ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ (Karnataka Election) ಹಿನ್ನೆಲೆಯಲ್ಲಿ ಬಿಜೆಪಿ ದೊಡ್ಡ ಮಟ್ಟದಲ್ಲಿ ಯಾತ್ರೆ, ಜಿಲ್ಲಾ ಮಟ್ಟದ ಮೋರ್ಚಾಗಳ ಸಮಾವೇಶ, ಫಲಾನುಭವಿಗಳ ಸಮ್ಮೇಳನ, ವಿಡಿಯೊ ವ್ಯಾನ್ ಪ್ರಚಾರ, ಪ್ರಣಾಳಿಕೆ ತಯಾರಿಗೆ ಸಿದ್ಧತೆ ನಡೆಸಿದೆ. ಇದರ ಭಾಗವಾಗಿ ಚುನಾವಣೆಯ ಪೂರ್ವಸಿದ್ಧತಾ ಕಾರ್ಯಕ್ರಮಗಳ ಜವಾಬ್ದಾರಿ ಹಂಚಿಕೆಯನ್ನು ಮಾಡಿದೆ. ರಾಜ್ಯ ನಾಯಕರ ರಥ ಯಾತ್ರೆ, ಜಿಲ್ಲೆಗಳಲ್ಲಿ ಮೋರ್ಚಾಗಳ ಸಮಾವೇಶ, ಫಲಾನುಭವಿಗಳ ಸಮ್ಮೇಳನ ಸೇರಿದಂತೆ ನಾನಾ ಅಭಿಯಾನಗಳಿಗೆ ಉಸ್ತುವಾರಿಗಳ ನೇಮಕ ಮಾಡಲಾಗಿದೆ.
ನಾಲ್ಕು ತಂಡಗಳ ರಥಯಾತ್ರೆಗೂ ಮೂರು ಜನ ಉಸ್ತುವಾರಿಗಳ ನೇಮಕ ಮಾಡಲಾಗಿದೆ. ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಟೀಮ್‌ಗೆ ಅತ್ಯಂತ ಮಹತ್ವದ ಮೋರ್ಚಾಗಳ ಜಿಲ್ಲಾ ಸಮಾವೇಶ ಆಯೋಜನೆ ಜವಾಬ್ದಾರಿ ನೀಡಲಾಗಿದೆ.
ಫಲಾನುಭವಿಗಳ ಸಮ್ಮೇಳನದ ಜವಾಬ್ದಾರಿಯನ್ನು ಸಚಿವ ಹಾಲಪ್ಪ ಆಚಾರ್ ಹಾಗೂ ಎಸ್.ಟಿ. ಸೋಮಶೇಖರ್ ತಂಡಕ್ಕೆ ವಹಿಸಲಾಗಿದೆ. ವಿಡಿಯೊ ವ್ಯಾನ್ ಪ್ರಚಾರದ ಜವಬ್ದಾರಿಯನ್ನು ಎಸ್.ವಿ ರಾಘವೇಂದ್ರ ತಂಡಕ್ಕೆ ನೀಡಲಾಗಿದೆ. ಪ್ರಣಾಳಿಕೆ ತಯಾರಿ ಸಲಹಾ ಅಭಿಯಾನದ ಉಸ್ತುವಾರಿಯನ್ನು ಸಚಿವ ಕೆ. ಸುಧಾಕರ್ ಹಾಗೂ ಬಿ.ಸಿ. ನಾಗೇಶ್ ತಂಡಕ್ಕೆ ಸಿಕ್ಕಿದೆ.
ನಾಲ್ಕು ತಂಡಗಳಾಗಿ ರಥಯಾತ್ರೆ- ಸಂಚಾಲಕರ ನೇಮಕ
ರಾಜ್ಯದ ನಾಲ್ಕು ಭಾಗಗಳಲ್ಲಿ ನಾಲ್ಕು ತಂಡಗಳಾಗಿ ರಥಯಾತ್ರೆ ನಡೆಯುತ್ತಿದ್ದು, ನಾಲ್ಕು ಕಡೆಯ ರಥಯಾತ್ರೆಗಳಿಗೂ ಸಂಚಾಲಕರ ನೇಮಕವಾಗಿದೆ. ರಥಯಾತ್ರೆಯ ಪ್ರಮುಖರ ಟೀಮ್‌ನಲ್ಲಿ ಸಚಿವ ಸಿ.ಸಿ. ಪಾಟೀಲ್, ಮೇಲ್ಮನೆ ಸದಸ್ಯ ಎನ್ ರವಿಕುಮಾರ್, ಹಾಗೂ ಗೀತಾ ವಿವೇಕಾನಂದ ಅವರಿದ್ದಾರೆ.
ಯಾತ್ರೆ -1
ಎಂ. ರಾಜೇಂದ್ರ – ರಾಜ್ಯ ಉಪಾಧ್ಯಕ್ಷರು
ಎಸ್ ದತ್ತಾತ್ರಿ – ಮಾಜಿ ಜಿಲ್ಲಾ ಅಧ್ಯಕ್ಷರು, ಶಿವಮೊಗ್ಗ
ಕಿಶೋರ್ – ಜಿಲ್ಲಾ ಉಪಾಧ್ಯಕ್ಷರು ಉಡುಪಿ
ಯಾತ್ರೆ – 2
ಪರಿಷತ್ ಸದಸ್ಯ ಚಲವಾದಿ ನಾರಾಯಣಸ್ವಾಮಿ
ಜಿಲ್ಲಾ ಪ್ರಭಾರಿ ಸಚ್ಚಿದಾನಂದ
ವಿಧಾನಪರಿಷತ್ ಸದಸ್ಯ ಅ ದೇವೇಗೌಡ
ಯಾತ್ರೆ – 3
ಮಾಜಿ ಪರಿಷತ್ ಸದಸ್ಯ ಅರುಣ್ ಶಹಾಪುರ
ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಡಬ್ಬಿ
ಮಲ್ಲಿಕಾರ್ಜುನ ಬಾಳೀಕಾಯಿ ಯುವ ಮೋರ್ಚಾ
ಯಾತ್ರೆ – 4
ವಿಧಾನ ಪರಿಷತ್ ಸದಸ್ಯ ರಘುನಾಥ್ ಮಲ್ಕಾಪುರೆ, ಅಮರನಾಥ್ ಪಾಟೀಲ್, ಸಿದ್ದೇಶ್ ಪಾಟೀಲ್
ಇದನ್ನೂ ಓದಿ : Brahmin CM: ಪ್ರಲ್ಹಾದ ಜೋಶಿ ಕುರಿತ ಹೇಳಿಕೆಗೆ ಬದ್ಧ; ಸಮಾಜ ಒಡೆಯುತ್ತಿರುವುದು ಬಿಜೆಪಿ: ಎಚ್.ಡಿ. ಕುಮಾರಸ್ವಾಮಿ ಸಮರ್ಥನೆ