Site icon Vistara News

Karnataka Election 2023: ದೂರದೂರಿನ ಪ್ರಯಾಣಿಕರಿಗೆ ತಟ್ಟಿದ ಎಲೆಕ್ಷನ್‌ ಬಿಸಿ; ಬಸ್ಸಿಲ್ಲದೆ ಪರದಾಟ

BMTC bus

#image_title

ಬೆಂಗಳೂರು: ವಿಧಾನಸಭೆ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗವು ಚುನಾವಣೆ ಕಾರ್ಯಗಳಿಗೆ ಹೆಚ್ಚಿನ ಬಸ್‌ಗಳನ್ನು ಬಳಸಿಕೊಳ್ಳುತ್ತಿದೆ. ಚುನಾವಣಾ ಚಟುವಟಿಕೆಗಾಗಿ ಸರ್ಕಾರಿ, ಖಾಸಗಿ, ಟ್ಯಾಕ್ಸಿ ವಾಹನಗಳನ್ನು ಬಳಕೆ ಮಾಡಲಾಗುತ್ತಿದೆ. ಇದರಿಂದಾಗಿ ದೂರುದೂರುಗಳಿಗೆ ಹೋಗುವ ಪ್ರಯಾಣಿಕರು ಪರದಾಡುವಂತಾಗಿದೆ. ಎಲೆಕ್ಷನ್ ಬಿಸಿ ಬಸ್‌ ಪ್ರಯಾಣಿಕರಿಗೆ ತಟ್ಟಿದ್ದು, ಮೆಜೆಸ್ಟಿಕ್‌ ಬಳಿ ಬಸ್‌ಗಳು ಇಲ್ಲದೆ ಪ್ರಯಾಣಿಕರು ಪರದಾಡಬೇಕಾಯಿತು. ಗಂಟೆಗಳ ಕಾಲ ನಿಲ್ದಾಣ ಬಳಿ ನಿಂತು ರೋಸಿ ಹೋದರು.

ಚುನಾವಣಾ ಕಾರ್ಯಕ್ಕೆ ಬಿಎಂಟಿಸಿ ಬಸ್‌ ಬಳಕೆ

ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ (Karnataka Election 2023) ಮೇ 10 ರಂದು ಮತದಾನ (polling day) ನಡೆಯಲಿದೆ. ಚುನಾವಣೆ ಸಲುವಾಗಿ ಹೆಚ್ಚಿನ ಬಸ್‌ಗಳನ್ನು ನಿಯೋಜನೆ ಮಾಡಲಾಗಿದೆ. ಹೀಗಾಗಿ ಮೇ 9 ಮತ್ತು 10ರಂದು ಕೆಎಸ್‌ಆರ್‌ಟಿಸಿ (KSRTC) ಬಸ್‌ಗಳ (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ) ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ನಿಗಮ ಈ ಹಿಂದೆಯೇ ಪ್ರಕಟಣೆ ಹೊರಡಿಸಿತ್ತು.

ಬಸ್‌ಗಾಗಿ ಮೆಜೆಸ್ಟಿಕ್‌ ನಿಲ್ದಾಣದಲ್ಲಿ ಕಾದುಕುಳಿತ ಪ್ರಯಾಣಿಕರು

ಹೀಗಾಗಿ ದೂರು ದೂರುಗಳಿಗೆ ಸೀಟು ಕಾಯ್ದಿರಿಸಿದವರು ನಿರಾಳರಾಗಿದ್ದರೆ, ಉಳಿದವರು ಸ್ಟ್ಯಾಂಡಿಂಗ್ ಟ್ರಾವೆಲ್ ಮೊರೆ ಹೋಗಬೇಕಾಯಿತು. ಇತ್ತ ಕೆಎಸ್‌ಆರ್‌ಟಿಸಿ ಬಸ್‌ ಸಮಸ್ಯೆ ಇರುವ ಮಾರ್ಗಗಳಿಗೆ ಬಿಎಂಟಿಸಿ ಬಸ್‌ಗಳನ್ನು ಬಳಸಿಕೊಳ್ಳಲಾಯಿತು. ತುಮಕೂರು, ಚಿಕ್ಕಬಳ್ಳಾಪುರ ಸೇರಿ ಹಲವು ಮಾರ್ಗಗಳಿಗೆ ಬಿಎಂಟಿಸಿ ಬಸ್‌ ನಿಯೋಜನೆ ಮಾಡಲಾಯಿತು.

ಬಸ್‌ಗಳಿಲ್ಲದೆ ಗಂಟೆಗಟ್ಟಲೆ ನಿಲ್ದಾಣದಲ್ಲಿ ಕಾದು ನಿಂತ ಪ್ರಯಾಣಿಕರು

ಇದನ್ನೂ ಓದಿ: Karnataka Election : ಭಾರಿ ಮಳೆ; ಮಸ್ಟರಿಂಗ್‌ ಕೇಂದ್ರದಲ್ಲಿದ್ದ ಮರ ಬಿದ್ದು ನೆಲಕ್ಕುರುಳಿದ ಟೆಂಟ್‌

ಬೆಂಗಳೂರು ಹೊರವಲಯಕ್ಕೆ ಸಹ ಸಂಚರಿಸಿದ ಬಿಎಂಟಿಸಿ ಬಸ್‌

ನಿಗಮದಲ್ಲಿ ಒಟ್ಟು 8,100 ಕೆಎಸ್​ಆರ್​ಟಿಸಿ ಬಸ್​ಗಳಿದ್ದು, ಈ ಪೈಕಿ 3,700 ಬಸ್​​ಗಳು ಚುನಾವಣಾ ಕೆಲಸಕ್ಕೆ ಮೀಸಲಿವೆ. ಮೇ 9 ಮತ್ತು 10 ರಂದು 4,400 ಕೆಎಸ್​ಆರ್​ಟಿಸಿ ಬಸ್​ಗಳು ಮಾತ್ರ ಸಂಚಾರ ಮಾಡುತ್ತವೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈ ಎರಡು ದಿನಗಳ ಕಾಲ ಕೆಎಸ್​ಆರ್​ಟಿಸಿ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

Exit mobile version