ರಾಯಚೂರು: ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ (Karnataka election 2023) ಸಂಬಂಧಿಸಿದಂತೆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಸಲ್ಲಿಕೆಯಾದ 150 ನಾಮಪತ್ರಗಳಲ್ಲಿ 71 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿದ್ದು, ಇನ್ನುಳಿದ 22 ಅಭ್ಯರ್ಥಿಗಳ ನಾಮಪತ್ರವು ತಿರಸ್ಕೃತಗೊಂಡಿವೆ ಎಂದು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ್ ತಿಳಿಸಿದ್ದಾರೆ.
ರಾಯಚೂರು ನಗರ ವಿಧಾನಸಭಾ ಕ್ಷೇತ್ರ
ಅಲ್ಪಸಂಖ್ಯಾತರು ಪ್ರಾಬಲ್ಯ ಹೊಂದಿರುವ ರಾಯಚೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 26 ಅಭ್ಯರ್ಥಿಗಳು 32 ನಾಮಪತ್ರಗಳನ್ನ ಸಲ್ಲಿಸಿದ್ದಾರೆ.ಈ ಪೈಕಿ ನಾಮಪತ್ರ ಪರಿಶೀಲನೆ ಸಭೆಯಲ್ಲಿ ಒಟ್ಟು 18 ನಾಮಪತ್ರಗಳು ಅಂಗೀಕಾರ ಆಗಿವೆ. ಇನ್ನುಳಿದ 8 ನಾಮಪತ್ರಗಳು ತಿರಸ್ಕೃತಗೊಂಡಿವೆ.
ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರ
ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 18 ನಾಮಪತ್ರಗಳ ಪೈಕಿ 8 ನಾಮಪತ್ರಗಳು ಕ್ರಮಬದ್ಧವಾಗಿವೆ. ಬಸನಗೌಡ ದದ್ದಲ್ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್), ತಿಪ್ಪರಾಜು ಹವಾಲ್ದಾರ (ಭಾರತೀಯ ಜನತಾ ಪಾರ್ಟಿ), ಸುಭಾಶ್ಚಂದ್ರ ಸಾಂಬಾಜಿ (ಆಮ್ ಆದ್ಮಿ ಪಾರ್ಟಿ), ಕೆ.ನರಸಿಂಹ ನಾಯಕ (ಜನತಾದಳ (ಜಾ), ಎಂ.ಖಾಸಿಂ ನಾಯಕ (ಕಲ್ಯಾಣ ರಾಜ್ಯ ಪ್ರಗತಿ ಪಕ್ಷ), ವೀರನಗೌಡ (ಇಂಡಿಯನ್ ಮೂವ್‌ಮೆಂಟ್ ಪಾರ್ಟಿ), ಐ.ಕುಮಾರ ನಾಯಕ (ಕರ್ನಾಟಕ ರಾಷ್ಟ್ರೀಯ ಸಮಿತಿ) ಹಾಗೂ ಬಡೇಸಾಬ್ (ಸ್ವತಂತ್ರ ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ.
ಇದನ್ನೂ ಓದಿ:Eid Mubarak: ಸಮಾಜದಲ್ಲಿ ಸೌಹಾರ್ದತೆಯ ಮನೋಭಾವ ಹೆಚ್ಚಲಿ; ಈದ್ ಉಲ್ ಫಿತರ್ ಶುಭಾಶಯ ಕೋರಿದ ಪ್ರಧಾನಿ ಮೋದಿ
ಮಾನ್ವಿ ವಿಧಾನಸಭಾ ಕ್ಷೇತ್ರ
ಮಾನ್ವಿ ವಿಧಾನಸಭೆ (ಪ.ಪಂ.) ಮೀಸಲು ಕ್ಷೇತ್ರಕ್ಕೆ ಆಯ್ಕೆ ಬಯಸಿ ಒಟ್ಟು 15 ಅಭ್ಯರ್ಥಿಗಳು 25 ನಾಮಪತ್ರಗಳನ್ನು ಸಲ್ಲಿಸಿದ್ದು, 9 ಅಭ್ಯರ್ಥಿಗಳ ನಾಮಪತ್ರಗಳು ಅಂಗೀಕಾರಗೊಂಡಿದ್ದು 6 ನಾಮಪತ್ರಗಳು ತಿರಸ್ಕೃತಗೊಂಡಿವೆ. ನಾಮಪತ್ರ ಸಲ್ಲಿಸಿದವರ ಪೈಕಿ ಬಿ.ವಿ.ನಾಯಕ (ಬಿಜೆಪಿ) ರಾಜಾವೆಂಕಟಪ್ಪನಾಯಕ (ಜೆಡಿಎಸ್) ಜಿ.ಹಂಪಯ್ಯನಾಯಕ (ಕಾಂಗ್ರೇಸ್) ರಾಜಾ ಶ್ಯಾಮಸುಂದರ ನಾಯಕ (ಎಎಪಿ) ಮುದುಕಪ್ಪ ನಾಯಕ (ಬಿಎಸ್‌ಪಿ) ಬಸವಪ್ರಭು (ಕೆಆರ್‌ಎಸ್) ಗಂಗಣ್ಣ ಸಾಹುಕಾರ (ಪಕ್ಷೇತರ) ಡಾ.ತನುಶ್ರೀ (ಪಕ್ಷೇತರ) ಪರಶುರಾಮ (ಪಕ್ಷೇತರ) ನಾಮಪತ್ರಗಳು ಕ್ರಮಬದ್ದವಾಗಿರುವುದರಿಂದ ಅಂಗೀಕಾರವಾಗಿವೆ. ಸರಿಯಾದ ದಾಖಲಾತಿಗಳು ಇಲ್ಲದ ಕಾರಣ ಗಂಗಾಧರ ನಾಯಕ, ಕೊಟ್ರೇಶಪ್ಪ ಕೋರಿ, ಮಾನಪ್ಪ ನಾಯಕ, ವಿಜಯಕುಮಾರನಾಯಕ, ರಮೇಶ್ ಬಿ., ಹನುಮಂತ ಸೇರಿದಂತೆ ಒಟ್ಟು 6 ನಾಮಪತ್ರಗಳು ತಿರಸ್ಕೃತಗೊಂಡಿವೆ.
ದೇವದುರ್ಗ ವಿಧಾನಸಭಾ ಕ್ಷೇತ್ರ
ದೇವದುರ್ಗ ವಿದಾನಸಭಾ ಕ್ಷೇತ್ರದಲ್ಲಿ ಒಟ್ಟು 13 ನಾಮಪತ್ರಗಳ ಪೈಕಿ 6 ನಾಮಪತ್ರಗಳು ಕ್ರಮಬದ್ಧವಾಗಿವೆ. ಕರೆಮ್ಮ.ಜಿ ನಾಯಕ ( ಜನತಾದಳ (ಜಾ), ಕೆ. ಶಿವನಗೌಡ ನಾಯಕ (ಭಾರತೀಯ ಜನತಾ ಪಾರ್ಟಿ), ಎ. ಶ್ರೀದೇವಿ ಆರ್. ನಾಯಕ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್), ನರಸಣ್ಣಗೌಡ ಹೊಸಮನಿ (ಬಹುಜನ ಸಮಾಜ ಪಾರ್ಟಿ), ಬಿ.ರೂಪಾ ಶ್ರೀನಿವಾಸ ನಾಯಕ (ಸ್ವತಂತ್ರ) ಹಾಗೂ ಆದೆಣ್ಣ (ಸ್ವತಂತ್ರ) ಅವರ ನಾಮಪತ್ರಗಳು ಕ್ರಮಬದ್ಧವಾಗಿವೆ.
ಲಿಂಗಸಗೂರು ವಿಧಾನಸಭಾ ಕ್ಷೇತ್ರ
ಲಿಂಗಸಗೂರು ವಿಧಾನಸಭಾ ಕ್ಷೇತ್ರದಲ್ಲಿ ಸಲ್ಲಿಕೆಯಾಗಿರುವ 19 ನಾಮಪತ್ರಗಳಲ್ಲಿ ಒಟ್ಟು 4 ನಾಮಪತ್ರಗಳು ತಿರಸ್ಕೃತವಾಗಿವೆ. ಕಾಂಗ್ರೆಸ್ ಅಭ್ಯರ್ಥಿ ಡಿ.ಎಸ್.ಹೂಲಗೇರಿ 2, ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್ 2, ಜೆಡಿಎಸ್ ಅಭ್ಯರ್ಥಿ ಸಿದ್ದು ಬಂಡಿ 3, ಬಿಎಸ್‌ಪಿ ಅಭ್ಯರ್ಥಿ ಅನಿಲ್ ಕುಮಾರ 2, ಕೆಆರ್‌ಎಸ್ ಅಭ್ಯರ್ಥಿ ವಿಜಯಕುಮಾರ ಪೋಳ್ 2, ಉತ್ತಮ ಪ್ರಜಾಕೀಯ ಅಭ್ಯರ್ಥಿ ನಾಗರಾಜ ಮೋತಿ, ಕೆಆರ್‌ಪಿಪಿ ಅಭ್ಯರ್ಥಿ ಆರ್.ರುದ್ರಯ್ಯ, ಎಎಪಿ ಅಭ್ಯರ್ಥಿ ಶಿವಪುತ್ರ ಗಾಣದಾಳ್, ಪಕ್ಷೇತರ ಅಭ್ಯರ್ಥಿ ಆರ್.ರುದ್ರಯ್ಯ ತಲಾ ಒಂದು ನಾಮಪತ್ರಗಳು ಸೇರಿ ಒಟ್ಟು 15 ನಾಮಪತ್ರಗಳು ಸ್ವೀಕೃತವಾಗಿವೆ. ಜೆಡಿಎಸ್ ಅಭ್ಯರ್ಥಿ ಗಂಗಾ ಬಂಡಿ 3, ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಅಭ್ಯರ್ಥಿ ಬಸವರಾಜ ಕುಣಿಕೆಲ್ಲೂರು 1 ನಾಮಪತ್ರ ಸೇರಿ ಒಟ್ಟು 4 ನಾಮಪತ್ರ ತಿರಸ್ಕೃತವಾಗಿವೆ.
ಸಿಂದನೂರು ವಿಧಾನಸಭಾ ಕ್ಷೇತ್ರ
ಸಿಂದನೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 29 ನಾಮಪತ್ರಗಳ ಪೈಕಿ 15 ನಾಮಪತ್ರಗಳು ಕ್ರಮಬದ್ಧವಾಗಿವೆ. ಹಂಪನಗೌಡ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್), ವೆಂಕಟರಾವ್ ನಾಡಗೌಡ (ಜನತಾದಳ (ಜಾ), ಕರಿಯಪ್ಪ.ಕೆ (ಭಾರತೀಯ ಜನತಾ ಪಾರ್ಟಿ), ಸಂಗ್ರಾಮ್ ಕೆ. (ಆಮ್ ಆದ್ಮಿ ಪಕ್ಷ), ಎನ್.ಮಲ್ಲಿಕಾರ್ಜುನ ( ಕಲ್ಯಾಣ ರಾಜ್ಯ ಪ್ರಗತಿ ಪಕ್ಷ), ನಿರುಪಾದಿ (ಕರ್ನಾಟಕ ರಾಷ್ಟೀಯ ಸಮಿತಿ), ನಿಜಗುಣಯ್ಯ (ಉತ್ತಮ ಪ್ರಜಾಕೀಯ ಪಾರ್ಟಿ), ಮಾಬುಸಾಬ (ಸಿಪಿಐಎಂಎಲ್ (ರೆಡ್ ಸ್ಟಾರ್), ಬಸವರಾಜ (ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ), ಉಳಿದಂತೆ ಎನ್.ರಮನಿ, ಬಸನಗೌಡ ಬಾದರ್ಲಿ, ಮ.ಲಿಯಾಖತ್ ಆಹ್ಮದ್, ಶರಣಪ್ಪ, ಪಂಪನಗೌಡ ಬಾದರ್ಲಿ, ಬಸವರಾಜ ಬಾದರ್ಲಿ (ಸ್ವತಂತ್ರ) ಅವರ ನಾಮಪತ್ರಗಳು ಕ್ರಮಬದ್ಧವಾಗಿವೆ.
ಮಸ್ಕಿ ವಿಧಾನಸಭಾ ಕ್ಷೇತ್ರ
ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 10 ನಾಮಪತ್ರಗಳ ಪೈಕಿ 7 ನಾಮಪತ್ರಗಳು ಕ್ರಮಬದ್ಧವಾಗಿವೆ. ಪ್ರತಾಪ್‌ಗೌಡ ಪಾಟೀಲ್ (ಭಾರತೀಯ ಜನತಾ ಪಾರ್ಟಿ), ಬಸನಗೌಡ ತುರ್ವಿಹಾಳ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್), ರಾಘವೇಂದ್ರ ನಾಯಕ ಬಳಗನೂರು (ಜನತಾದಳ(ಜಾ), ಗಂಗಮ್ಮ ಅಂಕುಶದೊಡ್ಡಿ (ಕರ್ನಾಟಕ ರಾಷ್ಟ್ರೀಯ ಸಮಿತಿ), ಸೋಮನೌಡ (ಸ್ವತಂತ್ರ), ಸಣ್ಣ ಶ್ಯಾಮಣ್ಣ ಹಿರೇಬೇರ್ಗಿ (ಸ್ವತಂತ್ರ) ಹಾಗೂ ಹನುಮಂತಪ್ಪ (ಸ್ವತಂತ್ರ) ಅವರ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಅವರು ತಿಳಿಸಿದ್ದಾರೆ.