Site icon Vistara News

Karnataka Election | ಹೊಸದುರ್ಗ ಬಿಜೆಪಿಯಲ್ಲಿ ಭಿನ್ನಮತ; ಅವಾಚ್ಯ ಪದ ಬಳಕೆ ವಿರುದ್ಧ ಗೂಳಿಹಟ್ಟಿ ಗುಡುಗು

goolihatti ಶೇಖರ್‌ ವಾಯ್ಸ್‌ ರೆಕಾರ್ಡ್‌ ಹಾದರಗಿತ್ತಿ ಮಗ

ಚಿತ್ರದುರ್ಗ: 2023ರ ವಿಧಾನಸಭಾ ಚುನಾವಣೆ (Karnataka Election) ಸಮೀಪ ಬರುತ್ತಿರುವ ಹೊತ್ತಿನಲ್ಲಿಯೂ ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ನಾಯಕರ ನಡುವೆ ಭಿನ್ನಮತ ಮುಂದುವರಿದಿದೆ. ಅವಾಚ್ಯ ಶಬ್ದ ಬಳಕೆ ವಿರುದ್ಧ ಶಾಸಕ ಗೂಳಿಹಟ್ಟಿ ಆಕ್ರೋಶಗೊಂಡಿದ್ದು, ವಾಯ್ಸ್‌ ರೆಕಾರ್ಡ್‌ ಒಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದು, ಪಕ್ಷದ ಮುಖಂಡನ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಬಿಜೆಪಿ ಮುಖಂಡ‌ ಮಾವಿನಕಟ್ಟೆ‌ ಗುರುಸ್ವಾಮಿ ಅವರು ಹಾದರಗಿತ್ತಿ ಮಗ ಎಂಬ ಪದ ಬಳಕೆ ಮಾಡಿದ್ದಾರೆಂದು ಶಾಸಕ ಗೂಳಿಹಟ್ಟಿ ಶೇಖರ್‌ ಆರೋಪಿಸಿದ್ದು, ಇದಕ್ಕೆ ತಾಲೂಕಿನ ಜನತೆಯೇ ತಕ್ಕ ಉತ್ತರವನ್ನು ನೀಡಬೇಕು ಎಂದು ಹೇಳಿದ್ದಾರೆ.

ಕಳಪೆ‌ ರಸ್ತೆ ಕಾಮಗಾರಿ ವಿಚಾರದಲ್ಲಿ ಈ ಗಲಾಟೆ ಆರಂಭವಾಗಿದೆ ಎನ್ನಲಾಗಿದೆ. ಆ ವೇಳೆ ಶಾಸಕ ಗೂಳಿಹಟ್ಟಿ ಶೇಖರ್ ಹಾಗೂ ಬಿಜೆಪಿ ಮುಖಂಡ ಲಿಂಗಮೂರ್ತಿ ಮಧ್ಯೆ ಭಿನ್ನಮತ ಸ್ಫೋಟವಾಗಿತ್ತು. ಅಲ್ಲದೆ, ಬೆಂಬಲಿಗರ ನಡುವೆಯೂ ವಾಕ್ಸಮರಕ್ಕೆ ಕಾರಣವಾಗಿತ್ತು. ಈ ವಿಚಾರವಾಗಿ ‌ಭಾನುವಾರ ಸಚಿವ ಮಾಧುಸ್ವಾಮಿ ನೇತೃತ್ವದಲ್ಲಿ ಸಭೆ ನಡೆದಿತ್ತು. ಆ ಸಭೆಯಲ್ಲಿ ಶಾಸಕ ಶೇಖರ್ ವಿರುದ್ಧ ಗುರುಸ್ವಾಮಿ ಅವಹೇಳನ‌ವಾಗಿ ಮಾತನಾಡಿದ್ದಾರೆ ಎಂಬ ಆರೋಪ ಈಗ ಕೇಳಿಬಂದಿದೆ.

ಈಗ ಮಾವಿನಕಟ್ಟೆ‌ ಗುರುಸ್ವಾಮಿ ವಿರುದ್ಧ ಆಕ್ರೋಶಗೊಂಡಿರುವ ಶಾಸಕ ಗೂಳಿಹಟ್ಟಿ ಶೇಖರ್‌, ತಮ್ಮ ಮೇಲೆ ಬಳಕೆ ಮಾಡಲಾಗಿರುವ ಹಾದರಗಿತ್ತಿ ಮಗ ಪದಕ್ಕೆ ತಾಲೂಕಿನ ಜನತೆ ಉತ್ತರ ಕೊಡಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ | Human-Elephant conflict | ಮಾನವ-ಆನೆ ಸಂಘರ್ಷ; ಪರಿಹಾರ ದ್ವಿಗುಣಗೊಳಿಸಲು ಸಿಎಂ ಬೊಮ್ಮಾಯಿ ಸಮ್ಮತಿ

Exit mobile version