Site icon Vistara News

Karnataka Election 2023: ಮತಎಣಿಕೆ ದಿನ 144 ಸೆಕ್ಷನ್‌ ಜಾರಿ; ಮೆರವಣಿಗೆ ಮಾಡುವಂತಿಲ್ಲ, ಪಟಾಕಿ ಹೊಡೆಯುವಂತಿಲ್ಲ

Voting to be held on May 10; 1.56 lakh police personnel deployed for security across the state

Voting to be held on May 10; 1.56 lakh police personnel deployed for security across the state

ಬೆಂಗಳೂರು: ಸಾರ್ವತ್ರಿಕ ವಿಧಾನಸಭೆ ಚುನಾವಣೆಯ (karnataka election 2023) ಮತ ಎಣಿಕೆ (Vote counting) ಪ್ರಕ್ರಿಯೆ ಇರುವುದರಿಂದ ಬೆಂಗಳೂರು ನಗರದಾದ್ಯಂತ 144 ಸೆಕ್ಷನ್‌ ಜಾರಿ ಮಾಡಲಾಗಿದೆ. ಬೆಂಗಳೂರು ನಗರ ಪೊಲೀಸ್‌ ಆಯುಕ್ತರು (Bengaluru city police) ಆದೇಶ ಹೊರಡಿಸಿದ್ದು, ಮೇ 13ರ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಮತಎಣಿಕೆ ಸಮಯದಲ್ಲಿ ಗದ್ದಲ ಗಲಾಟೆಯಾಗುವ ಕುರಿತು ಗುಪ್ತಚರ ಇಲಾಖೆಯು ಮಾಹಿತಿ ನೀಡಿದೆ. ಮತಎಣಿಕೆ ವೇಳೆ ಸಮಾಜಘಾತುಕ ವ್ಯಕ್ತಿಗಳು, ಕೆಲವು ಕಿಡಿಗೇಡಿಗಳು, ಗೆದ್ದ ಅಥವಾ ಸೋತ ಅಭ್ಯರ್ಥಿಗಳ ಪರ/ವಿರುದ್ಧವಾಗಿ ಪ್ರತಿಭಟನೆ ಮಾಡುವ ಸಾಧ್ಯತೆ ಇದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಮತಎಣಿಕೆ ಕೇಂದ್ರಗಳ ಬಳಿ 144 ಸೆಕ್ಷನ್ ಜಾರಿ ಮಾಡಲಾಗಿದೆ.

ಯಾವುದಕ್ಕೆಲ್ಲ ನಿಷೇಧಾಜ್ಞೆ ಜಾರಿ?

ಇದನ್ನೂ ಓದಿ: Murder Case: ಬಸ್‌ನೊಳಗೆ ನುಗ್ಗಿ ಚಾಲಕನನ್ನು ಬರ್ಬರವಾಗಿ ಕೊಚ್ಚಿ ಕೊಂದ ಹಂತಕರು

ಬೆಂಗಳೂರಲ್ಲಿ ಎಲ್ಲೆಲ್ಲಿ ಮತಎಣಿಕೆ ಕೇಂದ್ರಗಳಾಗಿವೆ?

Exit mobile version