Site icon Vistara News

Karnataka Election : ಪೂಜೆ ಮಾಡುವಾಗ ಮೋದಿ ಒಳ್ಳೆದಾಗಲಿ ಎಂದು ಪ್ರಾರ್ಥಿಸಿ; ಮಹಿಳೆಯರಿಗೆ ವಿಜಯೇಂದ್ರ ಮನವಿ

Karnataka Polls Will Be A Challenge Without BSY: Says BY Vijayendra

ಬಿ.ವೈ.ವಿಜಯೇಂದ್ರ

ಚಿತ್ರದುರ್ಗ: ʻʻಮಹಿಳೆಯರು ಪ್ರತಿನಿತ್ಯ ಮನೆಯಲ್ಲಿ ಪೂಜೆ ಮಾಡುತ್ತೀರಿ. ಆಗೆಲ್ಲ ನಮ್ಮ ಮನೆಯವರಿಗೆ ಒಳ್ಳೆಯದಾಗಲಿ, ನನ್ನ ಮಕ್ಕಳಿಗೆ ಒಳ್ಳೆಯದಾಗಲಿ ಎಂದು ಕೇಳಿಕೊಳ್ಳುತ್ತೀರಿ. ಮುಂದಿನ ದಿನಗಳಲ್ಲಿ ನಮ್ಮ ಪ್ರಧಾನಿ ನರೇಂದ್ರ ಮೋದಿಗೆ ಒಳ್ಳೆಯದಾಗಲಿ, ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲಿ (Karnataka Election) ಅಂತಾ ದೇವರಿಗೆ ಹೂವು ಏರಿಸಿ ಪೂಜೆ ಮಾಡಿʼʼ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಬಿಜೆಪಿಯ ಸರ್ವ ಮೋರ್ಚಾಗಳ ಸಮಾವೇಶ ಸಂಚಾಲಕ ಬಿ.ವೈ ವಿಜಯೇಂದ್ರ ಹೇಳಿದರು.

ಚಿತ್ರದುರ್ಗದಲ್ಲಿ ನಡೆಯುತ್ತಿರುವ ಮಹಿಳಾ ಮೋರ್ಚಾ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರದ ಎಲ್ಲಾ ಸಾಧನೆಗಳನ್ನ ಮನೆ ಮನೆಗೆ ಮುಟ್ಟಿಸಬೇಕು ಅನ್ನೋ ಕಾರಣದಿಂದ ಸಮಾವೇಶಗಳನ್ನು ಮಾಡುತ್ತಿದ್ದೇವೆ ಎಂದರು.

ʻʻರಾಜ್ಯದ ರೈತ ನಾಯಕರಾಗಿರುವಂತ ಯಡಿಯೂರಪ್ಪನವರು ವಿಧಾನಸಭೆಯಲ್ಲಿ ವಿದಾಯ ಭಾಷಣ ಮಾಡುತ್ತಾ, ರಾಜ್ಯದ ರಾಜಕೀಯದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಅನ್ನೋ ಮಾತುಗಳನ್ನಾಡಿದ್ದಾರೆ. ಅದನ್ನು ಪಕ್ಷ ಪಾಲಿಸುತ್ತದೆʼʼ ಎಂದರು ಬಿ.ವೈ. ವಿಜಯೇಂದ್ರ.

ʻʻಕಾಂಗ್ರೆಸ್ ಪಕ್ಷದವರು ಚುನಾವಣೆ ಬಂದಾಗ ಉಚಿತ ವಿದ್ಯುತ್ ಕೊಡುತ್ತೇವೆ, ಗೃಹಿಣಿಯರಿಗೆ 2000 ತೂ. ಕೊಡ್ತೀವಿ ಅಂತಾ ಹೇಳ್ತಿದ್ದಾರೆ. ಸುಮಾರು 60 ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ ಪಕ್ಷ ಯಾವುದೇ ಭರವಸೆಯನ್ನು ಈಡೇರಿಸಲಿಲ್ಲ. ಈಗ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಸುಳ್ಳು ಭರವಸೆಗಳನ್ನು ಕೊಡುತ್ತಿದ್ದಾರೆʼʼ ಎಂದರು.

ವಿಜಯೇಂದ್ರ ಭಾಷಣ ಮುಗಿಯುತ್ತಿದ್ದಂತೆಯೇ ಕುರ್ಚಿಗಳೆಲ್ಲ ಖಾಲಿ

ಸಮಾವೇಶದಲ್ಲಿ ಬಿ.ವೈ.ವಿಜಯೇಂದ್ರ ಭಾಷಣ ಮುಗಿಯುತ್ತಿದ್ದಂತೆ ಮಹಿಳೆಯರೆಲ್ಲರೂ ಎದ್ದು ಊಟಕ್ಕೆ ತೆರಲಿದ ಹಿನ್ನೆಲೆಯಲ್ಲಿ ಖುರ್ಚಿಗಳು ಖಾಲಿ ಖಾಲಿಯಾದವು. ಬೆಳಗ್ಗೆ 11 ಗಂಟೆಗೆ ಆರಂಭವಾಗಬೇಕಿದ್ದ ಸಮಾವೇಶ ತಡವಾಗಿ ಶುರುವಾಗಿದ್ದರಿಂದ ಕಾದು ಕಾದು ಸುಸ್ತಾಗಿದ್ದ ಮಹಿಳೆಯರು ವಿಜಯೇಂದ್ರ ಭಾಷಣ ಮುಗಿಯುತ್ತಿದ್ದಂತೆಯೇ ಸಭಾಂಗಣದಿಂದ ಹೊರ ನಡೆದರು.

ಇದನ್ನು ಓದಿ : BY Vijayendra : ಮತ್ತೆ ಸದ್ದು ಮಾಡಿದ ಮುಂದಿನ ಸಿಎಂ ವಿಜಯೇಂದ್ರ ಪ್ರಸ್ತಾಪ ; ಬಿಜೆಪಿ ಶಾಸಕರಿಂದಲೇ ಕೇಳಿಬಂದ ಹೇಳಿಕೆ

Exit mobile version