ಬಸವಕಲ್ಯಾಣ: ವಿಧಾನಸಭಾ ಚುನಾವಣೆಯ (Karnataka election 2023) ಸಂದರ್ಭದಲ್ಲಿ ರೌಡಿ ಶೀಟರ್ ಗಳು ಸಮಾಜದಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಮಾಡಿದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಿಪಿಐ ರಘುವೀರಸಿಂಗ್ ಠಾಕೂರ್ ಎಚ್ಚರಿಸಿದರು.
ನಗರ ಪೊಲೀಸ್ ಠಾಣೆಯಲ್ಲಿ ವಿಧಾನಸಭೆ ಚುನಾವಣೆ ನಿಮಿತ್ತ ಆಯೋಜಿಸಿದ್ದ ರೌಡಿ ಶೀಟರ್ ಪರೇಡ್ ನಲ್ಲಿ ಅವರು ಮಾತನಾಡಿದರು.
ಇದನ್ನೂ ಓದಿ: Karnataka Election 2023: ಶೆಟ್ಟರ್ ನೂರಕ್ಕೆ ನೂರಷ್ಟು ಗೆಲ್ಲುತ್ತಾರೆ; ರಕ್ತದಲ್ಲಿ ಪತ್ರ ಬರೆದು ಯಡಿಯೂರಪ್ಪಗೆ ತಿರುಗೇಟು
ರೌಡಿ ಶೀಟರ್ ಗಳು ರಾತ್ರಿ 9 ಗಂಟೆಯ ಒಳಗಾಗಿ ಮನೆ ಸೇರಬೇಕು. ರಾತ್ರಿ ವೇಳೆ ವಿನಾಕಾರಣ ರಸ್ತೆಯಲ್ಲಿ ತಿರುಗಾಡಿದರೆ ಬಂಧಿಸಿ ಜೈಲಿಗೆ ಕಳಿಸಲಾಗುವುದು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ನಗರ ಠಾಣೆ ಪಿಎಸ್ಐ ಮಹಾಂತೇಶ ಪಾಟೀಲ ಸೇರಿದಂತೆ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು