ಕೂಡ್ಲಿಗಿ: ಮತಯಂತ್ರಗಳು (voting machines) ಹೇಗೆ ಕಾರ್ಯ ನಿರ್ವಹಿಸುತ್ತವೆ ಹಾಗೂ ಅದರ ತಂತ್ರಜ್ಞಾನದ ಅರಿವು ಅವಶ್ಯ ಎಂದು ತಮಿಳುನಾಡಿನ ಚುನಾವಣಾ ವೀಕ್ಷಕರಾಗಿ ಆಗಮಿಸಿದ ಶಿವಜ್ಞಾನಂ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರ ಸಭಾಂಗಣದಲ್ಲಿ ಬುಧವಾರ ನಡೆದ ಸೆಕ್ಟರಲ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಈಗಾಗಲೇ ಚುನಾವಣೆ ಸಿದ್ಧತೆಗಳ ಕಾರ್ಯ ಭರದಿಂದ ನಡೆಯುತ್ತಿದ್ದು. ಮತಯಂತ್ರಗಳು ಹಾಗೂ ಅದರ ಕಾರ್ಯಕ್ಷಮತೆಯ ಬಗ್ಗೆ ನಿಗಾ ವಹಿಸಲಾಗಿದೆ ಎಂದರು.
ಇದನ್ನೂ ಓದಿ: Modi virtual Samvada : ಕರ್ನಾಟಕದ ವಿಕಾಸವೇ ಭಾರತದ ವಿಕಾಸ; ಮೋದಿ ಹೇಳಿದ ಆರು ಸಂಗತಿಗಳು
ಚುನಾವಣಾಧಿಕಾರಿ ಈರಣ್ಣ ಬಿರಾದಾರ್ ಮಾತನಾಡಿ, 17 ಸೆಕ್ಟರಲ್ ಅಧಿಕಾರಿಗಳನ್ನು ಚುನಾವಣಾ ನಡೆಯುವ ಮತಗಟ್ಟೆಗಳಿಗೆ ನಿಯೋಜಿಸಲಾಗಿದ್ದು. ಮತಯಂತ್ರಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತರಬೇತುದಾರ ಹುಂಡಿ ಸಿದ್ಧೇಶ್ ನೀಡಿದ್ದಾರೆ. ಸಮರ್ಪಕವಾಗಿ ಚುನಾವಣಾ ಕಾರ್ಯ ನೆರವೇರುವಂತೆ ಎಲ್ಲರೂ ನೋಡಿಕೊಳ್ಳುವುದು ಜವಬ್ದಾರಿಯಾಗಿದೆ ಎಂದರು.
174 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು ಒಬ್ಬ ಸೆಕ್ಟರಲ್ ಅಧಿಕಾರಿಗೆ ಸರಾಸರಿ 9 ಹಾಗೂ 13 ಮತಗಟ್ಟೆಗಳಿಗೆ ನಿಯೋಜಿಸಲಾಗಿದೆ. ಮತಗಟ್ಟೆಗಳಲ್ಲಿ ಯಾವ ಲೋಪವಾಗದಂತೆ ನೋಡಿಕೊಳ್ಳುವುದು ಆದ್ಯ ಕರ್ತವ್ಯವಾಗಿದೆ ಎಂದರು.
ಸೂಕ್ಷ್ಮ, ಅತಿ ಸೂಕ್ಷ್ಮ ಮತಗಟ್ಟೆಗಟ್ಟೆಗಳನ್ನು ಗುರುತಿಸಲಾಗಿದ್ದು. ಪೊಲೀಸ್ ಸಿಬ್ಬಂದಿ ಹಾಗೂ ಪ್ಯಾರಮಿಲ್ಟ್ರೀ ಪಡೆಯನ್ನು ಬಂದೋಬಸ್ತ್ ಗೆ ಕಲ್ಪಿಸಲಾಗಿದೆ. ಯಾವ ಅಡ್ಡಿ ಆತಂಕಗಳು ಎದುರಾಗದಂತೆ ನೋಡಿಕೊಂಡು ಚುನಾವಣಾ ಕಾರ್ಯವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಕೆಲವು ಅಧಿಕಾರಿಗಳು ಮತಯಂತ್ರಗಳ ಕಾರ್ಯವನ್ನು ತಾವೇ ಪ್ರಾತ್ಯಕ್ಷಿಕೆಯ ಮೂಲಕ ತಿಳಿದುಕೊಂಡರು. ಸಂದೇಹಗಳನ್ನು ನಿವಾರಿಸಿಕೊಂಡರು.
ಈ ಸಂದರ್ಭದಲ್ಲಿ ಸ್ವೀಪ್ ಸಮಿತಿ ಅಧ್ಯಕ್ಷ ವೈ. ರವಿಕುಮಾರ್, ತರಬೇತಿ ನಿಯೋಜಿತರಾದ ಜಗದೀಶ್ ಚಂದ್ರಬೋಸ್, ಕೊಟ್ರಪ್ಪರ ನಾಗರಾಜ್, ತಿಲಕ್, ಚುನಾವಣೆ ಸಿಬ್ಬಂದಿಗಳಾದ ಶಿವಕುಮಾರ್, ವಾಸುದೇವ್, ನವೀನ್ ಕುಮಾರ್ ಸೇರಿದಂತೆ ನಿಯೋಜಿಸಿದ ಸೆಕ್ಟರಲ್ ಅಧಿಕಾರಿಗಳೊಂದಿಗೆ ಸಹಾಯಕರು ಸೇರಿದಂತೆ 200ಕ್ಕೂ ಹೆಚ್ಚು ಸಿಬ್ಬಂದಿ ತರಬೇತಿಯಲ್ಲಿ ಪಾಲ್ಗೊಂಡಿದ್ದರು.