Site icon Vistara News

Karnataka Election 2023: ಗದಗ ಮಸ್ಟರಿಂಗ್‌ ಸೆಂಟರ್‌ವೊಳಗೆ ಹಾವು ಪ್ರತ್ಯಕ್ಷ; ಯಲಹಂಕದಲ್ಲಿ ತಲೆ ತಿರುಗಿ ಬಿದ್ದ ಸಿಬ್ಬಂದಿ

snake

#image_title

ಗದಗ/ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ (karnataka election) ಬುಧವಾರ (ಮೇ 10) ಮತದಾನ (polling day) ಹಿನ್ನೆಲೆಯಲ್ಲಿ ಮಸ್ಟರಿಂಗ್‌ ಕೇಂದ್ರದಲ್ಲಿ (Mustering Center) ಸಿದ್ಧತೆ ಭರದಿಂದ ಸಾಗುತ್ತಿದೆ. ಗದಗ ನಗರದ ಜೆ.ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಗಳಿಂದ ಮಸ್ಟರಿಂಗ್‌ ಸೆಂಟರ್‌ನಲ್ಲಿ ಪರಿಶೀಲನೆ ವೇಳೆ ಹಾವುವೊಂದು ಕಾಣಿಸಿಕೊಂಡು ಆತಂಕಕ್ಕೆ ಕಾರಣವಾಗಿತ್ತು. ಇನ್ನೊಂದೆಡೆ ಬೆಂಗಳೂರಿನ ಯಲಹಂಕ ಮಸ್ಟರಿಂಗ್ ಸೆಂಟರ್‌ನಲ್ಲಿ ಎಲೆಕ್ಷನ್‌ ಸೇವೆಯಲ್ಲಿದ್ದ ಸಿಬ್ಬಂದಿಯೊಬ್ಬರು ಅಸ್ವಸ್ಥಗೊಂಡಿದ್ದಾರೆ.

ಹಾವು ಹಿಡಿದ ಸಿಬ್ಬಂದಿ

ಜೆ.ಟಿ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಹಾವು ಪ್ರತ್ಯಕ್ಷವಾಗುತ್ತಿದ್ದಂತೆ ಕ್ಷಣಕಾಲ ಸಿಬ್ಬಂದಿ ಆತಂಕಕ್ಕೆ ಒಳಗಾದರು. ಕೂಡಲೇ ಉರಗ ತಜ್ಞ ಹಾಗೂ ಹೋಂಗಾರ್ಡ್ ಬುಡ್ಡೇಸಾಬ್‌ ಎಂಬುವವರು ಹಾವು ಹಿಡಿದು ರಕ್ಷಣೆ ಮಾಡಿದರು. ಈ ವೇಳೆ ಜಿಲ್ಲಾಧಿಕಾರಿ ಎಂ. ವೈಶಾಲಿಗೆ ಅವರು ಹಾವನ್ನು ಬೇರೆ ಕಡೆಗೆ ಬಿಟ್ಟು ಬರುವಂತೆ ಸೂಚನೆ ನೀಡಿದರು.

ಬಳಿಕ ಬುಧವಾರದ ಮತದಾನಕ್ಕೆ ಮತಗಟ್ಟೆಗಳಿಗೆ ಅಗತ್ಯವಿರುವ ಇವಿಎಂ, ಕಂಟ್ರೋಲ್ ಯುನಿಟ್, ವಿವಿ ಪ್ಯಾಟ್ ಸೇರಿದಂತೆ ಎಲ್ಲ ಸಾಮಗ್ರಿಗಳ ಪರಿಶೀಲನೆ ಮಾಡಲಾಯಿತು. ಎಲ್ಲ ಮತಗಟ್ಟೆಗಳಲ್ಲೂ ವಸತಿ, ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಲು ಜಿಲ್ಲಾಧಿಕಾರಿ ಸೂಚಿಸಿದರು.

ಇದನ್ನೂ ಓದಿ: Karnataka Election 2023: ಚಿಂತಾಮಣಿಯಲ್ಲಿ ಸಿಕ್ತು 12 ಲಕ್ಷ ರೂ.; ಹುಬ್ಬಳ್ಳಿ ಕಾಂಗ್ರೆಸ್‌ ನಾಯಕಿ ಮನೇಲಿ ಏನೂ ಸಿಗಲಿಲ್ಲ!

ತಲೆತಿರುಗಿ ಬಿದ್ದ ಸಿಬ್ಬಂದಿ

ಚುನಾವಣಾ ಕಾರ್ಯದಲ್ಲಿದ್ದ ಸಿಬ್ಬಂದಿ ಅಸ್ವಸ್ಥ

ವಿಧಾನಸಭೆ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಶುರುವಾಗಿದೆ. ಚುನಾವಣಾ ಆಯೋಗ ಹಾಗೂ ಬಿಬಿಎಂಪಿ ಅಧಿಕಾರಿಗಳು ಸಕಲ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆ. ಹೀಗಿರುವಾಗಲೇ ಮಂಗಳವಾರ ಬೆಂಗಳೂರಿನ ಯಲಹಂಕ ಮಸ್ಟರಿಂಗ್ ಸೆಂಟರ್‌ನಲ್ಲಿ ಎಲೆಕ್ಷನ್‌ ಡ್ಯೂಟಿಯಲ್ಲಿದ್ದ ಸಿಬ್ಬಂದಿಯೊಬ್ಬರು ಅಸ್ವಸ್ಥಗೊಂಡರು. ತಲೆ ತಿರುಗಿ ಬಿದ್ದ ಸಿಬ್ಬಂದಿಗೆ ಕೂಡಲೇ ಸ್ಥಳದಲ್ಲಿದ್ದ ಚುನಾವಣಾಧಿಕಾರಿಗಳು ಚಿಕಿತ್ಸೆ ಕೊಡಿಸಿದ್ದಾರೆ.

Exit mobile version