Site icon Vistara News

Karnataka election 2023: ಮಸ್ಕಿ ಬೈಲಗುಡ್ಡ ಗ್ರಾಮದ ನರೇಗಾ ಕೂಲಿಕಾರರಿಗೆ ಮತದಾನ ಪ್ರತಿಜ್ಞಾ ವಿಧಿ

Karnataka election 2023 Mandatory voting oath teaching to Narega laborers of Maski Bylagudda village

ಮಸ್ಕಿ: ವಿಧಾನಸಭೆ ಚುನಾವಣೆ (Karnataka election 2023) ಹಿನ್ನೆಲೆಯಲ್ಲಿ ತಾಲೂಕಿನ ಮೆದಕಿನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೈಲಗುಡ್ಡ ಗ್ರಾಮದ ಕೆರೆ ಹೂಳು ಎತ್ತುವ ಕಾಮಗಾರಿ ಸ್ಥಳದಲ್ಲಿ ನರೇಗಾ ಕೂಲಿಕಾರರಿಗೆ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಉಚಿತ ಆರೋಗ್ಯ ತಪಾಸಣೆ

ಇದೇ ಸಂದರ್ಭದಲ್ಲಿ ಕೆಎಚ್ ಪಿಟಿ ಸಹಯೋಗದಲ್ಲಿ ಕೂಲಿಕಾರರ ಉಚಿತ ಆರೋಗ್ಯ ತಪಾಸಣೆ ಶಿಬಿರವು ಜರುಗಿತು. ಕಾರ್ಯಕ್ರಮದಲ್ಲಿ ಕೆಎಚ್ ಪಿಟಿ ತಾಲೂಕು ಸಂಯೋಜಕ ಹನುಮಂತು ಮಾತನಾಡಿ, ದಿನದಿಂದ ದಿನಕ್ಕೆ ಬಿಸಿಲಿನ ಪ್ರಖರತೆ ಹೆಚ್ಚುತ್ತಿದ್ದು, ನೀರು ಕುಡಿಯುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು. ಇತ್ತೀಚೆಗೆ ಬಿಪಿ, ಶುಗರ್ ಕಾಯಿಲೆ ಸಾಮಾನ್ಯವಾಗಿದ್ದು, ಮುಂಜಾಗ್ರತೆ‌ ವಹಿಸುವ ಮೂಲಕ ಮಾರಕ ರೋಗಗಳಿಂದ ಪಾರಾಗಬೇಕು. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು‌ ಎಂದರು.

ಐಇಸಿ ಸಂಯೋಜಕ ಜಿ. ಸತೀಶ್ ಮಾತನಾಡಿ, ಪ್ರತಿಯೊಬ್ಬರು ಮತಗಟ್ಟೆಗೆ ತೆರಳಿ ಮತ ಚಲಾಯಿಸುವ ಮೂಲಕ ಶೇಕಡಾವಾರು ಮತದಾನ ಪ್ರಮಾಣ ಹೆಚ್ಚಳಕ್ಕೆ ಕೈಜೋಡಿಸಬೇಕು ಎಂದರು.

ಇದನ್ನೂ ಓದಿ: Karnataka Election 2023: ಬಿಜೆಪಿ ಎಕ್ಸ್‌ಪೈರಿ ಮುಗಿದಿದೆ ಎಂದು ಪ್ರಧಾನಿ ಮೋದಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ

ಮಾರಲದಿನ್ನಿ ‌ಜಲಾಶಯದ ಹೂಳು ತೆರವು ಕಾಮಗಾರಿ ಸ್ಥಳದಲ್ಲಿ ಸಹಾಯಕ ನಿರ್ದೇಶಕರಾದ (ಗ್ರಾಮೀಣ ಉದ್ಯೋಗ) ಶಿವಾನಂದರಡ್ಡಿ ಪ್ರತಿಜ್ಞಾ ವಿಧಿ ಬೋಧಿಸಿದರು.

ಈ ವೇಳೆ ಮೆದಕಿನಾಳ ಗ್ರಾಪಂ ಕಾರ್ಯದರ್ಶಿ ಅಮರೇಶ, ಸಮುದಾಯ ಆರೋಗ್ಯ ಅಧಿಕಾರಿ ಸುರೇಶ್, ಸ್ವಯಂ ಸೇವಕ ಗಂಗಪ್ಪ ಹಾಗೂ ಸಂತೆಕಲ್ಲೂರು‌ ಗ್ರಾ.ಪಂ ‌ಪಿಡಿಒ ಉಮರ್, ಕಂಪ್ಯೂಟರ್ ‌ಆಪರೇಟರ್ ಬಸವಲಿಂಗ, ಬಿಎಫ್ಟಿ ಶಿವಪುತ್ರ, ಕಾಯಕ ಮಿತ್ರ ನಿರ್ಮಲಾ ಇತರರಿದ್ದರು‌.

Exit mobile version