Site icon Vistara News

Karnataka election 2023: ಮುಸ್ಲಿಮರ ಮೀಸಲಾತಿ ರದ್ದು ಆದೇಶಕ್ಕೆ ಸುಪ್ರೀಂ ತಡೆ; ನ್ಯಾಯಾಲಯದ ಮೇಲೆ ವಿಶ್ವಾಸವಿದೆ: ಸಚಿವ ಕೃಷ್ಣನ್ ಪಾಲ್ ಗುರ್ಜರ್‌

Krishan Pal Gurjar talks about karnataka muslim reservation

Krishan Pal Gurjar

ಬಳ್ಳಾರಿ: ಸುಪ್ರೀಂ ಕೋರ್ಟ್ ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ಮೀಸಲಾತಿ (Karnataka Muslim Reservation) ರದ್ದತಿಗೆ ತಡೆಯಾಜ್ಞೆ ನೀಡಿದೆ. ಆದರೆ ಬಿಜೆಪಿ ಸರ್ಕಾರಕ್ಕೆ ನ್ಯಾಯಾಲಯದ ಮೇಲೆ ವಿಶ್ವಾಸವಿದೆ ಎಂದು ಕೇಂದ್ರ ಇಂಧನ ಸಚಿವ ಕೃಷ್ಣನ್ ಪಾಲ್ ಗುರ್ಜರ್‌ (Krishan Pal Gurjar) ಹೇಳಿದರು.

ನಗರದ ಎಸ್.ಪಿ ವೃತ್ತ ದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಇದೇ ತೀರ್ಪು ಅಲ್ಲ. ನ್ಯಾಯಾಲಯವು ಬಹಳಷ್ಟು ಪ್ರಕರಣಗಳಲ್ಲಿ ತಡೆಯಾಜ್ಞೆ ನೀಡುತ್ತದೆ. ಆದರೆ ನ್ಯಾಯಾಲಯದ ತೀರ್ಪು ಬಂದ ಬಳಿಕ ಬಿಜೆಪಿ ಸರ್ಕಾರವು ಅದನ್ನು ಒಪ್ಪುತ್ತದೆ. ನಾವು ಕಾಂಗ್ರೆಸ್‌ನವರಂತೆ ಅಲ್ಲ, ನ್ಯಾಯಾಲಯ ಏನೇ ನಿರ್ಧಾರ ತೆಗೆದುಕೊಂಡರೂ ಒಪ್ಪಿಕೊಳ್ಳುತ್ತೇವೆ. ಬಿಜೆಪಿ ಸರ್ಕಾರವು ಕಾಂಗ್ರೆಸ್ ಸರ್ಕಾರದಂತೆ ನ್ಯಾಯಾಂಗದ ಮೇಲೆ ಆಗಲಿ, ಸಾಂವಿಧಾನಿಕ ಸಂಸ್ಥೆಗಳ‌ ಮೇಲೆ ಆರೋಪ‌ ಮಾಡುವುದಿಲ್ಲ ಎಂದು ಕಿಡಿಕಾರಿದರು.

ಇದನ್ನೂ ಓದಿ: Actress Ramya: ಮೋಹಕ ತಾರೆ ರಮ್ಯಾ ಕನ್ನಡ ಸಿನಿಮಾ ಪಯಣಕ್ಕೆ ಈಗ 20 ವರ್ಷ

ಮುಸ್ಲಿಂ ಸಮುದಾಯದ ಒಬ್ಬರಿಗೂ ರಾಜ್ಯದಲ್ಲಿ‌‌ ಟಿಕೆಟ್ ನೀಡಿಲ್ಲ. ದೇಶದ ಯಾವ ಚುನಾವಣೆಯಲ್ಲಿಯೂ ಟಿಕೆಟ್ ‌ನೀಡಿಲ್ಲ. ಇದು ಬಿಜೆಪಿ ಸಿದ್ಧಾಂತ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಾವು ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಎದುರಿಸುತ್ತವೆ ಎಂದು ತಿಳಿಸಿದರು.

ಜಾರಿಗೊಳ್ಳದ ಗ್ಯಾರೆಂಟಿ ಯೋಜನೆಗಳು

ಕಾಂಗ್ರೆಸ್ ‌ಪಕ್ಷಕ್ಕೆ ಮತ ಕೇಳುವ ಅಧಿಕಾರ ಇಲ್ಲ, ಭ್ರಷ್ಟಾಚಾರ ಹಾಗೂ ಜೈಲಿಗೆ ಹೋಗಿದ್ದೇ ಅವರ ಸಾಧನೆ. ರಾಜ್ಯದಲ್ಲಿ ಗ್ಯಾರೆಂಟಿ ಯೋಜನೆಗಳಿಗೆ ಹಣ ಎಲ್ಲಿಂದ ಬರುತ್ತದೆ? ಈಗಾಗಲೇ ಹಿಮಾಚಲ ಪ್ರದೇಶ ಹಾಗೂ ರಾಜಸ್ಥಾನದಲ್ಲಿ‌ ನೀಡಿದ ಗ್ಯಾರೆಂಟಿ ಯೋಜನೆಗಳು ಜಾರಿಗೊಂಡಿಲ್ಲ ಎಂದು ದೂರಿದರು.

ಇದನ್ನೂ ಓದಿ: Shingrix: 50 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಸರ್ಪಸುತ್ತು ನಿವಾರಣೆಗೆ ಜಿಎಸ್‌ಕೆಯಿಂದ ಶಿಂಗ್ರಿಕ್ಸ್ ಲಸಿಕೆ ಬಿಡುಗಡೆ

ಈ ಸಂದರ್ಭದಲ್ಲಿ ಶಾಸಕ ಜಿ. ಸೋಮಶೇಖರ ರೆಡ್ಡಿ, ಜಿಲ್ಲಾಧ್ಯಕ್ಷ ಮುರಹರಿಗೌಡ, ವಿಧಾನ ಪರಿಷತ್ ಸದಸ್ಯ ವೈ.ಎಂ. ಸತೀಶ್, ಬಿಜೆಪಿ ಮುಖಂಡರಾದ ಕೋನಂಕಿ ತಿಲಕ್, ರಾಜೀವ್ ತೊಗರಿ, ಜಗನ್ನಾಥ ಹಾಗೂ ಇತರರಿದ್ದರು.

Exit mobile version