಲ್ಲಿ ಬಿಜೆಪಿಯ ಪ್ರಣಾಳಿಕೆ ಬಿಡುಗಡೆಗೊಂಡಿದೆ.
ಮೋದಿಯವರನ್ನು ನಾಲಾಯಕ್ ಎಂದ ಪ್ರಿಯಾಂಕ ಖರ್ಗೆ
ಚಿತ್ತಾಪುರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಕಾಂಗ್ರೆಸ್ ನಾಯಕ ಪ್ರಿಯಾಂಕ ಖರ್ಗೆ ಪ್ರಧಾನಿ ಮೋದಿ ಅವರನ್ನು ನಾಲಾಯಕ್ ಎಂದು ಕರೆದಿದ್ದಾರೆ.
ಬಂಜಾರ ಸಮುದಾಯಕ್ಕೆ ಪ್ರಧಾನಿ ಮೋದಿ ನಿಮ್ಮ ಮಗ ದೆಹಲಿಯಲ್ಲಿ ಕುಳಿತಿದ್ದಾನೆ ಎಂದು ಹೇಳಿದ್ದರು. ಇದನ್ನು ಪ್ರಸ್ತಾಪಿಸಿದ ಪ್ರಿಯಾಂಕ ಖರ್ಗೆ, ʻಇಂತಹ ನಾಲಾಯಕ್ ಮಗ ಇದ್ದರೆ ಮನೆ ನಡೆಸೊಕೆ ಆಗುತ್ತಾ….? ʼ ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಪರ ಪ್ರಚಾರಕ್ಕೆ ನಟಿ ರಮ್ಯಾ, ದುನಿಯಾ ವಿಜಿ
ಚಾಮರಾಜನಗರ: ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪ್ರಚಾರಕ್ಕೆ ತಾರಾ ಮೆರುಗು ಬರಲಿದ್ದು, ಮೇ 4ರಂದು ಭರ್ಜರಿ ರೋಡ್ ಶೋ ನಡಸಲಿದ್ದಾರೆ. ಇದರಲ್ಲಿ ನಟಿ, ಮಾಜಿ ಸಂಸದೆ ರಮ್ಯಾ ಹಾಗೂ ದುನಿಯಾ ವಿಜಿ ಭಾಗಿಯಾಗಲಿದ್ದಾರೆ.